ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 06-12-2019

 

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 107/2019, ಕಲಂ. 379 ಐಪಿಸಿ :-

ದಿನಾಂಕ 04-12-2019 ರಂದು ಫಿರ್ಯಾದಿ ಶೇಕ ಮಹೆಬೂಬು ತಂದೆ ಶೇಕ ಮಹೆತಾಬ ವಯ: 80 ವರ್ಷ, ಜಾತಿ: ಮುಸ್ಲಿಂ, ಸಾ: ಮನೆ ನಂ. 17-2-177 ಗಾಂಧಿ ನಗರ ಕಾಲೋನಿ, ಮೈಲೂರ ಬೀದರ ರವರು ಎಸ್.ಬಿ.ಐ ಬ್ಯಾಂಕಿಗೆ ಹೋಗಿ ತನ್ನ ಖಾತೆಯಿಂದ 20,000/- ರೂ ಹಣ ಡ್ರಾ ಮಾಡಿ ತಾನು ಧರಿಸಿದ ಕುರ್ತಾ ಪೈಜಮಾಕ್ಕೆ ಇರುವ ಕೆಳಗಿನ ಜೇಬನಲ್ಲಿಟ್ಟುಕೊಂಡು ಅಲ್ಲಿಂದ ಬೀದರ ನಗರದ ಅಂಬೇಡ್ಕರ ವೃತ್ತದ ಹತ್ತಿರ ಇರುವ ಸಪಾರೆ ಮೇಡಿಕಲ್ ಅಂಗಡಿಗೆ ಬಂದು ಮೇಡಿಕಲ್ ಅಂಗಡಿಯಲ್ಲಿ ಗುಳಿಗೆ ಔಷಧಿ ಖರೀದಿಸಿ ತನ್ನ ಜೇಬನಲ್ಲಿರುವ ಹಣ ನೋಡಲಾಗಿ, ಸದರಿ ಹಣ ಇರಲಿಲ್ಲಾ, ಸದರಿ 20,000/- ರೂ ಹಣ ಯಾರೋ ಅಪರಿಚಿತ ಕಳ್ಳರು ಬೀದರ ನಗರದ ಅಂಬೇಡ್ಕರ ವೃತ್ತದ ಬಳಿ ಇರುವ ಸಪಾರೆ ಮೇಡಿಕಲ್ ಅಂಗಡಿ ಹತ್ತಿರ ಫಿರ್ಯಾದಿಗೆ ಗೋತ್ತಿಲ್ಲದಂತೆ ತೆಗೆದುಕೊಂಡು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 05-12-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 202/2019, ಕಲಂ. 454, 380 ಐಪಿಸಿ :-

ದಿನಾಂಕ 05-12-2019 ರಂದು ಫಿರ್ಯಾದಿ ಶಾಂತಕುಮಾರ ತಂದೆ ವಿಜಯಕುಮಾರ ಪಾಟೀಲ ವಯ: 30 ವರ್ಷ, ಜಾತಿ: ಲಿಂಗಾಯತ, ಸಾ: ಮಹೇಶ ಬೀದರ ರವರ ತಾಯಿ ಹಾಗೂ ಅಕ್ಕ ಇಬ್ಬರು ತನ್ನ ಮನೆಗೆ ಬೀಗ ಹಾಕಿಕೊಂಡು ಆಸ್ಪತ್ರೆಗೆ ಹೋದಾಗ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿಯವರ ಮನೆಯ ಮುಂದಿನ ಬಾಗಿಲಿನ ಕೀಲಿ ಮುರಿದು ಮನೆಯ ಒಳಗೆ ಹೋಗಿ ಮನೆಯಲ್ಲಿ ಅಲಮಾರಿಯಲ್ಲಿಟ್ಟ ಬಂಗಾರದ ಅಭರಣಗಳಾದ 1) ಪಾಟ್ಲಿ 50 ಗ್ರಾಂ. ಅ.ಕಿ. 1,75,000/- ರೂ., 2) ಚೈನ್ ಸರ 40 ಗ್ರಾಂ. ಅ.ಕಿ. 1,40,000/- ರೂ., 3) ನಾನ್ ಪದಕ 30 ಗ್ರಾಂ. ಅ.ಕಿ 1,05,000/- ರೂ., 4) ಎಕ್ಸರ ಗುಂಡಾ 10 ಗ್ರಾಂ. ಅ.ಕಿ. 35,000/- ರೂ., 5) 3 ಉಂಗುರಗಳು 15 ಗ್ರಾಂ. ಅ.ಕಿ. 52,500/- ರೂ., 6) ಚೈನ್ 5 ಗ್ರಾಂ. ಅ.ಕಿ. 17,500/- ರೂ., 7) ಕೀವಿ ಓಲೆ 3 ಜೊಡಿ 15 ಗ್ರಾಂ. ಅ.ಕಿ. 52,500/- ರೂ., 8) ನಗದು ಹಣ 25,000/- ರೂ. ಹೀಗೆ ಬಂಗಾರದ ಒಡುವೆ ಮತ್ತು ನಗದು ಹಣ ಒಟ್ಟು 6,02,500/- ರೂ. ಬೆಲೆ ಬಾಳುವದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.