ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 11-06-2020

 

ಸಂತಪೂರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 08/2020, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 10-06-2020 ರಂದು ಮಲ್ಲಿಕಾರ್ಜುನ ತಂದೆ ಸಿದ್ದಲ್ಲಿಂಗಪ್ಪಾ ಬಿರಾದಾರ ವಯ: 55 ವರ್ಷ, ಜಾತಿ: ಲಿಂಗಾಯತ, ಸಾ: ಜೋನೆಕೇರಿ ರವರು ತನ್ನ ಹೆಂಡತಿ ಸಂಗಮ್ಮಾ ಇಬ್ಬರೂ ತಮ್ಮ ಹೋಲ ಸರ್ವೆ ನಂ. 52 ನೇದರಲ್ಲಿ ಕಸ ಕಡ್ಡಿ (ಕೊಯಿಲು) ಆಯಲು ಹಾಗೂ ಕೊಯಿಲು ಆಯಿದ ಕುಂಪಿಯನ್ನು ಎತ್ತಿ ಕಟ್ಟೆಗೆ ಹಾಕಲು ಹೋಗಿದ್ದು ಹೆಂಡತಿ ಕೊಯಿಲು ಕುಂಪಿಯನ್ನು ಒಂದು ಭಟಾರದಲ್ಲಿ ತುಂಬಿಕೊಟ್ಟಿದ್ದು ಫಿರ್ಯಾದಿಯು ಎತ್ತಿಕೊಂಡು ಕಟ್ಟೆಗೆ ಹಾಕಲು ಹೋಗಿದ್ದು ಇನ್ನು ಒಂದು ಕುಂಪಿಯಲ್ಲಿ ತುಂಬುವಾಗ ಒಮ್ಮೆಲ್ಲೆ ಚಿರಿದಾಗ ಫಿರ್ಯಾದಿಯು ಕಟ್ಟೆಯಿಂದ ಓಡುತ್ತಾ ತನ್ನ ಹೆಂಡತಿ ಹತ್ತಿರ ಬಂದು ನೋಡಲು ಹೆಂಡತಿ ತಿಳಿಸಿದ್ದು ಒಂದು ವಿಷಕಾರಿ ಹಾವು ನನ್ನ ಬಲಗಡೆ ಮೋಳಕಾಲ ಕೇಳಗೆ ಪಿಂಡ್ರಿಗೆ ಕಚ್ಚಿ ಮಣ್ಣಿನ ಹೆಂಟೆಯಲ್ಲಿ ಓಡಿ ಹೋಗಿರುತ್ತದೆ ಅಂತ ತಿಳಿಸಿದ ತಕ್ಷಣ ಫಿರ್ಯಾದಿಯು ತನ್ನ ಹೆಂಡತಿಗೆ ನೋಡಿಲು ಅವಳ ಬಲಗಾಲ ಮೋಳಕಾಲ ಪಿಂಡ್ರಿಗೆ ಕಚ್ಚಿದ ಗಾಯ ಇದ್ದು ತಕ್ಷಣ ಮಗ ಚಂದ್ರಕಾಂತ ಇವನಿಗೆ ಕರೆ ಮಾಡಿ ಕರೆಯಿಸಿ ಮೋಟಾರ ಸೈಕಲ್ ಮೇಲೆ ಸಂತಪುರ ಸರಕಾರಿ ಆಸ್ಪತ್ರೆಗೆ ತಂದು ವೈಧ್ಯಾಧಿಕಾರಿಯವರಿಗೆ ತೋರಿಸಿದಾಗ ವೈಧ್ಯಾಧಿಕಾರಿಯವರು ನೋಡಿ ಮೃತಪಟ್ಟಿರುತ್ತಾರೆಂದು ಅಂತ ತಿಳಿಸಿರುತ್ತಾರೆ, ಫಿರ್ಯಾದಿಯ ಹೆಂಡತಿಗೆ ಆಸ್ಪತ್ರೆಗೆ ತರುವಾಗ ದಾರಿಯಲ್ಲಿ ಮೃತಪಟ್ಟಿದ್ದು ತನ್ನ ಹೆಂಡತಿ ಮೃತಪಟ್ಟ ಬಗ್ಗೆ ಯಾರ ಮೇಲೆಯು ಸಂಶಯ ಇರುವದಿಲ್ಲ ಅಂತ ಕೊಟ್ಟ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 94/2020, ಕಲಂ. 302, 120(ಬಿ) ಜೊತೆ 34 ಐಪಿಸಿ :-

ಫಿರ್ಯಾದಿ ಮುರಳಿ ತಂದೆ ಪುಂಡಾ ಸೂರ್ಯವಂಶಿ ವಯ: 58 ವರ್ಷ, ಜಾತಿ: ಎಸ.ಸಿ ಮಾದಿಗಾ, ಸಾ: ಕಮಲನಗರ ರವರ ಅಕ್ಕ ವಿಮಲಾಬಾಯಿ ಇವಳಿಗೆ ಮಾರುತಿ ಕರೆ ಹಖ ಕಾಲೋನಿ ಬೀದರ ಇವರೊಂದಿಗೆ ಮದುವೆ ಮಾಡಿದ್ದು, ವಿನೋದ ಇತನು ಸರಾಯಿ ಕುಡಿಯುವ ಸ್ವಭಾದವನಿದ್ದು ಮನೆಯಲ್ಲಿ ತನ್ನ ಹೆಂಡತಿ ಮಕ್ಕಳೊಂದಿಗೆ ಜಗಳ ತಕರಾರು ಆಗಾಗ ಮಾಡುವುದು ಅವಾಚ್ಯವಾಗಿ ಬೈಯುವುದು ಮಾಡುತ್ತಿದ್ದನು, ಫಿರ್ಯಾದಿಯವರು ಹಲವು ಬಾರಿ ವಿನೋದ ಇತನಿಗೆ ತನ್ನ ಹೆಂಡತಿ ಮಕ್ಕಳೊಂದಿಗೆ ಜಗಳ ಮಾಡದೆ ಸರಿಯಾಗಿ ಇರುಲು ಬುದ್ದಿವಾದ ಹೇಳಿದರು ಸಹ ಅವನು ತನ್ನ ಹೆಂಡತಿ ಮಕ್ಕಳೊಂದಿಗೆ ಆಗಾಗ ಜಗಳ ಮಾಡುತ್ತಲೆ ಬಂದಿರುತ್ತಾನೆ, ಹಿಗಿರುವಾಗ ದಿನಾಂಕ 10-6-2020 ರಂದು ಫಿರ್ಯಾದಿಯು ಮನೆಯಲ್ಲಿದ್ದಾಗ ವಿನೋದನ ತಮ್ಮ ಶಾಮ ಇವನು ಕರೆ ಮಾಡಿ ವಿನೋದ ಇತನು ಮೈಸುಟ್ಟು ಮ್ರತಪಟ್ಟಿರುತ್ತಾನೆಂದು ತಿಳಿಸಿದ ಕೂಡಲೆ ಫಿರ್ಯಾದಿಯು ಕಮಲನಗರದಿಂದ ಬೀದರನ ಹಕ್ ಕಾಲೋನಿಯಲ್ಲಿರುವ ವಿನೋದ ಇತನ ಮನೆಗೆ ಹೊಗಿ ನೋಡಲು ಮನೆಯಲ್ಲಿ ಒಂದು ಕೋಣೆಯಲ್ಲಿ ವಿನೋದನ ಮೃತ ದೇಹ ಇತ್ತು, ಮೃತ ದೇಹ ನೋಡಲು ಮೈಯಲ್ಲಾ ಸುಟ್ಟ ಗಾಯಗಳು ಆಗಿದ್ದು ಇರುತ್ತದೆ, ವಿನೋದ ಇತನು ತನ್ನ ಹೆಂಡತಿ ಮತ್ತು ಮಕ್ಕಳಿಗೆ ಕಿರುಕುಳ ನಿಡುವುದು ತನ್ನ ಮಗಳ ಮುಂದೆ ಅಸಬ್ಯವರ್ತನೆ ಮಾಡುವುದು ಅವಾಚ್ಯವಾಗಿ ಬೈಯುವುದು ಮಾಡುತ್ತಿರುವುದರಿಂದ ಅವನ ಹೆಂಡತಿ ಬಾಲಿಕಾ ಇವಳು ತನ್ನ ಗಂಡ ನಮಗೆ ನೆಮ್ಮದಿಯಾಗಿ ಜೀವನ ಮಾಡಲು ಬಿಡುತ್ತಿಲ್ಲಾ ಇವನಿಗೆ ಮುಗಿಸಿದರೆ ಮಾತ್ರ ನಾವು ನೆಮ್ಮದಿಯಾಗಿ ಜೀವಿಸಲು ಸಾದ್ಯವಾಗುತ್ತದೆ ಅಂತಾ ಹೇಳುತ್ತಿದ್ದಳು, ಅದರಂತೆ ದಿನಾಂಕ 09-06-2020 ರಂದು ರಾತ್ರಿ ಸಮಯದಲ್ಲಿ ವಿನೋದನ ಹೆಂಡತಿ ಬಾಲಿಕಾ, ಮಗಳು ಶಿಲ್ಪಾ, ಮಗ ಅರುಣ ಮತ್ತು ಇತರರು ಎಲ್ಲರೂ ಸಾ: ಹಕ್ ಕಾಲೋನಿ, ಬೀದರ ಇವರೆಲ್ಲರೂ ಕೂಡಿ ವಿನೋದ ಇತನ ಕೊಲೆ ಮಾಡುವ ಉದ್ದೇಶದಿಂದ ಒಳಸಂಚು ಮಾಡಿ ಅವನು ಮಲಗಿದ ಮೇಲೆ ದಿನಾಂಕ 09-06-2020 ರಂದು ರಾತ್ರಿ 1200 ಗಂಟೆಯಿಂದ ದಿನಾಂಕ 10-6-2020ರ ಬೆಳಗಿನ ಜಾವ 5 ಗಂಟೆಯ ಅವಧಿಯಲ್ಲಿ ವಿನೋದನ ಮೈಮೇಲೆ ಪೆಟ್ರೋಲ ಅಥವಾ ಸೀಮೆ ಎಣ್ಣೆ ಹಾಕಿ ಕಡ್ಡಿ ಗಿರಿ ಬೆಂಕಿ ಹಚ್ಚಿ ಸುಟ್ಟು ಕೊಲೆ ಮಾಡಿದ ಬಗ್ಗೆ ಸಂಶಯವಿರುತ್ತದೆ, ವಿನೋದನ ಮೃತ ದೇಹ ಆಸ್ಪತ್ರೆಯ ಕಡೆಗೆ ತೆಗೆದುಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನಗರ ಪೊಲೀಸ್ ಠಾಣೆ ಅಪರಾಧ ಸಂ. 67/2020, ಕಲಂ. 457, 380 ಐಪಿಸಿ :-

ದಿನಾಂಕ 10-06-2020 ರಂದು ಫಿರ್ಯಾದಿ ಶ್ರೀ ಡಾ|| ಯೋಗೆಂದ್ರ ಕುಲಕರ್ಣಿ ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ಬೀದರ ಇವರು ಕಂಪ್ಯೂಕರದಲ್ಲಿ ಟೈಪ್ ಮಾಡಿದ ಒಂದು ದೂರು ಅರ್ಜಿ ನೀಡಿದ್ದು ಅದರ ಸಾರಂಶವೆನೆಂದರೆ ಫಿರ್ಯಾದಿಯವರು ಮತ್ತು ಸಿಬ್ಬಂದಿಯವರು ದಿನಾಂಕ 08-06-2020 ರಂದು 09:00 ಗಂಟೆಗೆ ಪಶು ಆಸ್ಪತ್ರೆ ಮನಿಯಾರ ತಾಲೀಮ್  ಬಂದು ಕರ್ತವ್ಯ ನಿರ್ವಹಿಸಿ ನಂತರ ಸಾಯಂಕಾಲ್ ಅದೆ ದಿವಸ 17:00 ಗಂಟೆಗೆ ನಮ್ಮ ಸರಕಾರಿ ಪಶು ಆಸ್ಪತ್ರೆಗೆ ಅಮಜದ ಇತನು ಎಲ್ಲಾ  ಕೋಣೆಗಳಿಗೆ ಬೀಗ ಹಾಕಿ ಮತ್ತು ಆಸ್ಪತ್ರೆ ಗೇಟಿಗೆ ಬೀಗ ಹಾಕಿಕೊಂಡು ಹೋಗಿ ದಿನಾಂಕ 09-06-2020 ರಂದು ಮುಂಜಾನೆ 0900 ಗಂಟೆಗೆ ನಾನು ಮತ್ತು ನಮ್ಮ ಸಿಬ್ಬಂದಿಯವರಾದ ಅಮಜದ ಪಶು ವೈದ್ಯ ಸಹಾಯಕ, ಶ್ರೀ ಆರೀಫ್ ಪ್ವಿನ್, ಶ್ರೀ ವಿಶ್ವಾನಾಥ ಬಾದಾಮಿ ಸಿನಿಯರ್ ವೇಟನರಿ ಇನ್ಸಪೆಕ್ಟರ್ ಎಲ್ಲರೂ ಪಶು ಆಸ್ಪತ್ರೆಗೆ ಬಂದು ನಮ್ಮ ಆಸ್ಪತ್ರೆಯ ಹೋರಬಾಗಿಲು ಬೀಗ ತೆಗೆದು ಒಳಗಡೆ ಹೋಗಿ ನೋಡುವಷ್ಟರಲ್ಲಿ ನಮ್ಮ ಆಸ್ಪತ್ರೆಯ ಕಂಪ್ಯೂಟರ್ ಕೋಣೆಯ ಬಾಗಿಲು ಮುರಿದಿದ್ದು ಕಂಡು ಬಂದು ಒಳಗಡೆ ಹೋಗಿ ನೋಡಲು ಮೈಕ್ರೋಟೆಕ್ ಇನ್ವರ್ಟರ್ ಅ.ಕಿ 6,000/- ರೂ. ಬೇಲೆ ಬಾಳುವುದು ಹಾಗೂ ಪಕ್ಕದ ಕೋಣೆ ಆಸ್ಪತ್ರೆಯ ಸ್ಟೋರ್ಋ ರೂಮನ ಬೀಗ ಮುರಿದ್ದು ಅದರಲ್ಲಿದ್ದ 06 ದ್ರವ ಸಾರಜನಕ ಜಾಡಿಗಳು ಅನುಪಯುಕ್ತ ಒಟ್ಟು ಅ.ಕಿ 15,000/- ಬೆಲೆ ಬಾಳುವ ಸಾಮಾನಗಳು ಚಿಲ್ಲರೆ ಸ್ಟೀಲ್ ಸಾಮಾನುಗಳು ಅ.ಕಿ 2,000/- ರೂ. ಬೆಲೆಬಾಳುವದು ಹಿಗ್ಗೆ ಒಟ್ಟು 23,000/- ರೂಪಾಯಿ ಬೆಲೆಬಾಳುವ ವಸ್ತುಗಳು ದಿನಾಂಕ 08-06-2020 ರಂದು 1700 ಗಂಟೆಯಿಂದ 09-06-2020 ರ ರಾತ್ರಿ ವೇಳೆಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 21/2020, ಕಲಂ. 498(ಎ), 323, 504, 506 ಜೊತೆ 34 ಐಪಿಸಿ :-

ಫಿರ್ಯಾದಿ ಪಾರ್ವತಿ ಗಂಡ ವಿನಯಕುಮಾರ ಮೊಳಗೆ ವಯ: 30 ವರ್ಷ, ಜಾತಿ: ಲಿಂಗಾಯತ, ಸಾ: ಚಿದ್ರಿ ಬೀದರ ರವರ ಮದುವೆಯು ಸುಮಾರು 9 ವರ್ಷಗಳ ಹಿಂದೆ ಚಿದ್ರಿಯ ವಿನಯಕುಮಾರ ಮೊಳಗೆ ರವರ ಜೊತೆಯಲ್ಲಿ ಆಗಿದ್ದು, ಗಂಡ ಸರಾಯಿ ಕುಡಿಯುವ ಚಟದವರಾಗಿದ್ದು, ಸಾರಾಯಿ ಕುಡಿದು ಬಂದು ಫಿರ್ಯಾದಿಗೆ ವಿನಾಃ ಕಾರಣ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಸಾಯುವ ಹಾಗೆ, ಮನಸ್ಸಿಗೆ ಹತ್ತುವ ಹಾಗೆ ಮಾತನಾಡುತ್ತಾ, ಕೈಯಿಂದ ಹೊಡೆ ಬಡೆ ಮಾಡುತ್ತಾ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾನೆ, ಭಾವನಾದ ರಾಜೇಶ ಇತನು ಸಹ ಸರಾಯಿ ಕುಡಿದರೆ ಏನಾಯಿತು, ಆತನು ಹೇಳಿದ ಹಾಗೆ ಕೇಳಬೇಕು, ಹೊಡೆದರೆ ಹೊಡೆಯಿಸಿಕೊಳ್ಳು ಅಂತ ಗಂಡನ ಪರವಾಗಿ ಮಾತನಾಡಿ, ಇದ್ದರೆ ಮನೆಯಲ್ಲಿ ಇರು ಇಲ್ಲವಾದರೆ ನಿನ್ನ ತಾಯಿಯ ಮನೆಗೆ ಹೋಗು ಅಂತ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾರೆ, ಅವರ ಕಿರುಕುಳ ಕೊಡುವ ಬಗ್ಗೆ ತನ್ನ ತಂದೆ, ಅಣ್ಣನಿಗೆ ತಿಳಿಸಿದಾಗ ಅವರು ಗಂಡ ಹಾಗು ಭಾವನವರಿಗೆ ಅನೇಕ ಸಲ ಬುದ್ದಿವಾದ ಹೇಳಿರುತ್ತಾರೆ, ಆದರು ಸಹ ಅವರು ತೊಂದರೆ ಕೊಡುವದು ಬಿಟ್ಟಿರುವದಿಲ್ಲ, ಹೀಗಿರುವಾಗ ದಿನಾಂಕ 08-06-2020 ರಂದು ಗಂಡ ಹೊರಗಿನಿಂದ ಸರಾಯಿ ಕುಡಿದು ಬಂದು ಫಿರ್ಯಾದಿಗೆ ಮನೆಯಿಂದ ಹೊರಗೆ ಹೋಗು ಅಂತ ತಲೆಯ ಕೂದಲು ಹಿಡಿದು ಎಳೆದು ಹೊರಗೆ ಹಾಕಿದಾಗ ಮನೆಯಲ್ಲಿದ್ದ ಭಾವ ರಾಜೇಶ ಇತನು ಸಹ ತನ್ನ ತಮ್ಮನಿಗೆ ಏನು ನೋಡುತ್ತಿ ಇವಳಿಗೆ 1-2 ಕಪಾಳದ ಮೇಲೆ ಹೊಡೆದು ಹೊರಗೆ ಹಾಕು ಇವಳಿಗೆ ಮನೆಯ ಒಳಗೆ ಕರೆದುಕೊಳ್ಳಬೇಡ ಅಂತ ಅಂದು ಫಿರ್ಯಾದಿಗೆ ನೀನು ಮನೆಯಿಂದ ಹೊರಗೆ ಹೋಗು ನಿನಗೆ ಜೀವ ಸಮೇತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ನೂಕಿ ಕೊಟ್ಟಿರುತ್ತಾನೆ, ಸದರಿ ಜಗಳವನ್ನು ಪರಿಚಯ ಇರುವ ಇಸಾಕ್ ತಂದೆ ಇಸ್ಮಾಯಿಲ್ ಸೆರಿಕಾರ್ ಮತ್ತು ಸವಿನ್ ತಂದೆ ಸಾಮುವೆಲ್ ರವರು ಕಣ್ಣಾರೆ ನೋಡಿರುತ್ತಾರೆ, ನಂತರ ಫಿರ್ಯಾದಿಯು ಸದರಿ ವಿಷಯವನ್ನು ತನ್ನ ಅಣ್ಣನಿಗೆ ತಿಳಿಸಿದಾಗ ತಕ್ಷಣ ಅಣ್ಣ ಮನೆಗೆ ಬಂದಾಗ ಫಿರ್ಯಾದಿಯ ಗಂಡ ಹಾಗು ಭಾವ ಇಬ್ಬರು ಅಣ್ಣನ ಅಂಗಿಯನ್ನು ಹಿಡಿದು ಕಪಾಳದ ಮೇಲೆ ಹೊಡೆದಿರುತ್ತಾನೆ, ಏನು ನೋಡುತ್ತಿ ನಿನ್ನ ತಂಗಿಗೆ ಮನೆಯಿಂದ ಕರೆದುಕೊಂಡು ಹೋಗು ಅಂತ ಹೇಳಿ ಮನೆಯಿಂದ ಹೊರಗೆ ಹಾಕಿದಾಗ, ಅಣ್ಣ ಫಿರ್ಯಾದಿಗೆ ಅವರ ಮನೆಗೆ ಕರೆದುಕೊಂಡು ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 10-06-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 75/2020, ಕಲಂ. 32, 34 ಕೆ.ಇ ಕಾಯ್ದೆ :-

ದಿನಾಂಕ 10-06-2020 ರಂದು ಬಸವಕಲ್ಯಾಣ ನಗರದ ಸದಾನಂದ ಉಡುಪಿ ಹೋಟಲ್ ಹತ್ತಿರ ಇಬ್ಬರು ವ್ಯಕ್ತಿಗಳು ತಮ್ಮ ಹತ್ತಿರ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ ಸರಾಯಿವುಳ್ಳ ಬಾಟಲಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಅನಧಿಕೃತವಾಗಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದಾರೆಂದು ಕರೆ ಮುಖಾಂತರ ಸುನೀಲಕುಮಾರ ಪಿ.ಎಸ್.ಐ (ಕಾ&ಸು) ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ಸದಾನಂದ ಉಡುಪಿ ಹೋಟಲ ಹತ್ತಿರ ತಲುಪಿ ನೋಡಲು ಅಲ್ಲಿ ಆರೋಪಿತರಾದ 1) ರಾಹುಲ್ ತಂದೆ ಗುರುನಾಥ ಚಾಮಾಲೆ ವಯ: 19 ವರ್ಷ, ಜಾತಿ: ಕಬ್ಬಲಿಗ, ಸಾ: ತ್ರಿಪೂರಾಂತ ಬಸವಕಲ್ಯಾಣ ಹಾಗೂ 2) ದುರ್ಗಾ ತಂದೆ ಸೂರ್ಯನಾರಾಯಣ ವಯ: 24 ವರ್ಷ, ಜಾತಿ: ನಾಯ್ಡು, ಸಾ: ಗಾಂಧೀನಗರ ವೆಲ್ಲೂರು, ತಾ: ವೆಲ್ಲೂರು, ಜಿಲ್ಲಾ: ಪೂರ್ವ ಗೋದಾವರಿ (ಎ.ಪಿ) ಇವರಿಬ್ಬರು ತಮ್ಮ ಹತ್ತಿರ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲವನ್ನು ಇಟ್ಟುಕೊಂಡು ಕುಳಿತಿರುವುದನ್ನು ನೋಡಿ ಸದರಿ ಆರೋಪಿತರ ಮೇಲೆ ಒಮ್ಮೆಲೆ ಎಲ್ಲರೂ ದಾಳಿ ಮಾಡಿ ಹಿಡಿದು ನಿಮ್ಮ ಹತ್ತಿರ ಇರುವ ಪ್ಲಾಸ್ಟೀಕ್ ಚೀಲದಲ್ಲಿ ಏನಿದೆ ? ಎಂದು ವಿಚಾರಿಸಿದಾಗ ಅವರು ಸರಾಯಿವುಳ್ಳ ಪೌಚಗಳು ಇವೆ ಎಂದು ತಿಳಿಸಿದ್ದು, ನಂತರ ನಿನ್ನ ಹತ್ತಿರ ಇರುವ ಸರಾಯಿವುಳ್ಳ ಪೌಚಗಳು ಮಾರಾಟ ಮಾಡುವ ಬಗ್ಗೆ ಯಾವುದೇ ರೀತಿ ಲೈಸನ್ಸ್ ಮತ್ತು ದಾಖಲಾತಿ ಇದ್ದರೆ ಹಾಜರು ಪಡಿಸಲು ಸೂಚಿಸಿದಾಗ ಅವರು ನಮ್ಮ ಹತ್ತಿರ ಯಾವುದೇ ದಾಖಲಾತಿ ಇರುವುದಿಲ್ಲ ಎಂದು ತಿಳಿಸಿದ್ದು ಇರುತ್ತದೆ, ನಂತರ ಅವರ ಹತ್ತಿರ ಇದ್ದ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲವನ್ನು ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು ಅದರಲ್ಲಿ 1) ಓಲ್ಡ್ ಟಾವರ್ನ ವಿಸ್ಕಿ 180 ಎಮ.ಎಲ್ ಲಿಕರ್ 60 ಪೌಚಗಳು ಅ.ಕಿ 5160/- ರೂ., 2) ಆಪಿಸರ್ ಚಾಯಿಸ್ ಸ್ಪೆಷಿಯಲ್ ವಿಸ್ಕಿ 180 ಎಮ್.ಎಲ್ ಲಿಕರ್ 48 ಪೌಚಗಳು ಅ.ಕಿ 5088/- ರೂ., 3) ಒರಿಜಿನಲ್ ಚಾಯಿಸ್ ಡೆಲಕ್ಸ್ ವಿಸ್ಕಿ 90 ಎಮ್.ಎಲ್ ಲಿಕರ್ 216 ಪೌಚಗಳು ಅ.ಕಿ 7560/- ರೂ., ಸದರಿ ಸರಾಯಿವುಳ್ಳ ಪೌಚಗಳ ಒಟ್ಟು ಬೆಲೆ 17,808/- ಇರುತ್ತದೆ, ನಂತರ ಸದರಿ ಸರಾಯಿ ಪೌಚಗಳನ್ನು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 76/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 10-06-2020 ರಂದು ಬಸವಕಲ್ಯಾಣ ನಗರದ ತ್ರಿಪೂರಾಂತ ಐ.ಬಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ಕರೆ ಮುಖಾಂತರ ಸುನೀಲಕುಮಾರ ಪಿ.ಎಸ್.ಐ (ಕಾ&ಸು) ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ತ್ರಿಪೂರಾಂತ ಐ.ಬಿ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ತ್ರಿಪೂರಾಂತ ಐ.ಬಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಇಮ್ರಾನ್ ತಂದೆ ಶೇರಖಾನ್ ಪಠಾಣ ವಯ: 25 ವರ್ಷ, ಜಾತಿ: ಮುಸ್ಲಿಂ, ಸಾ: ಗಾಡವಾನ ಗಲ್ಲಿ ಬಸವಕಲ್ಯಾಣ ಹಾಗೂ 2) ಜಾಕಿರ ತಂದೆ ಉಮರಸಾಬ ರಾಜೋಳೆ ವಯ: 21 ವರ್ಷ, ಜಾತಿ: ಮುಸ್ಲಿಂ, ಸಾ: ಕಾಳಿ ಗಲ್ಲಿ ಬಸವಕಲ್ಯಾಣ ಇವರಿಬ್ಬರು ನಿಂತುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 80/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಳ್ಳುವುದನ್ನು ನೋಡಿ ಎಲ್ಲರು ಒಮ್ಮೆಲೆ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ 2650/- ರೂ ಮತ್ತು 02 ಮಟಕಾ ಚೀಟಿಗಳು ಮತ್ತು ಎರಡು ಬಾಲ್ ಪೆನ ನೇದವುಗಳನ್ನು ಪಂಚರ ಸಮಕ್ಷಮ ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.