ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 07-01-2021

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 01/2021, ಕಲಂ. 318 ಐಪಿಸಿ :-

ದಿನಾಂಕ 06-01-2021 ರಂದು 0600 ಗಂಟೆಗೆ ಫಿರ್ಯಾದಿ ವೈಜಿನಾಥ ತಂದೆ ಕಂಠೆಪ್ಪಾ ಬರಸಂಗಿ ವಯ: 45 ವರ್ಷ, ಜಾತಿ: ಲಿಂಗಾಯತ, ಸಾ: ಧೂಮ್ಮನಸೂರ, ತಾ: ಹುಮನಾಬಾದ ರವರು ತಮ್ಮೂನಿಂದ ಕನಕಟ್ಟಾ ಕಟೆಗೆ ಹೋಗುವ ಕಚ್ಚಾ ರಸ್ತೆ ಕಡೆಗೆ ವಾಕಿಂಗ್ ಹೋಗಿ ಮರಳಿ 0700 ಗಂಟೆಗೆ ರಮೇಶ ರವರ ಹೊಲದಲ್ಲಿರುವ ಹಾಳೂ ಬಾವಿ ಹತ್ತಿರ ಬಂದು ಬಾವಿಯಲ್ಲಿ ನೋಡಲು ಒಂದು ಅಂದಾಜು 3-4 ದಿವಸಗಳ ಹಿಂದೆ ಜನನವಾದ ಮಗು ಬಾವಿಯಲ್ಲಿ ಬಿದ್ದಿರುವದನ್ನು ನೋಡಿ ತಮ್ಮೂರ ಜನರಿಗೆ ತಿಳೀಸಿದಾಗ ಎಲ್ಲರೂ ಬಂದು ನೋಡಲು ಈಗ 3-4 ದಿವಸಗಳ ಹಿಂದೆ ಯಾರೋ ಅಪರಿಚತರು ಕ್ರಮ ಸಂಬಂಧ ಬೆಳೆಸಿ ಅವರಿಗೆ ಹುಟ್ಟಿದ ಮಗುವಿನ ಜನನ ಮುಚ್ಚಿಡುವ ಉದ್ದೇಶದಿಂದ ನವಜಾತ ಒಂದು ಹೆಣ್ಣು ಮಗುವನ್ನು ಮಾಣಿಕನಗರ ಶಿವಾರದ ಹೊಲ ಸರ್ವೆ ನಂ. 1 ರಮೇಶ ರವರ ಹೊಲದ ಹಾಳು ಬಾವಿಯಲ್ಲಿ ಬಿಸಾಡಿದ್ದು ಇರುತ್ತದೆ, ಬಾವಿಯಲ್ಲಿ ಬಿದ್ದ ಮಗು ಮೃತಪಟ್ಟಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಪೊಲೀಸ್ ಠಾಣೆ ಯು.ಡಿ.ಆರ್ ನಂ. 01/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 06-01-2021 ರಂದು ಫಿರ್ಯಾದಿ ಬಾಲಿಕಾ ಗಂಡ ದಿಲಿಪ ಹುಲಸೂರೆ ವಯ: 38 ವರ್ಷ, ಸಾ: ಸೇಡೋಳ, ತಾ: ಹುಮನಾಬಾದ ರವರ ಮನೆಯವರೆಲ್ಲರೂ ತೊಗರೆ ರಾಶಿ ಮಾಡಲು ಹೊಲಕ್ಕೆ ಹೋದಾಗ ಮನೆಯಲ್ಲಿ ಫಿರ್ಯಾದಿಯವರ ಗಂಡನಾದ ದಿಲೀಪ ಹುಲಸೂರೆ ರವರು ಸಾಲದ ಬಾಧೆ ತಾಳಲಾರದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಕುಶನೂರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 01/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 06-01-2021 ರಂದು ಫಿರ್ಯಾದಿ ಚಿಕ್ಕಮಯ ಗಂಡ ಯಲ್ಲಪ್ಪಾ ವಯ: 60 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಸೋಲುರು, ತಾ: ಆನೇಕಲ್, ಜಿ: ಬೆಂಗಳುರು ರವರ ಮಗಳಾದ ಭಾಗ್ಯ ಇಕೆಯು ಸುಮಾರು 5 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡುವ ಬೀದರ ಜಿಲ್ಲೆಯ ನಿಡೋದಾ ನಿವಾಸಿಯಾದ ಚಂದ್ರಶೇಖರ ಗುಪ್ತಾ ಈತನೊಂದಿಗೆ ಪ್ರೀತಿಸಿ ಮದುವೆ ಮಾಡಿಕೊಂಡಿರುತ್ತಾಳೆ, ಮದುವೆಯಾಗಿ 5 ವರ್ಷ ಕಳೆದಿದ್ದು ಇನ್ನೂ ಮಕ್ಕಳಾಗುತ್ತಿಲ್ಲ ಅಂತ ಬೇಸರ ಮಾಡಿಕೊಂಡು ಹೇಳುತ್ತಿದ್ದಳು, ಹೀಗಿರುವಾಗ ಮಗಳು ಭಾಗ್ಯ ಇವಳು ತನಗೆ ಮದುವೆಯಾಗಿ 5 ವರ್ಷ ಕಳೆದಿದ್ದು ಮಕ್ಕಳಾಗಿರುವುದಿಲ್ಲ ಎಂಬ ಕೋರಗಿನಲ್ಲಿ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ 01-01-2021 ರಂದು ನಿಡೋದಾ ಗ್ರಾಮದ ತನ್ನ ಗಂಡನ ಮನೆಯಲ್ಲಿ ವಿಷ ಕುಡಿದಿರುವ ಪ್ರಯುಕ್ತ ಆಕೆಗೆ ಚಿಕಿತ್ಸೆ ಕುರಿತು ಆಸ್ಪತ್ರೆಯಲ್ಲಿ ದಾಖಲು ಮಾಡಿದಾಗ ಚಿಕಿತ್ಸೆ ಫಲಿಸದೇ ದಿನಾಂಕ 05-01-2021 ರಂದು ಮೃತಪಟ್ಟಿದ್ದು, ಆಕೆಯ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.