ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 09-12-2019

 

ಮಂಠಾಳ ಪೊಲೀಸ್ ಠಾಣೆ ಯು.ಡಿ.ಆರ್ ನಂ. 94/2019, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಸುರೇಖಾ ಗಂಡ ಲಹು ಜಾಧವ ವಯ: 42 ವರ್ಷ, ಜಾತಿ: ಎಎಸ್.ಸಿ ದಲಿತ, ಸಾ: ಧಾಮುರಿ, ತಾ: ಬಸವಕಲ್ಯಾಣ ರವರ ಹಿರಿಯ ಮಗನಾದ ಮನೋಜ ವಯ: 25 ವರ್ಷ ಈತನು ಹುಟ್ಟಿದ್ದಾಗಿನಿಂದ ಆತನ ಎರಡು ಕಾಲುಗಳು ಸ್ವಲ್ಪ ಓರೆಯಾಗಿದ್ದು, ಸರಿಯಾಗಿ ನಡೆಯಲು ಮತ್ತು ಮಾತನಾಡಲೂ ಸಹ ಬರುತ್ತಿರಲಿಲ್ಲಾ ಮತ್ತು ಇತ್ತಿಚಿಗೆ ಸುಮಾರು ದಿವಸಗಳಿಂದ ಹೊಟ್ಟೆ ಬೇನೆಯಿಂದ ಬಳಲುತ್ತಿದ್ದನು, ಹೀಗಿರುವಲ್ಲಿ ದಿನಾಂಕ 05-12-2019 ರಂದು 0700 ಗಂಟೆಯಿಂದ ದಿನಾಂಕ 07-12-2019 ರಂದು 1800 ಗಂಟೆಯ ಮದ್ಯಾವಧಿಯಲ್ಲಿ ಫಿರ್ಯಾದಿಯವರ ಮಗ ಮನೋಜ ಈತನು ತನಗೆ ಆಗುತ್ತಿದ್ದ ಹೊಟ್ಟೆನೋವು ತಾಳಲಾರದೇ ನೋವಿನಲ್ಲಿ ಕೊರಗುತ್ತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮೂರ ಪಕ್ಕದ ಕೆರೆಯಲ್ಲಿ ಬ್ರಿಡ್ಜ್ ಹತ್ತಿರ ನೀರಿನಲ್ಲಿ ಬಿದ್ದು ನೀರು ಕುಡಿದು ಮೃತಪಟ್ಟಿದ್ದು ಇರುತ್ತದೆ, ಆತನ ಸಾವಿನಲ್ಲಿ ಯಾರ ಮೇಲೂ ಯಾವುದೇ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 08-12-2019 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 115/2019, ಕಲಂ. 498(), 323, 504, 506 .ಪಿ.ಸಿ :-

ದಿನಾಂಕ 08-12-2019 ರಂದು ಫಿರ್ಯಾದಿ ಸುಜಾತಾ ಗಂಡ ಶ್ರೀಮಂತ ಜಾಂತೆ ವಯ: 35 ವರ್ಷ, ಜಾತಿ: ಲಿಂಗಾಯತ, ಸಾ: ಹಳ್ಳಿಖೇಡ[ಬಿ] ರವರ ಗಂಡನಾದ ಶ್ರೀಮಂತ ತಂದೆ ವೀರಶೆಟ್ಟಿ ಜಾಂತಿ ಸಾ: ಹಳ್ಳಿಖೇಡ[ಬಿ] ಇತನು ಸರಾಯಿ ಕುಡಿದು ಮನೆಗೆ ಬಂದು ಫಿರ್ಯಾದಿಗೆ ನೀನು ಕೆಲಸ ಮಾಡಿದ ಹಣ ಎಲ್ಲಿ ಇಡುತ್ತಿದ್ದಿ ನಿನ್ನ ತವರು ಮನೆಗೆ ಕೊಡುತ್ತಿದ್ದಿ ಸರಾಯಿ ಕುಡಿಯಲು ಹಣ ಕೇಳಿದರೆ ಕೊಡುತ್ತಿಲ್ಲಾ ಅಂತ ಅವಾಚ್ಯವಾಗಿ ಬೈದು ಕೈಯಿಂದ ಬೆನ್ನ ಮೇಲೆ ಮತ್ತು ಎದೆಯ ಮೇಲೆ ಹೊಡೆದು ಗುಪ್ತಗಾಯ ಪಡಿಸಿ ನೀನು ನಮ್ಮ ಮನೆಯಲ್ಲಿ ಇರಬೇಡ ನಿನ್ನ ತವರು ಮನೆಗೆ ಹೋಗು ನೀನು ಒಂದು ವೇಳೆ ಇಲ್ಲೆ ಇದ್ದರೆ ನಿನಗೆ ಒಂದಲ್ಲ ಒಂದು ದಿವಸ ಹೊಡೆದು ಹಾಕುತ್ತೇನೆ ಅಂತ ಜೀವದ ಬೆದರಿಕೆ ಹಾಕಿರುತ್ತಾನೆ, ಆಗ ಅಲ್ಲಿಯೆ ಜಗಳದ ಗುಲ್ಲು ಕೇಳಿ ಬಂದ ಪಕ್ಕದ ಮನೆಯವರಾದ ಮಚೀಂದ್ರ ಸಗರ, ಚಂದ್ರಪ್ಪಾ ಸಗರ ಮತ್ತು ಮಾರುತಿ ಸಗರ ರವರು ಜಗಳವನ್ನು ನೋಡಿ ಬಿಡಿಸಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.