ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 09-08-2020

 

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 54/2020, ಕಲಂ. 279, 338 .ಪಿ.ಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 08-08-2020 ರಂದು ಫಿರ್ಯಾದಿ ಇಸ್ಮಾಯಿಲ್ ಖಾನ್ ತಂದೆ ಹಯಾತಖಾನ ವಯ 21 ವರ್ಷ, ಸಾ: ಕಪಲಾಪೂರ(ಎ) ರವರು ತನ್ನ ತಂದೆಯಾದ ಹಯಾತಖಾನ ತಂದೆ ಸುಲೇಮಾನಖಾನ, ವಯ: 70 ವರ್ಷ, ಸಾ: ಕಪಲಾಪೂರ(ಎ) ಬೀದರ ಇಬ್ಬರು ಮೋಟಾರ ಸೈಕಲ ನಂ. ಕೆಎ-39/ಜೆ-7245 ನೇದರ ಮೇಲೆ ಖಾಸಗಿ ಕೆಲಸ ಕುರಿತು ಶಹಾಗಂಜದಿಂದ ರೇಕ್ಸ ಬಾರ್ ಕ್ರಾಸ್ ಮುಖಾಂತರವಾಗಿ ನಯಾಕಮಾನ ಕಡೆಗೆ ಬರುತ್ತಿರುವಾಗ ಕೆ.ಜಿ.ಎನ್ ಟೆಂಗಿನ ಕಾಯಿ ಅಂಗಡಿ ಡಿಸಿಸಿ ಬ್ಯಾಂಕ ಹತ್ತಿರ ಬಸವೇಶ್ವರ ವೃತ್ತದ ಬೀದರ ಹತ್ತಿರ ಬಂದಾಗ ಎದುರಿನಿಂದ ಅಂದರೆ ಡಿಸಿಸಿ ಬ್ಯಾಂಕ ಕಡೆಯಿಂದ  ಇನೋವ ಕಾರ ನಂ. ಪಿ.ವಾಯ್-05/ಎಫ್-2199 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಫಿರ್ಯಾದಿಯವರ ಎದುರಿನಿಂದ ಹೋಗುತ್ತಿದ್ದ ಆಟೋ ನಂ. ಕೆಎ-38/5722 ನೇದಕ್ಕೆ ಮತ್ತು ಫಿರ್ಯಾದಿಯವರ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ಕಾರ ಸ್ಥಳದಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ತಂದೆಗೆ ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಹಣೆಯ ಮೇಲೆ ತರಚಿದ ಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲ್ಲಿಲ್ಲ, ಫಿರ್ಯಾದಿಗೆ ಸಾದಾ ಗಾಯಗಳಾಗಿದ್ದು, ಆಟೋ ಚಾಲಕನಿಗೂ ಮುಖದ ಮೇಲೆ ರಕ್ತಗಾಯಗಳಾಗಿರುತ್ತವೆ, ಆಗ ಅಲ್ಲೇ ಇದ್ದ ಸೈಯದ ತಂದೆ ಖಾಸಿಂಮಿಯ್ಯಾ, ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ಮರಖಲ, ತಾ: ಬೀದರ ರವರು ಹಾಗೂ ಫಿರ್ಯಾದಿ ಇಬ್ಬರು ಕೂಡಿ 108 ಅಂಬುಲೇನ್ಸನಲ್ಲಿ ಗಾಯಗೊಂಡವರಿಗೆ ಹಾಕಿಕೊಂಡು ಬೀದರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

 

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 68/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 08-08-2020 ರಂದು ನಾಗನಕೇರಾ ಗ್ರಾಮದ ಅಮೀನೋದ್ದೀನ ದರ್ಗಾ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಎಂಬ ಜೂಜಾಟ ನಡೆಸುತ್ತಿದ್ದಾನೆಂದು ಶ್ರೀಮತಿ ಸುನೀತಾ ಪಿಎಸ್ಐ (ಕಾ.ಸು) ಮನ್ನಾಎಖೇಳ್ಳಿ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ನಾಗನಕೇರಾ ಗ್ರಾಮಕ್ಕೆ ಹೋಗಿ ಬಸ್ ನಿಲ್ದಾಣದ ಹತ್ತಿರ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿ ಸಾಬೀರ ತಂದೆ ಖಾಸೀಮ ಖವಾಲಿವಾಲೆ ವಯ: 28 ವರ್ಷ, ಸಾ: ನಾಗೇನಕೆರಾ ಗ್ರಾಮ, ತಾ: ಚಿಟಗುಪ್ಪಾ, ಜಿ: ಬೀದರ ಇತನು ಸಾರ್ವಜನಿಕರಿಗೆ ಇದು ಕಲ್ಯಾಣಿ ಮಟ್ಕಾ ಜೂಜಾಟ ಇದೆ ಒಂದು ರೂಪಾಯಿಗೆ 80/- ರೂಪಾಯಿ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿಯವನ ಮೇಲೆ ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿಗೆ ಹಿಡಿದು ವಿಚಾರಿಸಿದಾಗ ತಾನು ಜನರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಳ್ಳುತ್ತೇನೆ ಅಂತಾ ತಿಳಿಸಿರುತ್ತಾನೆ, ನಂತರ ಆತನ ಅಂಗ ಜಡ್ತಿ ಮಾಡಿ ಆತನ ವಶದಿಂದ ಮಟ್ಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 970/- ರೂ., ಮಟ್ಕಾ ನಂಬರ ಬರೆದ 2 ಚೀಟಿಗಳು ಹಾಗೂ ಒಂದು ಬಾಲ ಪೆನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 104/2020, ಕಲಂ. 505(1), (ಸಿ) ಐಪಿಸಿ :-

ದಿನಾಂಕ 08-08-2020 ರಂದು ಫಿರ್ಯಾದಿ ಭಾಗವತ ಸಿಪಿಸಿ-1874 ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ರವರು ಹಳ್ಳಿ ಬೀಟ ಕರ್ತವ್ಯಕ್ಕೆ ಭಾತಂಬ್ರಾ ಗ್ರಾಮಕ್ಕೆ ಹೋದಾಗ ಪೊಲೀಸ್ ಬಾತ್ಮಿದಾರರು ತಿಳಿಸಿದ್ದೇನೆಂದರೆ ನಮ್ಮೂರ ಸದ್ದಾಮ ತಂದೆ ಯುಸುಫ ಖುರೇಶಿ ಈತನು ನನಗೆ ತನ್ನ ಮೋಬೈಲನಲ್ಲಿ ನಮ್ಮ ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ರವರ ಚಿತ್ರವು ತಲೆಬಾಗಿ ನಿಂತಿದ್ದು ಅವರ ಮುಂದೆ ಒಂದು ಚಪ್ಪಲಿ ಹಾಕಿದ ಪಾದಕ್ಕೆ ಅವರ ಹಣೆ ಹತ್ತಿದಂತೆ ತೊರುತ್ತದೆ, ನೀವು ಅವನ ಮೋಬೈಲ್ ಪರೀಕ್ಷಿಸಲು ತಿಳಿಸಿದಾಗ ಫಿರ್ಯಾದಿಯವರ ಕೂಡಲೇ ಸದರಿ ವಿಷಯವನ್ನು ಪಿ.ಎಸ್.ಐ ರವರಿಗೆ ತಿಳಿಸಿದ್ದು ಅವರು ಫಿರ್ಯಾದಿಗೆ ನೀವು ಕೂಡಲೇ ಹೋಗಿ ಆ ವ್ಯಕ್ತಿಯನ್ನು ಪರಿಶೀಲಿಸಿ ನಿಜವಿದ್ದರೆ ಕರೆದುಕೊಂಡು ಬರಲು ತಿಳಿಸಿದಾಗ ಫಿರ್ಯಾದಿಯು ಭಾತಂಬ್ರಾ ಗ್ರಾಮದ ಅಂಬೇಡ್ಕರ ವೃತ್ತದ ಹತ್ತಿರ ಹೋಗಿ ಆರೋಪಿ ಸದ್ದಾಮ ತಂದೆ ಯೂಸುಫ ಖುರೇಶಿ ಸಾ: ಭಾತಂಬ್ರಾ ಇತನಿಗೆ ಸರಕಾರಿ ಶಾಲೆಯ ಹತ್ತಿರ ಕರೆದುಕೊಂಡು ಹೋಗಿ ಆತನ ಹತ್ತಿರವಿದ್ದ ಮೋಬೈಲ ಕೇಳಲು ಅವನು ಗಾಬರಿಗೊಂಡು ತನ್ನ ಹತ್ತಿರವಿದ್ದ ಮೋಬೈಲ್ ಕೊಡಲು ನಿಧಾನಿಸಿದ್ದು ಸ್ವಲ್ಪ ಸಮಯದ ನಂತರ ವಿಚಾರಿಸಲು ಆತನು ತನ್ನ ಹತ್ತಿರವಿದ್ದ ಜಿಯೋ ಕಂಪನಿಯ ಮೋಬೈಲ್ ತೋರಿಸಿದನು, ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಮಾಡಲು ಸುಮ್ಮನೆ ನಿಂತು ನಂತರ ನಾನು ಟ್ಯಾಗ ಮಾಡಿದ ಫೆಸ್ ಬುಕ್ ನೇದನ್ನು ತೋರಿಸಿದ್ದು ಅದರಲ್ಲಿ ಉರ್ದು ಭಾಷೆಯಲ್ಲಿ ಬರೆದ ಅಕ್ಷರಗಳಿದ್ದು ಅದರ ಕೆಳಗೆ ಬಾತ್ಮಿದಾರರು ಹೇಳಿದ ನಮ್ಮ ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ರವರ ಚಿತ್ರವು ತಲೆಬಾಗಿ ನಿಂತಿದ್ದು ಅದರ ಮುಂದೆ ಒಂದು ಚಪ್ಪಲಿ ಹಾಕಿದ ಪಾದದ ಭಾಗಕ್ಕೆ ಅವರ ಹಣೆ ಹತ್ತಿದಂತೆ ಮಾಡಿ ಅವರಿಗೆ ಅವಮಾನ ಮಾಡಿದ್ದು ಇರುತ್ತದೆ, ಇದನ್ನು ಯಾರು ಪೋಸ್ಟ / ಟ್ಯಾಗ ಮಾಡಿದ್ದು ಇರುತ್ತದೆ ಅಂತ ವಿಚಾರಿಸಿದಾಗ ನಾನೇ ಮಾಡಿರುತ್ತೆನೆ ಅಂತ ಸದರಿ ಆರೋಪಿ ಒಪ್ಪಿಕೊಂಡಿದ್ದರಿಂದ ಸದರಿ ವಿಷಯವನ್ನು ಪಿ.ಎಸ್.ಐ ರವರಿಗೆ ತಿಳಿಸಿದ್ದರಿಂದ, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.