ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 06-11-2020

ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 166/2020 ಕಲಂ 317 ಐಪಿಸಿ :-

ದಿನಾಂಕ: 05/11/2020 ರಂದು 1800 ಗಂಟೆಗೆ ಫಿರ್ಯಾದಿ ಶ್ರೀ ಶ್ರೀನಿವಾಸ, ಅಧೀಕ್ಷಕರು, ಸರ್ಕಾರಿ ಬಾಲಕರ ಬಾಲ ಮಂದಿರ ಮೈಲೂರ ಬೀದರ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆನೆಂದರೆ ದಿನಾಂಕ 18/03/2020 ರಂದು ರಾತ್ರಿ 11.30 ಗಂಟೆ ಸುಮಾರಿಗೆ ವಿದ್ಯಾನಗರ ಬೀದರದಲ್ಲಿ ಸುಮಾರ 6 ವರ್ಷದ ಬಾಲಕನ್ನು ಇರುವ ಬಗ್ಗೆ ದೂರವಾಣಿ ಮುಖಾಂತರ ಬಂದ ಕರೆಯನ್ವಯ ಸ್ಥಳಕ್ಕೆ ಹೋಗಿ ಮಗುವನ್ನು ರಕ್ಷಿಸಿ, ಬಾಲಕನನ್ನು ಮುಂದಿನ ಪಾಲನೆ ಮತ್ತು ಪೋಷಣೆಗಾಗಿ ಮಕ್ಕಳ ಸಹಾಯವಾಗಿ 1098ಕ್ಕೆ ಕರೆ ಮಾಡಿ ಬಾಲಕನನ್ನು ಮಕ್ಕಳ ಸಹಾಯವಾಣಿ ಬೀದರ ರವರ ವಶಕೆ ನೀಡಲಾಗಿದೆ. ನಂತರ ಮಗುವಿಗೆ  ಪಾಲನೆ ಪೋಷಣೆ ಕುರಿತು ಬಾಲಕರ ಬಾಲಮಂದಿರಕ್ಕೆ ಒಪ್ಪಿಸಿರುತ್ತಾರೆ. ಮಗು ಹಿಂದಿ ಭಾಷೆ ಮಾತಾಡುತ್ತಿದ್ದು, ಮಗುವಿಗೆ ವಿಚಾರಿಸಿದ್ದಾಗ ತನ್ನ ಹೆಸರು ಮೋಹನ ತಂದೆ ರಾಜೇಶ ಅಂತ ತಿಳಿಸುತ್ತಿದ್ದು, ಮಗುವಿಗೆ ತನ್ನ ವಿಳಾಸದ ಬಗ್ಗೆ ಯಾವುದೇ ಅರಿವು ಇಲ್ಲದಂತೆ ಕಂಡು ಬಂದಿರುತ್ತದೆ. ನಂತರ ಮಗುವಿನ ತಂದೆ-ತಾಯಿ ಪತ್ತೆ ಕುರಿತು ಪ್ರಯತ್ನ ಮಾಡಿದ್ದು ಪತ್ತೆಯಾಗಿರುವುದಿಲ್ಲ. ಕು. ಮೋಹನ ಈತನಿಗೆ ಅವನ ಪಾಲನೆ ಪೋಷಣೆ ತೊರೆಯುವ ಉದ್ದೇಶದಿಂದ ಅವನ ತಂದೆ ರಾಜೇಶ ಹಾಗೂ ಅವನ ತಾಯಿ ಇವರು ಬಿಟ್ಟು ಹೋಗಿದಂತೆ ಕಂಡು ಬಂದಿರುತ್ತದೆ. ಮಗು ಪತ್ತೆಯಾಗಿದ್ದಾಗಿನಿಂದ ಇಲ್ಲಿಯ ವರೆಗೆ ಮಗುವಿನ ತಂದೆ ತಾಯಿಯವರ ಪತ್ತೆ ಕುರಿತು ಪ್ರಯತ್ನಿಸಿ ಪತ್ತೆಯಾಗದೇ ಇದ್ದ ಕಾರಣ ಈಗ ದೂರು ನೀಡುತ್ತಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರೂಗಿಸಿ ಎಫ.ಐ.ಆರ್ ದಾಖಲಿಸಲು ವಿನಂತಿ ಇರುತ್ತದೆ ಅಂತ ಕೊಟ್ಟ ಫಿರ್ಯಾದಿ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.