ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 10-03-2020

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 41/2020 ಕಲಂ 379 ಐಪಿಸಿ :-

ದಿನಾಂಕ 10-03-2020 ರಂದು 1830 ಗಂಟೆಗೆ ದೂರುದಾರರಾದ ಶ್ರೀ ಸೂರ್ಯಕಾಂತ ತಂದೆ ಕರಬಸಪ್ಪಾ ಭಂಗೂರೆ ಸಾ. ಹುಣಜಿ (ಕೆ) ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೇನೆಂದರೆ, ದಿನಾಂಕ 05-03-2020 ರಂದು ಸಾಯಂಕಾಲ ಹೊಲದಲ್ಲಿ ಇಟ್ಟಿರುವ ಟ್ರ್ಟಾಕ್ಟರ ಉಪಕರಣ ಯಂತ್ರದ ಸೋನಾಲಿಕಾ ರೋಟಾವೇಟರ್ ಇದ್ದಿತ್ತು ನಂತರ ದಿನಾಂಕ 06-03-2020 ರಂದು ಬೀದರದಿಂದ ಮರಳಿ ಗ್ರಾಮಕ್ಕೆ ಬಂದು ಸಾಯಂಕಾಲದ ವರೆಗೆ ಹೊಲದ ಕಡೆಗೆ ಓಡಾಡಿ ನಂತರ ರಾತ್ರಿ ನಮ್ಮ ಮನೆಯಲ್ಲಿಯೇ ಉಳಿದುಕೊಂಡಿದ್ದೆ. ಬೇಳಿಗ್ಗೆ 0800 ಗಂಟೆಗೆ ನಮ್ಮ ಟ್ರ್ಯಾಕ್ಟರ್ ಚಾಲಕ ಹೊಲಕ್ಕೆ ಹೋಗಿ ಸದರಿ ರೂಟರ್ ನೋಡಲು, ಇಟ್ಟಿರುವ ಜ್ಯಾಗೆಯಲ್ಲಿ ಇದ್ದಿರಲಿಲ್ಲಾ ಹೊಲದಲ್ಲಿ ಎಲ್ಲಾ ಕಡೆಗೆ ನೋಡಿ ಎಲ್ಲಿಯೂ ಕಾಣದೇ ಇರುವಾಗ ಈ ವಿಷಯವನ್ನು ನಮ್ಮ ಟ್ರ್ಯಾಕ್ಟರ್ ಚಾಲಕ ನನಗೆ ತಿಳಿಸಿದಾಗ ನಾನು ಸಹ ನಮ್ಮ ಹೊಲಕ್ಕೆ ಬಮದು ನೋಡಲು ಸದರಿ ರೋಟರ್ ಇರಲಿಲ್ಲಾ. ಟ್ರ್ಯಾಕ್ಟರ್ ಉಪ ಉಪಕರಣ ಯಂತ್ರದ ಸೋನಾಲಿಕಾ ರೋಟಾವೇಟರ್ ಚೆಸಿಸ್ ನಂ 150894 ಇದ್ದು ಅದರ ಅ.ಕಿ. 1,11,000/- ರೂ ಇರಬಹುದು. ದಿನಾಂಕ 05-03-2020 ರ ರಾತ್ರಿ 2100 ಗಂಟೆಯಿಂದ ದಿನಾಂಕ 06-03-2020 ರ ಮುಂಜಾನೆ 0500 ಗಂಟೆಯ ಮಧ್ಯ ಅವಧೀಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಸಂತಪೂರ ಠಾಣೆ ಪ್ರಕರಣ ಸಂಖ್ಯೆ 18/2020 ಕಲಂ 188 ಐ,ಪಿ,ಸಿ 32, 34 ಕೆ.ಇ. ಕಾಯ್ದೆ:-

ದಿನಾಂಕಃ 10/03/2020 ರಂದು 1200 ಗಂಟೆಗೆ ಪಿಎಸ್ಐ ರವರಿಗೆ ಖಚಿತ ಮಾಹಿತಿ ಮೇರೆಗೆ ಧುಪತಮಹಾಗಂವ ಧಾಬಾದ ಒಳಗೆ ಹೋಗಿ ನೋಡಿದ್ದು ಧಾಭಾದ ಒಳಗೆ ಒಂದು ತಗಡದ ಕೋಣೆಯಲ್ಲಿ ಹೋಗಿ ದಾಳಿ ಮಾಡಿ ಧಾಬಾದಲ್ಲಿ ಮ್ಯಾನೆಂಜರ ಇದ್ದು ಅವನಿಗೆ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ವಿಜಯಕುಮಾರ ತಂದೆ ವಿಶ್ವನಾಥ ಕರಕಾಳೆ ವ/ 26 ವರ್ಷ ಜಾ/ ಎಸ್,ಸಿ ಮಾದಿಗ ಉ. ಧಾಬಾದ ಮ್ಯಾನೆಂಜರ್ ಸಾ/ ಧೂಪತಮಾಹಾಗಾಂವ ಅಂತ ತಿಳಿಸಿದ್ದು ಅವನ ವಶದಿಂದ 1) 180 ಎಂ.ಎಲ ವುಳ್ಳ ಇಂಪ್ರಿಯು ಬ್ಲಿಯು 10 ಬಾಟಲಗಳು ಒಂದಕ್ಕೆ 162.19/- ರೂ ಒಟ್ಟು 1622/- ಆಗಬಹುದು 2) 90 ಎಮ್ ಎಲ್ ವುಳ ಮೇಗಡಾಲ್ ಲಿಕರ್ ಸರಾಯಿ ಪಾಕೇಟಗಳು 22 ಒಂದಕ್ಕೆ 66.91/- ರೂ ಒಟ್ಟು 1472=00ರೂ ಆಗಬಹುದು 3) 650 ಎಮ್ ಎಲ್ ವುಳ ಹಂಟರ್ ಸ್ಟ್ರಾಂಗ್ 5 ಬಾಟಲಗಳು ಒಂದಕ್ಕೆ 145-/ ರೂ ಒಟ್ಟು 725=00 ರೂ 4) 650 ಎಮ್ ಎಲ್ ವುಳ ಎಸ್,ಎನ್ .ಜೆ 10.000/- ಸೂಪರ್ ಸ್ರ್ಟಾಂಗ 2 ಬಾಟಲಗಳು ಒಂದಕ್ಕೆ 108/- ರೂ ಒಟ್ಟು 216=00 ರೂ ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ 38/2020 ಕಲಂ 32, 34 ಕೆ.ಇ. ಕಾಯ್ದೆ :-

ದಿನಾಂಕ 10/03/2020 ರಂದು 1330 ಗಂಟೆಗೆ ದುಬಲಗುಂಡಿ ಗ್ರಾಮದಿಂದ ಒಬ್ಬ ಜಲಸಂಗಿ ಗ್ರಾಮಕ್ಕೆ ಬಸ್ಸಿನಲ್ಲಿ ಆಕ್ರಮವಾಗಿ ಸರಾಯಿ ತೆಗೆದು ಹೋಗುವ ಕುರಿತು ಒಂದು ಬಿಳಿ ಚೀಲದಲ್ಲಿ ತೆಗೆದುಕೊಂಡು ಬರುತ್ತಿದ್ದಾನೆ ಅಂತಾ ಭಾತ್ಮಿ ಬಂದಿದ ಮೇರೆಗೆ ಹೊಗಿ ನೊಡಿದಾಗ ಒಬ್ಬ ವ್ಯಕ್ತಿ ಜಲಸಂಗಿ ಗ್ರಾಮದ ಬಸ ನಿಲ್ದಾನದ ಹತ್ತಿರ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ ಚೀಲವನ್ನು ತಮ್ಮ ಹೆಗಲ ಮೇಲೆ ಇಟ್ಟು ಚೀಲದಲ್ಲಿ ಸರಾಯಿ ಪ್ಯಾಕಟ ಇರುವದನ್ನು ಖಚಿತ ಪಡಿಸಿಕೊಂಡು ಪಿ.ಎಸ.ಐ ರವರು ಹಾಗು ಅವರ ಸಿಬ್ಬಂದಿಯವರು ನಮ್ಮ ಸಮಕ್ಷಮದಲ್ಲಿ 1445 ಗಂಟೆಗೆ ದಾಳಿ ಮಾಡಿ ಅವನಿಗೆ ಹೆಸರು ವಿಳಾಸವನ್ನು ವಿಚಾರಣೆ ಮಾಡಲು ಅವನು ತನ್ನ ಹೆಸರು ಪ್ರಕಾಶ ತಂದೆ ಸಾಯಿಬಣ್ಣಾ ಜಮಾದಾರ, ವಯ 45 ವರ್ಷ, ಜಾ. ಕಬ್ಬಲಿಗೆ, ಉ. ಹೋಟೆಲ, ಸಾ. ಜಲಸಂಗಿ ಇತನ ವಶದಿಂದ 1] 90 ಎಮ.ಎಲ ದ 211 ಸರಾಯಿ ಬಾಟಲಗಳು ಇದ್ದು ಒಂದರ ಕಿಮತ್ತು 30=32 ರೂಪಾಯಿದ್ದು ಇದ್ದು ಒಟ್ಟು 211 ಸರಾಯಿ ಬಾಟಲಗಳ ಕಿಮತ್ತು 6397.52 ರೂಪಾಯಿದ್ದು ಇರುತ್ತವೆ, 2] 180 ಎಂ.ಎಲ್ ದ ಓಲ್ಡ ತವರೇನ್ 13 ಪ್ಯಾಕೇಟಗಳು ಒಂದ ಕಿಮ್ಮತ್ತ 74.13 ಒಟ್ಟು ಬಾಟಲಗಳ ಕಿಮ್ಮತ್ತ 963.69 ರೂಪಾಯಿ, 3] 180 ಎಂ.ಎಲ ದ ಇಂಪಿರಿಯಲ ಬ್ಲೂ 9 ಬಾಟಲಗಳು ಒಂದರ ಕಿಮ್ಮತ 162.19 ಒಟ್ಟು 1459.71 ರೂಪಾಯಿ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.