ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 08-04-2021

 

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 17/2021, ಕಲಂ. 465, 468, 471, 420, 409 ಐಪಿಸಿ :-

ಫಿರ್ಯಾದಿ ಅಂಗದ ಜಿ. ಪಾಟೀಲ ತಂದೆ ಗೋಪಾಲರಾವ ಪಾಟೀಲ ವಯ: 42 ವರ್ಷ, ಜಾತಿ: ಮರಾಠಾ, ಉ: ಪತ್ರಕರ್ತರು, ಸಾ: ಮನೆ ನಂ. 8-9-218 ಗುರುನಾನಕ ಕಾಲೋನಿ ಬೀದರ ಬೀದರ ನಗರದ ನರಸಿಂಹ ಝರಣಿ ದೇವಸ್ಥಾನದ ಆವರಣದಲ್ಲಿ ಯಾತ್ರಿ ನಿವಾಸ ಕಟ್ಟಡ ಕಾಮಗಾರಿಯ ಬಗ್ಗೆ ವರ್ಕ ಇಸ್ಟಿಮೇಟ್ ನಂಬರ ಕೆ.ಪಿ.ಡಬ್ಲೂ.ಡಿ/2013-14/ಬಿಡಿ/ವರ್ಕ ಇನಡೆಂಟ್ 17628 ರಂತೆ ದಿನಾಂಕ 06-06-2015 ರಂದು ಕಟ್ಟಡ ಕಾಮಗಾರಿಯನ್ನು ಪ್ರಾರಂಭವಾಗಿ ದಿನಾಂಕ 03-09-2016 ರಂದು ಮುಕ್ತಾಯವಾಗಿರುತ್ತದೆ, ಸದರಿ ಯಾತ್ರಿ ನಿವಾಸ ಕಟ್ಟಡ ಕಾಮಗಾರಿಯ ಬಗ್ಗೆ ಮೂರನೆ ಪಾರ್ಟಿ ಇನ್ಸಪೆಕ್ಷನ್ ಬೇರೆ ಕಾರ್ಯನಿರ್ವಹಕ ಏಜೆನ್ಸಿಯಿಂದ ಮಾಡಿಸುವುದು ನಿಯಮ ಇರುತ್ತದೆ, ಸದರಿ ಯಾತ್ರಿ ನಿವಾಸ ಕಟ್ಟಡ ಕಾಮಗಾರಿ ಕುರಿತು, ಹಿಂದು ರಿಲಿಜಿಯಸ್ & ಚಾರಿಟೇಬಲ್ ಇಲಾಖೆಯಿಂದ ಒಟ್ಟು ಅಂದಾಜು ಒಂದು ಕೋಟಿ ರೂಪಾಯಿ ಹಣ ಮಂಜೂರಾಗಿದ್ದು ಇರುತ್ತದೆ, ಸದರಿ ಕಟ್ಟಡ ಕಾಮಗಾರಿಯನ್ನು ಪುರ್ಣಗೋಳಿಸಿದ ಬಗ್ಗೆ ಪಿ.ಡಬ್ಲೂ.ಡಿ ಇಲಾಖೆಯ ಅಧಿಕಾರಿ ಹಾಗೂ ಇಂಜಿನಯರ್ಸಗಳಾದ 1) ಶ್ರೀಕಾಂತ ಚಿಮಕೂಡೆ ಎ.ಇ., 2) ಶೆಶಿಕಾಂತ ಮಳ್ಳಿ ಇ.ಇ., 3) ಮಲ್ಲಿಕಾರ್ಜುನ ಶಂಭು ಎ.ಇ.ಇ., 4) ಪಿ.ಡಬ್ಲೂ.ಡಿ ಡಿವಿಜನ್ ಜೆ.ಇ ಇವರೆಲ್ಲರೂ ಕೂಡಿ ನರಸಿಂಹ ಝರಣಾ ದೇವಸ್ಥಾನದ ಯಾತ್ರಿ ನಿವಾಸ ಕಟ್ಟಡ ಕಾಮಗಾರಿ ಪುರ್ಣಗೊಳಿಸಿದ ಬಗ್ಗೆ ಮೂರನೆ ಪಾರ್ಟಿಯ ಇನ್ಸಪೆಕ್ಷನ್ ಗುರುನಾನಕ ದೇವ ಇಂಜಿನಿಯರಿಂಗ್ ಕಾಲೇಜ ಬೀದರ ರವರಿಂದ ಮಾಡಿಸಿದ ಬಗ್ಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮೊಸ ವಂಚನೆ ಮಾಡಿ ಹಣ ದುರ್ಬಳಿಕೆ ಮಾಡಿಕೊಂಡು ಕಟ್ಟಡ ಕಾಮಗಾರಿಯನ್ನು ಕಳಪೆ ಮಟ್ಟದಲ್ಲಿ ಮಾಡಿರುತ್ತಾರೆ ಆರೋಪಿತರಾದ 1) ಶ್ರೀಕಾಂತ ಚಿಮಕೂಡೆ ಎ.ಇ., 2) ಶೆಶಿಕಾಂತ ಮಳ್ಳಿ ಇ.ಇ., 3) ಮಲ್ಲಿಕಾರ್ಜುನ ಶಂಭು ಎ.ಇ.ಇ., 4) ಪಿ.ಡಬ್ಲೂ.ಡಿ ಡಿವಿಜನ್ ಜೆ.ಇ ಇವರೆಲ್ಲರೂ ನಕಲಿ ದಾಖಲೆಗಳು ಸೃಷಿಸಿರುವ ಬಗ್ಗೆ ಆರ್.ಟಿ.ಐ ಮೂಲಕ ಫಿರ್ಯಾದಿಯು ದಾಖಲೆಗಳು ಸಂಗ್ರಹಿಸಿದ ನಂತರ ಗೋತ್ತಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 07-04-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂ. 22/2021, ಕಲಂ. 379 ಐಪಿಸಿ :-

ಫಿರ್ಯಾದಿ ಕಾಶೇಪ್ಪಾ ತಂದೆ ವೀರಭದ್ರಪ್ಪಾ ಪೊಸ್ತೆ ವಯ: 79 ವರ್ಷ, ಜಾತಿ: ಲಿಂಗಾಯತ, ಸಾ: ಹುಲಸೂರ ರವರ ಹೊಲದಲ್ಲಿದ ಸರ್ವೆ ನಂ.92 ನೇದಲ್ಲಿನ ಬಿಳಿ ಜೋಳದ ಬೆಳೆಯು ಯಾರೋ ಅಪರಿಚಿತರು ಕಳವು ಮಾಡಿರುತ್ತಾರೆ, ಫಿರ್ಯಾದಿಯವರ ಹಿರಿಯ ಮಗನಾದ ಧನರಾಜ ಸಹ ಶಿಕ್ಷಕ ಸರಕಾರಿ ನೌಕರನಾಗಿದ್ದು ವಾರಕೊಮ್ಮೆ ಬಂದು ಫಿರ್ಯಾದಿಯ ಸೇವೆ ಮಾಡುತ್ತಾನೆ, ಫಿರ್ಯಾದಿಯವರು ಅವನ ಜೊತೆ ಒಂದು ಸುತ್ತು ಹೊಲಕ್ಕೆ ಹೋಗಿ ಬೆಳೆ ವಿಕ್ಷಣೆ ಮಾಡಿ ಬರುತ್ತಿದ್ದು, ದಿನಾಂಕ 28-03-2021 ರಂದು ಭಾನುವಾರ ಹೋಗಿದ್ದು ಹೊಲದಲ್ಲಿ ಬಿಳಿ ಜೋಳದ ಬೆಳೆ ಇತ್ತು, ಆದರೆ ದಿನಾಂಕ 06-04-2021 ರಂದು ಹೊಲಕ್ಕೆ ಹೋಗಿ ನೋಡಲು ಬಿಳಿ ಜೋಳದ ಬೆಳೆ ಇರಲಿಲ್ಲ, ಅಂದಾಜು 2 ಚೀಲ ಜೋಳ ಆಗಬಹುದು ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 07-04-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 20/2021, ಕಲಂ. 32, 34 ಕೆ.ಇ ಕಾಯ್ದೆ :-

ದಿನಾಂಕ 07-04-2021 ರಂದು ಅರುಣಕುಮಾರ ಪಿ.ಎಸ್.ಐ (ಕಾ.ಸೂ) ಮುಡಬಿ ಪೊಲೀಸ ಠಾಣೆ ರವರು ತಮ್ಮ ಸಿಬ್ಬಂದಿಯವರೊಡನೆ ಬಸವಕಲ್ಯಾಣ ವಿಧಾನಸಬಾ ಕ್ಷೇತ್ರದ ಉಪ ಚುನಾವಣೆ ನಿಮಿತ್ಯ ಹಳ್ಳಿಭೆಟಿ ಹಾಗೂ ಪೆಟ್ರೊಲಿಂಗ ಕರ್ತವ್ಯಕ್ಕೆ ಹಿರನಾಗಾಂವ, ಖೇರ್ಡಾ ಗ್ರಾಮಗಳ ಕಡೆ ಹೋಗುವಾಗ ಮುಡಬಿ ಗ್ರಾಮದ ಕಿಣ್ಣಿವಾಡಿ ಗ್ರಾಮಕ್ಕೆ ಹೋಗುವ ರೋಡನ ಬ್ರಿಡ್ಜ ಮೇಲೆ ಒಬ್ಬ ವ್ಯಕ್ತಿ ಒಂದು ಬಿಳಿ ಚೀಲ ಇಟ್ಟುಕೊಂಡು ನಿಂತು ಕಾಯುತ್ತಿರುವದನ್ನು ಕಂಡು ಆತನ ಮೇಲೆ ಸಂಶಯ ಬಂದು ಚೀಲದಲ್ಲಿ ಏನಿದೆ? ಅಂತಾ ವಿಚಾರಿಸಲು ಸಮರ್ಪಕ ಉತ್ತಿರ ಕೊಡದೆ ಇದ್ದಾಗ ಚೀಲ ಬಿಚ್ಚಿ ನೋಡಲು ಸದರಿ ಚೀಲದಲ್ಲಿ 90 ಎಮ್,ಎಲ್ ವುಳ್ಳ ಯು.ಎಸ್ ವಿಸ್ಕಿ ಸರಾಯಿ ಬಾಟಲಗಳಿರುವುದನ್ನು ಕಂಡು ದಾರಿಯಲ್ಲಿ ಹೋಗುತ್ತಿದ್ದ ಇಬ್ಬರು ಪಂಚರನ್ನು ಬರಮಾಡಿಕೊಂಡು ಪಂಚರ ಸಮಕ್ಷಮ ಚೀಲದಲ್ಲಿದ್ದ ಸರಾಯಿ ಬಾಟಲಗಳನ್ನು ಪರಿಶಿಲಿಸಲಾಗಿ ಅದರಲ್ಲಿ 90 ಎಮ್.ಎಲ್ ವುಳ್ಳ 56 ಯು.ಎಸ್ ಸರಾಯಿ ಬಾಟಲಗಳಿದ್ದು ಅ.ಕಿ 1967.28 ಇರುತ್ತದೆ, ಸದರಿ ಸರಾಯಿ ಬಾಟಲಗಳ ಸಾಗಾಣಿಕೆ ಮಾಡಲು ಪರವಾನಿಗೆ ಇದೆಯೇ ಅಂತಾ ವಿಚಾರಿಸಲು ನನ್ನ ಹತ್ತೀರ ಯಾವುದೇ ಪರವಾನಿಗೆ ಇರುವದಿಲ್ಲ ನಾನು ನನ್ನ ಸ್ವಂತ ಲಾಭಕ್ಕಾಗಿ ಮಾರಾಟ ಮಾಡಲು ತೇಗೆದುಕೊಂಡು ಹೊಗುತ್ತಿದ್ದೇನೆ ಅಂತಾ ಹೇಳಿದ್ದು, ತನ್ನ ಹೆಸರು ದಿಲೀಪ ತಂದೆ ವಿಶ್ವನಾಥ ಪಾಲಾಡಿ ವಯ: 28 ವರ್ಷ, ಜಾತಿ: ಗೊಲ್ಲ, ಸಾ: ಕಿಣ್ಣಿವಾಡಿ ಅಂತ ತಿಳಿಸಿದನು, ನಂತರ ಎಲ್ಲಾ ಸರಾಯಿ ಬಾಟಲಗಳು ಪಂಚರ ಸಮಕ್ಷಮ ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 47/2021, ಕಲಂ. 279, 338 ಐಪಿಸಿ :-

ದಿನಾಂಕ 07-04-2021 ರಂದು ಫಿರ್ಯಾದಿ ಝರೇಪ್ಪಾ ತಂದೆ ಶಾಮರಾವ ಕಾಂಬಳೆ ವಯ: 24 ವರ್ಷ, ಜಾತಿ: ಎಸ್.ಸಿ ಹೊಲೆಯ, ಸಾ: ಜಕನಾಳ ಗ್ರಾಮ, ತಾ: ಔರಾದ(ಬಿ) ರವರು ಜಕನಾಳ ಗ್ರಾಮದಿಂದ ತನ್ನ ಖಾಸಗಿ ಕೆಲಸ ಕುರಿತು ಔರಾದಗೆ ಬಂದು ತನ್ನ ಖಾಸಗಿ ಕೆಲಸ ಮುಗಿಸಿಕೊಂಡು ಮರಳಿ ಜಕನಾಳಕ್ಕೆ ಹೋಗುವಾಗ ಔರಾದ(ಬಿ) ಕನ್ನಡಾಂಬೆ ವೃತದ ಹತ್ತಿರ ಡಿ.ಸಿ.ಸಿ ಬ್ಯಾಂಕ ರೋಡ ಕಡೆಯಿಂದ ಟಾಟಾ ಎಸ್ ವಾಹನ ಸಂ. ಕೆಎ-20/ಬಿ-6270 ನೇದರ ಚಾಲಕನಾದ ಆರೋಪಿ ಮಾರುತಿ ತಂದೆ ವಿಠಲ ಮಹಾರಾಜವಾಡೆ ವಯ: 30 ವರ್ಷ, ಜಾತಿ: ಲಿಂಗಾಯತ, ಸಾ: ಗಣೇಶಪುರ ಇತನು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಾಲಾಯಿಸಿಕೊಂಡು ಬಂದು ಫಿರ್ಯಾದಿಯವರ ಮೋಟರ ಸೈಕಲಿಗೆ ಬಲ ಗಡೆಯಿಂದ ನೇರವಾಗಿ ಬಂದು ಡಿಕ್ಕಿ ಪಡಿಸಿದ್ದರಿಂದ ಫಿರ್ಯಾದಿಯ ಬಲಗಾಲಿಗೆ ಮೊಣಕಾಲು ಕೆಳಗೆ ಭಾರಿ ಗುಪ್ತಗಾಯ ಮತ್ತು ರಕ್ತಗಾಯವಾಗಿ, ಬಲಗೈಗೆ ತರಚಿದ ರಕ್ತಗಾಯವಾಗಿರುತ್ತದೆ,  ನಂತರ ಫಿರ್ಯಾದಿಗೆ ಚಿಕಿತ್ಸೆ ಕುರಿತು ಸುಭಾಷ ತಂದೆ ಶಿವರಾಮ, ಸಂಜು ತಂದೆ ವಿಠಲ ರವರು ಔರಾದ(ಬಿ) ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.