ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 11-08-2020

 

ಕಮಲನಗರ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 09/2020, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 04-08-2020 ರಂದು ಕವಿತಾ ಗಂಡ ವಿಠಲ ಲೋಹಾರೆ ವಯ: 35 ವರ್ಷ, ಜಾತಿ: ಕಂಬಾರ, ಸಾ: ಡೋಣಗಾಂವ(ಎಮ್‌)  ರವರ ಗಂಡನಾದ ವಿಠಲ ತಂದೆ ನಾರಾಯಣ ಲೋಹಾರೆ ಇವರು ವಿಜಯಕುಮರ ದೇಶಮುಖ ರವರ ಹೊಲದಲ್ಲಿ ಸೋಯಾ ಬೆಳೆಯಲ್ಲಿನ ಹುಲ್ಲು ಕತ್ತಿಲು ಹೋಗಿ ಹುಲ್ಲು ಕಿತ್ತುತ್ತಿರುವಾಗ ಅವರ ಬಲಗೈ ತೋರಬೆರಳಿಗೆ ಹಾವು ಕಚ್ಚಿದ್ದರಿಂದ ಅವರಿಗೆ ಚಿಕಿತ್ಸೆ ಕುರಿತು ಉದಗೀರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ಚಿಕಿತ್ಸೆ ವೇಳೆಯಲ್ಲಿ ಗಂಡ ಮೃತಪಟ್ಟಿರುತ್ತಾರೆ, ತನ್ನ ಗಂಡನ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ರೀತಿಯ ಸಂಶಯ ವೈಗರೆ ಇರುವುದಿಲ್ಲ ಅಂತಾ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 10-08-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಔರಾದ(ಬಿ) ಪೊಲೀಸ್ ಠಾಣೆ ಯು.ಡಿ.ಆರ್ ಸಂ. 11/2020, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 10-08-2020 ರಂದು ಫಿರ್ಯಾದಿ ರಂಜನಾ ಗಂಡ ಮಾರುತಿ ನರೋಟೆ ಸಾ: ಔರಾದ(ಬಿ) ರವರ ಗಂಡನಾದ ಮಾರುತಿ ತಂದೆ ಬಾಜಿರಾವ ನರೋಟೆ ರವರು  ತನ್ನ ವ್ಯಾಪಾರದಲ್ಲಿ ನಷ್ಟವಾಗಿ, ಹೊಲದಲ್ಲಿ ಬಿತ್ತನೆ ಮಾಡಿದ ಬೆಳೆಯು ಸರಿಯಾಗಿ ಬೆಳೆಯದಿರುವ ಕಾರಣ ತನಗೆ ಕೃಷಿ ಕೆಲಸಕ್ಕೆ ಮಾಡಿಕೊಂಡಿದ್ದ ಸಾಲವನ್ನು ಹೇಗೆ ತೀರಿಸಬೇಕು ಎಂದು ಚಿಂತೆ ಮಾಡಿ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಬ್ಲೇಡನಿಂದ ತನ್ನ ಕೈಗಳಿಗೆ ಕಟ್ ಮಾಡಿಕೊಂಡು ಮನೆಯಲ್ಲಿನ ತಗಡದ ಕೆಳಗೆ ಹಾಕಿದ ಕಟ್ಟಿಗೆಯ ದಂಟೆಗೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 94/2020, ಕಲಂ. ಮಹಿಳೆ ಕಾಣೆ :-

ದಿನಾಂಕ 07-08-2020 ರಂದು 1000 ಗಂಟೆಯ ಸುಮಾರಿಗೆ ಫಿರ್ಯಾದಿ ನಾಗರಾಜ ತಂದೆ ಗುರುಲಿಂಗಯ್ಯಾ ಹಾಲಾ ಸಾ: ಹಳ್ಳಿಖೇಡ (ಬಿ) ರವರ ಹೆಂಡತಿಯಾದ ಮಾಣಿಕೇಶ್ವರಿ ವಯ: 34 ವರ್ಷ ಇಕೆಯು ತಮ್ಮ ಮನೆಯಿಂದ ಬೀದರ ನೌಬಾದ ಆಸ್ಪತ್ರೆಗೆ ಹೋಗಿ ಬರುತ್ತೇನೆ ಅಂತ ಹೇಳಿ ಹೋದವಳು ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾಳೆ, ತನ್ನ ಹೆಂಡತಿಯನ್ನು ಎಲ್ಲಾ ಕಡೆಗೆ ಹುಡುಕಾಡಿ ವಿಚಾರಿಸಿ ತಿಳಿದುಕೊಳ್ಳಲು ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲ, ಕಾಣೆಯಾದ ತನ್ನ ಹೆಂಡತಿಯ ಚಹರೆ ಪಟ್ಟಿ ದುಂಡು ಮುಖ, ಸದ್ರಢ ಮೈಕಟ್ಟು, ಗೋಧಿ ಮೈ ಬಣ್ಣ, ತಲೆಯ ಮೇಲೆ ಕಪ್ಪು ಕೂದಲು, ನೇರವಾದ ಮೂಗು, ಮೈಮೇಲೆ ಆರೆಂಜ್ ಬಣ್ಣದ ಸೀರೆ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 10-08-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 104/2020, ಕಲಂ. 457, 380 ಐಪಿಸಿ :-

ದಿನಾಂಕ 08-08-2020 ರಂದು 1730 ಗಂಟೆಯಿಂದ ದಿನಾಂಕ 10-08-2020 ರಂದು 0830 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಬಸವಕಲ್ಯಾಣ ಬಜಾರ ಸಬ್ ಪೋಸ್ಟ್ ಆಫೀಸಿನ ಶೇಟರ್ ಕೀಲಿ ಮುರಿದು ಒಳಗಡೆ ಪ್ರವೇಶ ಮಾಡಿ ನಗದು ಹಣ 10,428/- ರೂಪಾಯಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ಗೋದಾವರಿ ಗಂಡ ನಿತ್ಯಾನಂದ ಕೊಂಗಳೆ ವಯ: 28 ವರ್ಷ, ಜಾತಿ: ಮರಾಠಾ, ಉ: ಗ್ರಾಮೀಣ ಡಾಕ್ ಸೇವಕ, ಸಾ: ಹುಣುಸನಾಳ, ತಾ: ಹುಮನಾಬಾದ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.