ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 11-03-2020

ಬಗದಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ : 21/2020 ಕಲಂ: 32, 34 ಕೆ.ಇ. ಕಾಯ್ದೆ :-

ದಿನಾಂಕ:10/03/2020 ರಂದು 1330 ಗಂಟೆಗೆ ಶ್ರೀಮತಿ ಇಂದಿರಾಬಾಯಿ ಮ.ಪಿ.ಎಸ್.ಐ. ಬಗದಲ ಪೊಲೀಸ್ ಠಾಣೆ ಹೊಳಿ ಹಬ್ಬದ ಪ್ರಯುಕ್ತ ಪೇಟ್ರೊಲಿಂಗದಲ್ಲಿದ್ದಾಗ  11:30 ಗಂಟೆಗೆ ಖಾಸಗಿ ಮಾಹಿತಿ ಬಂದಿದ್ದೇನೆಂದರೆ  ಮೀನಕೇರಾ ಕ್ರಾಸ್ ಹತ್ತಿರ ಒಬ್ಬ ವ್ಯಕ್ತಿ ತನ್ನ ಮೊಟಾರ ಸೈಕಲ್ ಮೇಲೆ ಅನಧಿಕೃತವಾಗಿ ಮಧ್ಯ/ಸರಾಯಿ ಸಾಗಾಣಿಗೆ ಮಾಡುತ್ತಿರುವ ಬಗ್ಗೆ ಖಚೀತ ಭಾತ್ಮಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಬಾಪುರ ಕ್ರಾಸದಿಂದ 11:50 ಗಂಟೆಗೆ ಬಿಟ್ಟು ಮೀನಕೇರಾ ಕ್ರಾಸ್ ಹತ್ತಿರ ಮೊಗ್ದಳ ಸಂತೊಷ ರವರ ಹೊಟೇಲ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನಧಿಕೃತವಾಗಿ ಸರಾಯಿ ಮೊಟಾರ ಸೈಕಲ್ ಮೇಲೆ ಸಾಗಿಸುತ್ತಿರುವದು ಖಚೀತ ಪಡಿಸಿಕೊಂಡು ದಾಳಿ ಮಾಡಿ ಸರಾಯಿ/ಮಧ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಿಚಾರಿಸಲು  ಅವನು ತನ್ನ ಹೆಸರು  ಗುರುನಾಧ ತಂದೆ ಶರಣಪ್ಪಾ ಭೋತಪುರ ವಯ 34 ವರ್ಷ ಜಾತಿ:ಲಿಂಗಾಯತ ಉದ್ಯೋಗ: ಹೊಟೇಲದಲ್ಲಿ ಕೆಲಸ ಸಾ|| ಬೋರಳ  ಮೊಟಾರ ಸೈಕಲ್  ಮೇಲೆ ಇದ್ದ ಪ್ಲಾಸ್ಟೀಕ್ ಚೀಲದಲ್ಲಿ ನೋಡಲು ಅದರಲ್ಲಿದ್ದ ಯು.ಎಸ್. ವಿಸ್ಕಿ (90 ಎಮ್.ಎಲ್.) 32 ಪ್ಲಾಸ್ಟಿಕ್ ಬಾಟಲ್ ಗಳಿದ್ದವು,  ಅವುಗಳ ಬೆಲೆ ಒಟ್ಟು 939=92 ರೂ ಆಗಿರುತ್ತದೆ.   ಸರಾಯಿ ಸಾಗಾಟ ಮಾಡುತ್ತಿದ್ದ ಮೊಟಾರ ಸೈಕಲ್  ಮತ್ತು ಸಾಗಾಟ ಮಾಡುತ್ತಿದ್ದ ಸರಾಯಿ/ಮಧ್ಯ ಮತ್ತು ಆಪಾದಿತ ಗುರುನಾಥ ಹಾಗು ಮೊಟಾರ ಸೈಕಲ್  ತಮ್ಮ ವಶಕ್ಕೆ ತೆಗೆದುಕೊಂಡು   ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಬೀದರ ಸಂಚಾರ ಪೊಲೀಸ್ ಠಾಣೆ  ಅಪರಾಧ ಸಂಖ್ಯೆ 32/2020 ಕಲಂ 279, 338 ಐಪಿಸಿ ಜೊತೆ 187 ಐಎಮ್.ವಿ. ಕಾಯ್ದೆ :-

ದಿನಾಂಕ: 10-03-2020 ರಂದು ಫಿರ್ಯಾದಿ ನಾಗನಾಥ ತಂದೆ ಕಾಶೆಪ್ಪಾ ವಯ: 69 ವರ್ಷ, ಸಾ:ವಿದ್ಯಾನಗರ ಕಾಲೋನಿ ಬೀದರ ರವರು ಮೋ.ಸೈ. ನಂ. ಕೆಎ-38-ಕ್ಯೂ-4205 ನೇದ್ದರ ಮೇಲೆ ತಮ್ಮ ಮನೆಯಿಂದ ಖಾಸಗಿ ಕೆಲಸದ ಕುರಿತು ಕಮಠಾಣೆ ಶಾಲೆ ಮುಖಾಂತರ ಮೈಲೂರ ಕ್ರಾಸ್ ಕಡೆಗೆ ಹೋಗುವಾಗ ವಿದ್ಯಾನಗರ 6 ನೇ ಕ್ರಾಸ್ ಹತ್ತಿರ ವಿರುವ ಗುಡ್ ಲೈಫ್ ಬೆಕರಿ ಮುಂದೆ ಸುಮಾರು 1730 ಗಂಟೆಗೆ ಹಿಂದಿನಿಂದ ವಿಶಾಲ ಫಂಕ್ಷನ್ ಹಾಲ್ ಕಡೆಯಿಂದ ಒಂದು ಕಾರ್ ನಂ. ಕೆ38ಎಮ್2972 ನೇದರ ಚಾಲಕನು ತನ್ನ ಕಾರನ್ನು ಅತಿ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಮಾಡಿ ಓಡಿ ಹೋಗಿರುತ್ತಾನೆ. ಸದರಿ ಅಪಘಾತದಿಂದ ಫಿರ್ಯಾದಿಯ ರಕ್ತಗಾಯ ವಾಗಿರುತ್ತವೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂಖ್ಯೆ : 37/2020 ಕಲಂ 87 ಕೆ.ಪಿ. ಕಾಯ್ದೆ :-

ದಿನಾಂಕ: 10-03-2020 ರಂದು ರಾತ್ರಿ 1215 ಗಂಟೆಗೆ ಪಿಎಸ್ಐ ರವರು ಹುಮನಾಬಾದ ಪಟ್ಟಣದಲ್ಲಿ ಬಸ್ ನಿಲ್ದಾಣದ ಹತ್ತಿರ ಸಿಬ್ಬಂದಿಯೊಂದಿಗೆ ಎನ್.ಆರ್.ಸಿ ಕರ್ತವ್ಯ ನಿರ್ವಹಿಸುತ್ತಿರುವಾಗ ಕಲ್ಲೂರ ರಸ್ತೆಯ ಪಕ್ಕದಲ್ಲಿರುವ ಸಾರ್ವಜನಿಕ ಸ್ಥಳವಾದ ಹನುಮಾನ ಮಂದಿರದ ಮುಂದೆ ಕೆಲವು ಜನರು ಹಣವು ಪಣಕ್ಕೆ ಹಚ್ಚಿ ಇಸ್ಪಿಟ್ ಆಡುತ್ತಿದ್ದಾರೆ ಅಂತಾ ಮಾಹಿತಿ ಬಂದಿದ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಶರಣಪ್ಪಾ ವಯ: 33 ವರ್ಷ, ಜ್ಞಾನೆಶ್ವರ ವಯ: 28 ವರ್ಷ, ದಿಲೀಪ ವಯ: 58 ವರ್ಷ, ಶಿವರಾಜ ವಯ: 34 ವರ್ಷ, ಇವರುಗಳಿಂದ ಜೂಜಾಟಕ್ಕೆ ಸಂಬಂಧಿಸಿದ ರೂ. 6210/- ನಗದು ಹಣ ಹಾಗೂ 52 ಇಸ್ಪಿಟ್ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೋಳ್ಳಲಾಗಿದೆ.