ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 11-04-2021

 

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಯು.ಡಿ.ಆರ್ ಸಂ. 04/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 10-04-2021 ರಂದು 1600 ಗಂಟೆ ಸುಮಾರಿಗೆ ಫಿರ್ಯಾದಿ ಜರೀನಾ ಗಂಡ ನಸಿರೋದ್ದಿನ ಮರಪಳ್ಳಿ ವಯ: 45 ವರ್ಷ, ಜಾತಿ: ಮುಸ್ಲಿಂ, ಸಾ: ಡಾಕುಳಗಿ ರವರು ತನ್ನ ಗಂಡ ನಸಿರೋದ್ದಿನ ಮರಪಳ್ಳಿ ಇಬ್ಬರು ತಮ್ಮ ಹೊಲದಲ್ಲಿ ಕಳಕಿ ಭಣಮಿ ವಟ್ಟುವಾಗ ಫಿರ್ಯಾದಿಯ ಗಂಡನಿಗೆ ಯಾವುದೋ ಒಂದು ವಿಷಪುರಿತ ಹಾವು ಬಲಗಾಲ ಪಾದಕ್ಕೆ ಕಚ್ಚಿದ ಪ್ರಯುಕ್ತ ಅವರಿಗೆ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನಲ್ಲಿ ಹಾಕಿಕೊಂಡು ಹಳ್ಳಿಖೇಡ(ಬಿ) ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡುವಷ್ಟರಲ್ಲಿ 1730 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಪರಿಶೀಲಿಸಿ ನಸಿರೋದ್ದಿನ ರವರು ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 26/2021, ಕಲಂ. 279, 304(ಎ) ಐಪಿಸಿ :-

ದಿನಾಂಕ 10-04-2021 ರಂದು ಫಿರ್ಯಾದಿ ಶಾಂತಾಬಾಯಿ ಗಂಡ ವೆಂಕಟ ಚವ್ಹಾಣ ಸಾ: ಹನುಮಾನ ನಗರ ತಾಂಡಾ ರವರ ಗಂಡನಾದ ವೆಂಕಟ ತಂದೆ ಕಿಶನ ಚವ್ಹಾಣ ಸಾ: ಹನುಮಾನ ನಗರ ತಾಂಡಾ ಇವರು ಕೂಲಿ ಕೆಲಸಕ್ಕಾಗಿ ಕಮಲಾಪೂರಕ್ಕೆ ಹೋಗಿ ಬರುವುದಾಗಿ ಹೇಳಿ ತನ್ನ ಮೋಟಾರ ಸೈಕಲ ನಂ. ಕೆ.ಎ-32/ಈವ್ಹಿ-5311 ನೇದನ್ನು ಚಲಾಯಿಸಿಕೊಂಡು ಹೋಗಿ ಚಿಕ್ಕನಾಗಾಂವ ಶಿವಾರದ ಚಿಕ್ಕನಾಗಾಂವ – ಕಲ್ಲಖೋರಾ ಮದ್ಯ ಇಳಿಜಾರಿನಲ್ಲಿ ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರೋಡಿನಿಂದ ಕೆಳಗೆ ಖಡ್ಡಾದಲ್ಲಿ ಬಿದ್ದ ಪ್ರಯುಕ್ತ ಅವರಿಗೆ ತಲೆಗೆ ರಕ್ತಗಾಯವಾಗಿ ಬಾಯಿಯಿಂದ, ಮೂಗಿನಿಂದ ಹಾಗೂ ಕಿವಿಯಿಂದ ರಕ್ತ ಬಂದಿದ್ದು, ಅಲ್ಲಲ್ಲಿ ಕೈಗಳಿಗೆ ತರಚಿದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.