ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 10-07-2020

ಗಾಂಧಿಗಂಜ ಪೊಲೀಸ್  ಠಾಣೆ ಅಪರಾಧ ಸಂಖ್ಯೆ 105/2020 ಕಲಂ 379 ಐಪಿಸಿ :-

ದಿನಾಂಕ 09/07/2020 ರಂದು 1800 ಗಂಟೆಗೆ ಫಿರ್ಯಾದಿ ಶ್ರೀ ರಾಜಕುಮಾರ ತಂದೆ  ಕಲ್ಯಾಣರಾವ ವಯ-39 ವರ್ಷ ಜಾ/ ಲಿಂಗಾಯತ  ಉ-ಖಾಸಗಿ ಕೆಲಸ ಸಾ/ ಕಾಡವಾದ ಗ್ರಾಮ ಸದ್ಯ ಕೈಲಾಶ ನಗರ ಗುಂಪಾ ಬೀದರ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ಫಿರ್ಯಾದಿಯು ಕೈಲಾಶ ನಗರ ಗುಂಪಾ ಪಂಕಜ ಠಾಕುರ ರವರ ಮನೆಯಲ್ಲಿ ಬಾಡಿಗೆಗೆ ಇದ್ದು  ಇವರ  ಹತ್ತಿರ ಒಂದು ಹಿರೊ ಸ್ಪ್ಲೇಂಡರ ಪ್ರೋ ದ್ವಿ ಚಕ್ರ ವಾಹನ ಇದ್ದು ಅದರ ಸಂ, ಕೆಎ-38-ಆರ್-3801, ಇಂಜಿನ್ ನಂ. ಎಚ್.ಎ.10ಇಆರ್ಇಎಚ್ಜೆ14060, ಚೆಸಿಸ್ ನಂ. ಎಮ್.ಡಿ.ಎಲ್.ಎಚ್.ಎ10ಬಿಎಫ್ಎಎಚ್25461 ಅದರ ಮಾದರಿ 2014 ಇದ್ದು ಸಿಲ್ವರ ಬಣ್ಣದು ಅದರ ಅಂ, ಕಿ. 24500=00 ರೂಪಾಯಿ ಇರುತ್ತದೆ  ಹೀಗಿರುವಾಗ ದಿನಾಂಕ 20/06/2020 ರಂದು ನಸುಕಿನ ಜಾವ 0300 ಗಂಟೆಯಿಂದಾ 0500 ಗಂಟೆಯ ಅವಧಿಯಲ್ಲಿ ಸದರಿ ವಾಹನ ನನ್ನ ಮನೆಯ ಮುಂದೆ ನಿಲ್ಲಿಸಿದ್ದು  ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳೆದು ಹೊದ ವಾಹನ ಅಲ್ಲಿ ಇಲ್ಲಿ ಎಲ್ಲಾ ಕಡೆ ಹುಡುಕಾಡಿ ಪತ್ತೆ ಆಗಲಾರದ ಕಾರಣ ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ  ಗ್ರಾಮೀಣ ಪೊಲೀಸ್ ಠಾಣೆ  ಅಪರಾಧ ಸಂಖ್ಯೆ 28/2020 ಕಲಂ 15 (ಎ) ಕೆ.ಇ. ಕಾಯ್ದೆ :-

ದಿನಾಂಕ 09/07/2020 ರಂದು 1930 ಗಂಟೆಗೆ  ಪಿಎಸ್ಐ ರವರು  ಕರೋನಾ ವೈರಸ್ ನಿಮಿತ್ಯ ಪೆಟ್ರೊಲಿಂಗ ಕರ್ತವ್ಯದ ಮೇಲೆ ಪೊಲೀಸ್ ಜೀಪ ನಂ ಕೆಎ- 38 – ಜಿ – 262 ನೇದ್ದರಲ್ಲಿ ಭಂಗೂರ ಚೆಕ್ ಪೊಸ್ಟಗೆ ಸಿಬ್ಬಂಧಿರವರ ಜೊತೆ ಹೊಗುವಾಗ  ಯಕಾತಪೂರ ಹತ್ತಿರ ಇದ್ದಾಗ ಖಚೀತ ಬಾತ್ಮಿ ಬಂದಿದ್ದೇನೆಂದರೆ  ಗಾದಗಿ ಶಿವಾರದ ಎ.ಕೆ ಧಾಭದ ಎದುರಿಗೆ ಕಟ್ಟೆಯ ಮೇಲೆ ಪ್ರದೀಪ ತಂದೆ ಬಸಯ್ಯಾ ಸ್ವಾಮಿ ವಯ- 24 ವರ್ಷ  ಜಾ|| ಸ್ವಾಮಿ.   ಸಾ: ಮಡಪಳ್ಳಿ ಸಧ್ಯ – ನವದಗೇರಿ  ಈತನು ಸಾರ್ವಜನಿಕರಿಂದ ಹಣ ಪಡೆದು  ತನ್ನ ಹತ್ತಿರ ಯಾವುದೆ ಲೈಸನ್ಸ ಇಲ್ಲದೆ ಸಾರ್ವಜನಿಕರಿಂದ ದುಡ್ಡು ಪಡೆದು ಸರಾಯಿ ಮತ್ತು ನೀರು, ಗ್ಲಾಸ ಕೊಟ್ಟು ಸರಾಯಿ ಕುಡಿಯಲು ಅನುವು ಮಾಡಿಕೊಡುತ್ತಿದ್ದಾನೆ  ಅಂತ ಖಚಿತ ಬಾತ್ಮಿ ಬಂದ ಮೇರಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಅಪಾದಿತನಿಂದ 1) ಎಂ.ಸಿ 180 ಎಂ.ಎಲ್.ವುಳ್ ಎರಡು ಬಾಟಲಗಳು 2) ಎರಡು ಪ್ಲಾಸ್ಟಿಕ ಗ್ಲಾಸಗಳು 3) ಒಂದು ನೀರಿನ ಬಾಟಲಗಳು ಜಪ್ತಿ ಪಂಚನಾಮೆ ಪ್ರಕಾರ ಜಪ್ತಿ ಮಾಡಿ ಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 57/2020 ಕಲಂ 279, 304(ಎ) ಐಪಿಸಿ:-

ದಿನಾಂಕ 9/07/2020ರಂದು 08.30 ಗಂಟೆಗೆ ಫಿರ್ಯಧಿ ಶ್ರೀಮತಿ ಅಂಬೀಕಾ ಗಂಡ ದಯಾನಂದ ವಗದಾಳದೋರ ವಯ 22ವರ್ಷ ಜಾತಿ ಕುರುಬುರ ಉ ಮನೆ ಕೆಲಸ ಸಾ;ಶಮತಾಬಾದ ಇವರು ಠಾಣೆಗೆ ಹಾಜರಾಗಿ ತನ್ನ ದೂರು ನೀಡಿದರ  ಸಾರಾಂಶವೇನೆಂದರೆ  ಇವರ ಪತಿ ದಯಾನಂದ ಇವರು  ದಿನಾಂಕ 8/07/2020ರಂದು ಸಾಯಂಕಾಲ ವೇಳೆಯಲ್ಲಿ ಚಿಟ್ಟಗುಪ್ಪದಲ್ಲಿ ಖಾಸಗಿ ಕೆಲಸ  ಇದೆ ಅಂತಾ  ಹೋಗಿ ಬರುತ್ತನೆ ಅಂತಾ ಮನೆಯಲ್ಲಿ ಹೇಳಿ ತನ್ನ ಮೋಟಾರ ಸೈಕಲ ಮೇಲೆ ಕುಳಿತು ಹೋಗಿದ್ದು  ದಯಾನಂದ ಇವರು ಚಿಟ್ಟಗುಪ್ಪಾದಿಂದ  ಶಮತಬಾದಗೆ ಬರುವಾಗ ತನ್ನ ಮೋಟಾರ ಸೈಕಲ ಅತೀ ವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲ ನಿಯಂತ್ರಣ ತಪ್ಪಿ ನೀಲಗೀರಿ ಗಿಡಕ್ಕೆ ಡಿಕ್ಕಿ ಮಾಡಿದ್ದರಿಂದ ಹಣೆಗೆಹತ್ತಿ ಭಾರಿರಕ್ತಗಾಯವಾಗಿ ಮೃತ ಪಟ್ಟಿರುತ್ತಾನೆ ಸದರಿ ಘಟನೆ ದಿನಾಂಕ 9/07/2020ರಂದು 00.30ಗಂಟೆಯಿಂದ 0700 ಗಂಟೆಯ ಅವಧಿಯಲ್ಲಿ ಜರುಗಿರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬ.ಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 89/2020 ಕಲಂ 78(ಎ) ಕೆಪಿ ಕಾಯ್ದೆ :-

ದಿನಾಂಕ:09/07/2020 ರಂದು 14:00 ಗಂಟೆಗೆ   ಸುನೀಲ್ ಕುಮಾರ ಪಿ.ಎಸ.ಐ [ಕಾ&ಸು] ಪೊಲೀಸ್ ಠಾಣೆಯಲ್ಲಿರುವಾಗ ಬಸವಕಲ್ಯಾಣ ನಗರದ ಕೆನರಾ ಬ್ಯಾಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣಪಡೆದು ನಸಿಬಿನ ಮಟಕಾ ಚೀಟಿ ಬರೆದು ಕೊಳ್ಳುತ್ತಿದ್ದಾನೆ ಅಂತಾ ಮಾಹಿತಿ ಬಂದಿದರ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ   ನೋಡಿದಾಗ ಭಾತ್ಮಿಯಂತೆ ಕೆನರಾ ಬ್ಯಾಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ 1 ರೂಪಾಯಿಗೆ 80/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಳ್ಳುವುದನ್ನು ನೋಡಿ ಸಮಯ 16:45 ಗಂಟೆಗೆ ಎಲ್ಲರು ಒಮ್ಮಲೆ ದಾಳಿಮಾಡಿ   ಶಿವಾನಂದ ತಂದೆ ಗಂಪು ಖರಬಾದೆ ವಯಸ್ಸು//36 ವರ್ಷ ಜಾತಿ//ಲಿಂಗಾಯತ ಉ//ಒಕ್ಕಲುತನ ಸಾ//ರಾಜಪೂತಗಲ್ಲಿ ಇವನ್ನನ್ನು ಹಿಡಿದು ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ 5500/-ರೂ, ಮತ್ತು 01 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ಸಿಕ್ಕಿದ್ದು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.