ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 05-05-2020

 

ಚಿಟಗುಪ್ಪಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 62/2020 ಕಲಂ 379 ಐಪಿಸಿ :-

 

ದಿನಾಂಕ:04/05/2020 ರಂದು 20.45 ಗಂಟೆಗೆ ಫಿರ್ಯಾದಿ ರಾಮಶೇಟ್ಟಿ ತಂದೆ ಮಹಾರುದ್ರಪ್ಪಾ ಪೊಲೀಸ್ ಪಾಟೀಲ, ವಯ : 59 ವರ್ಷ, ಜಾತಿ: ಲಿಂಗಾಯತ, ಸಾ/ಉಡಬಾಳ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನನೆಂದರೆ  . ಉಡಬಾಳ ಗ್ರಾಮದ  ಹೊಲ ಸರ್ವೆ ನಂ:192 ನೇದರಲ್ಲಿ ಜಮೀನಿನಲ್ಲಿ ಬಯಲು ಕೊಟ್ಟಿಗೆಯಲ್ಲಿ 2 ಎತ್ತುಗಳು ಮತ್ತು 9 ದನಗಳನ್ನು ಹಾಗೂ   ಅಣ್ಣನ ಹೊಲ ಸರ್ವೆ ನಂ;193 ನೇದ್ದರಲ್ಲಿನ ಬಯಲು ಕೊಟ್ಟಿಗೆಯಲ್ಲಿ 2 ಎತ್ತುಗಳು ಮತ್ತು ಒಂದು ಆಕಳು ಪ್ರತಿನಿತ್ಯ ಕಟ್ಟಿ ರಾತ್ರಿ ಮನೆಗೆ ಬರುತ್ತಾರೆ ಹಿಗಿರುವಲ್ಲಿ ದಿನಾಂಕ 04/05/2020 ರಂದು ಮುಂಜಾನೆ 06.00 ಗಂಟೆ ಸುಮಾರಿಗೆ ನಮ್ಮ ಕೆಲಸದವನಾದ ಪ್ರಶಾಂತ ಭೂತ್ತಾಳೆ ಈತನು ಫೋನ ಮಾಡಿ ಹೊಲದಲ್ಲಿದ್ದ ಎರಡು ಎತ್ತುಗಳು ಹಾಗು   ಅಣ್ಣನ ಹೊಲದಲ್ಲಿನ ಎರಡು ಎತ್ತುಗಳಿಗೆ ಕಟ್ಟಿದ ಹಗ್ಗ ಕೊಯಿದುಕೊಂಡು ಯಾರೋ ಅಪರಿಚಿತ ಕಳ್ಳರು ಕಳ್ಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದ ತಕ್ಷಣ, ಫಿರ್ಯಾದಿ ಮತ್ತು  ಅವರ ಅಣ್ಣ ಚಂದ್ರಕಾಂತ ಇಬ್ಬರೂ ಹೊಲಕ್ಕೆ ಹೋಗಿ ಪರಿಶೀಲಿಸಿ ನೋಡಲು,   ಕೊಟ್ಟಿಗೆಯಲ್ಲಿ ಕಟ್ಟಿದ 11 ದನಗಳ ಪೈಕಿ ಎರಡು ಎತ್ತುಗಳು, ಹಾಗು ನಮ್ಮಣನ ಹೊಲದಲ್ಲಿನ ಬಯಲು ಕೊಟ್ಟಿಗೆಯಲ್ಲಿ ಕಟ್ಟಿದ ಎರಡು  ಎತ್ತುಗಳು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು   ಶಿವಾರದ ಎಲ್ಲಾ ಕಡೆ ಕೆರೆ ಕುಂಟೆಗಳಲ್ಲಿ ಹುಡುಕಿದರೂ ಸಿಕ್ಕಿರುವುದಿಲ್ಲ. ಸದರಿ ನನ್ನ ಎತ್ತುಗಳಾದ 1] ಬಿಳಿ ಬಣ್ಣದಲ್ಲಿ ಕರಿ ಹಂಡುಳ್ಳ ಎತ್ತು ಅಂ.ಕಿ. ರೂ.45,000/-, 2] ಕಪ್ಪುಬಣ್ಣದ ಎತ್ತು ಅಂ.ಕಿ.ರೂ.45,000/- ಹಾಗು ನಮ್ಮಣನ ಹೋಲದಲ್ಲಿನ ಎತ್ತುಗಳಾದ 1] ಕರಿ ಬಣ್ಣದಲ್ಲಿ ಬಿಳಿ ಹಂಡುಳ್ಳ ಎತ್ತು ಅಂ.ಕಿ. ರೂ.45,000/-,  2] ಕೆಂಪು ಬಣ್ಣದ ಎತ್ತು ಅಂ.ಕಿ.ರೂ.45,000/- ಹೀಗೆ ಒಟ್ಟು ರೂ.180,000/- ಬೆಲೆಬಾಳುವ ಎತ್ತುಗಳನ್ನು ಯಾರೋ ಅಪರಿಚಿತ ಕಳ್ಳರು  ಕೊಟ್ಟಿಗೆಯಿಂದ ದಿನಾಂಕ: 03/05/2020 ರಂದು ರಾತ್ರಿ 07.00 ಗಂಟೆಯಿಂದ ದಿನಾಂಕ:04/05/2020 ರಂದು ಮುಂಜಾನೆ 04.00 ಗಂಟೆಯ ಮಧ್ಯ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೋಳ್ಳಲಾಗಿದೆ.

ಬ.ಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 61/2020 ಕಲಂ 87 ಕೆಪಿ ಕಾಯ್ದೆ ಜೊತೆ 269 ಐಪಿಸಿ :-

ದಿನಾಂಕ:04/05/2020 ರಂದು 09;00ಗಂಟೆಗೆ ಪಿ.ಎಸ್.ಐ (ಕಾ & ಸೂ) ಬಸವಕಲ್ಯಾಣ ನಗರ ಠಾಣೆಯಲ್ಲಿರುವಾಗ ಬಸವಕಲ್ಯಾಣ ನಗರದ ವಿಜಯನಗರ ಕಾಲೋನಿಯಲ್ಲಿ ವಿಠಲ್ ನಾಯಿಕೋಡೆ ರವರ ಮನೆ ಹತ್ತಿರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಕೆಲವು ಜನರು ಗುಂಪಾಗಿ ಕುಳಿತು ಕೊಂಡು ಹಣ ಹಚ್ಚಿ ಪಣ ತೋಟ್ಟು ಇಸ್ಪಿಟ್ ಎಲೆಗಳ ಅಂದರ ಬಾಹರ್ ನಸಿಬಿನ ಜೂಜಾಟವನ್ನು ಆಡುತ್ತಿದ್ದಾರೆ ಎಂದು ಪೋನ್ ಮುಖಾಂತರ ಖಚಿತ ಮಾಹಿತಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ   ನೋಡಿದಾಗ   ಇಸ್ಪಿಟ್ ಎಲೆಗಳ ಅಂದರ ಬಾಹರ ನಸೀಬಿನ ಜೂಜಾಟವನ್ನು ಹಣ ಹಚ್ಚಿ ಪಣ ತೊಟ್ಟು ಆಡುತ್ತಿರುವುದನ್ನು ನೋಡಿ  ದಾಳಿಮಾಡಿ   1]ಸಂದೀಪ್ ತಂದೆ ಕಮಲಾಕಾರ ಗಣೂರೆ ವಯಸ್ಸು:35 ವರ್ಷ ಜಾತಿ:ಭಾವಸಾರ ಕ್ಷತ್ರಿಯ  ಇವನ ಹತ್ತಿರದಿಂದ ನಗದು ಹಣ 250/-ರೂ ಸಿಕ್ಕ್ಕಿರುತ್ತವೆ, 2] ಸಂದೀಪ್ ತಂದೆ ಪ್ರಭಕಾರ ಜಾಧವ ವಯಸ್ಸು:23 ವರ್ಷ ಜಾತಿ:ಮರಾಠ  ಇವನ ಹತ್ತಿರದಿಂದ ನಗದು ಹಣ 300/-ರೂ ಸಿಕ್ಕ್ಕಿರುತ್ತವೆ,3] ಮೂರನೆಯವನಿಗೆ ಹೆಸರುಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು 3]ರಾಹುಲ್ ತಂದೆ ರಾಮರಾವ ಶಿಂಧೆ ಜಾತಿ:ಜೋಶಿ ವಯಸ್ಸು//24 ವರ್ಷ ಇವನ ಹತ್ತಿರದಿಂದ ನಗದು ಹಣ 200/-ರೂ ಸಿಕ್ಕ್ಕಿರುತ್ತವೆ, ಹಾಗೂ ಇನ್ನೂ ಇತರೆ 9 ಜನರಿಂದ  ಮತ್ತು ಆರೋಪಿತರ ಆಧೀನದಲ್ಲಿ ಸಿಕ್ಕಿರುವ ಒಟ್ಟು ನಗದು ಹಣ 3500/-ರೂ ಮತ್ತು 52ಇಸ್ಪಿಟ್ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬ.ಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 63/2020 ಕಲಂ 87 ಕೆಪಿ ಕಾಯ್ದೆ ಜೊತೆ 269 ಐಪಿಸಿ :-

ದಿನಾಂಕ:04/05/2020 ರಂದು 1300ಗಂಟೆಗೆ   ಪಿ.ಎಸ್.ಐ (ಕಾ & ಸೂ) ಬಸವಕಲ್ಯಾಣ ನಗರ ಠಾಣೆಯಲ್ಲಿರುವಾಗ ಬಸವಕಲ್ಯಾಣ ನಗರದ ಹೋಸಪೇಟಗಲ್ಲಿಯಲ್ಲಿ ಮಾಹದೇವ ಮಂದಿರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಕೆಲವು ಜನರು ಗುಂಪಾಗಿ ಕುಳಿತು ಕೊಂಡು ಹಣ ಹಚ್ಚಿ ಪಣ ತೋಟ್ಟು ಇಸ್ಪಿಟ್ ಎಲೆಗಳ ಅಂದರ ಬಾಹರ್ ನಸಿಬಿನ ಜೂಜಾಟವನ್ನು ಆಡುತ್ತಿದ್ದಾರೆ ಎಂದು ಪೋನ್ ಮುಖಾಂತರ ಖಚಿತ ಭಾತ್ಮಿಯನ್ನು ತಿಳಿದು ಬಂದ ಮೇರೆಗೆ  ಸಿಬ್ಬಂದಿಯೊಂದಿಗೆ ಬಸವಕಲ್ಯಾಣ ನಗರದ ಹೋಸಪೇಟಗಲ್ಲಿಯಲ್ಲಿ ಮಾಹದೇವ ಮಂದಿರ ಹತ್ತಿರ ಹೋಗಿ ನೋಡಿದಾಗ ಸಾರ್ವಜನಿಕ ಸ್ಥಳದಲ್ಲಿ 05 ಜನರು ಗುಂಪಾಗಿ ಕುಳಿತುಕೊಂಡು   ಇಸ್ಪಿಟ್ ಎಲೆಗಳ ಅಂದರ ಬಾಹರ ನಸೀಬಿನ ಜೂಜಾಟವನ್ನು ಹಣ ಹಚ್ಚಿ ಪಣ ತೊಟ್ಟು ಆಡುತ್ತಿರು ವುದನ್ನು ನೋಡಿ  ದಾಳಿಮಾಡಿ   1] ಶಿವಶಂಕರ ತಂದೆ ರೇವಣಸಿದ್ಧಪ್ಪಾ ಕಣಸೂರೆ ವಯಸ್ಸು:36 ವರ್ಷ ಜಾತಿ:  ಇವನ ಹತ್ತಿರವಿದ್ದ ನಗದು ಹಣ 600/-ರೂ ಸಿಕ್ಕ್ಕಿರುತ್ತವೆ, 2] ಶಿವಪುತ್ರ ತಂದೆ ಕರಬಸಪ್ಪಾ ಚಿರಡೆ ವಯಸ್ಸು:58 ವರ್ಷ ಇವನ ಹತ್ತಿರವಿದ್ದ  400/-ರೂ ಸಿಕ್ಕ್ಕಿರುತ್ತವೆ,3] ಶಿವಶಂಕರ ತಂದೆ ಶಾಂತಪ್ಪಾ ಕುರಕುಟೆ ವಯಸ್ಸು:48ವರ್ಷ ಇವನ ಹತ್ತಿರವಿದ್ದ ನಗದು ಹಣ 500/-ರೂ ಸಿಕ್ಕ್ಕಿರುತ್ತವೆ,4]  ನಾಗಿಂದ್ರಪ್ಪಾ ತಂದೆ ಮಾಹದೇವಪ್ಪಾ ಕೇರಮಗಿ ವಯಸ್ಸು:36ವರ್ಷ ಇವನ ಹತ್ತಿರವಿದ್ದ ನಗದು ಹಣ 500/-ರೂ ಸಿಕ್ಕ್ಕಿರುತ್ತವೆ, 5]  ಶ್ರೀಶೈಲ್ @ಸಿದ್ಧು ತಂದೆ ಶಿವಾನಂದ ಸೋರಡೆ ವಯಸ್ಸು:26ವರ್ಷ ಇವನ ಹತ್ತಿರವಿದ್ದ ನಗದು ಹಣ 400/-ರೂ ಸಿಕ್ಕ್ಕಿರುತ್ತವೆ 6]  ರವಿ ತಂದೆ ಶಿವಶಂಕರೇಪ್ಪಾ ಪಾಟೀಲ್ ವಯಸ್ಸು:46ವರ್ಷ ಜಾತಿ:ಲಿಂಗಾಯತ ಇವನ ಹತ್ತಿರವಿದ್ದ ನಗದು ಹಣ 600/-ರೂ ಸಿಕ್ಕ್ಕಿರುತ್ತವೆ, ಹಾಗು ಅಪರಾಧ ಸ್ಥಳದಲ್ಲಿ ಪರಿಶಿಲಿಸಿ ನೋಡಲು ನಗದು ಹಣ 340/-ರೂ ಮತ್ತು 52 ಇಸ್ಪಿಟ್ಎಲೆಗಳು ಸಿಕ್ಕಿರುತ್ತವೆ. ಸದರಿ ಅಪರಾಧ ಸ್ಥಳದಲ್ಲಿ ಸಿಕ್ಕಿರುವ ಮತ್ತು ಆರೋಪಿತರ ಆಧೀನದಲ್ಲಿ ಸಿಕ್ಕಿರುವ ಒಟ್ಟು ನಗದು ಹಣ 3340/-ರೂ ಮತ್ತು 52ಇಸ್ಪಿಟ್ ಎಲೆಗಳು  ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 72/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ: 04/05/2020 ರಂದು 1415 ಗಂಟೆಗೆ  ಪಿಎಸ ಐ ರವರು  ಠಾಣೆಯಲ್ಲಿ ಇದ್ದಾಗ ತರನಳ್ಳಿ ಗ್ರಾಮದ ಪ್ರಭು ನವಣೆ ಇವರ ಕೀರಾಣಾ ಅಂಗಡಿಯ ಮುಂದೆ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಅಂದರ ಬಾಹರ ಎಂಬ ನಸೀಬಿನ ಇಸ್ಪಟ ಜೂಜಾಟ ಪಣದಲ್ಲಿ ಹಣಕಟ್ಟಿ ಆಡುತ್ತಿದ್ದಾರೆ ಅಂತ ಖಚಿತವಾದ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ನೋಡಿದಾಗ  ಸಾರ್ವಜನಿಕ ರಸ್ತೆಯ ಬದಿಯಲ್ಲಿ 4 ಜನರು ದುಂಡಾಗಿ ಕುಳಿತುಕೊಂಡು ಅಂದರ ಬಾಹರ ಎಂಬ ನಸೀಬಿನ ಇಸ್ಪಟ ಜೂಜಾಟ ಪಣದಲ್ಲಿ ಹಣಕಟ್ಟಿ ಆಡುತ್ತಿರುವುದು ನಾವು ಖಚಿತ ಪಡಿಸಿಕೊಂಡು  ಜೂಜಾಟ ಆಡುತ್ತಿರುವ ಜನರ ಮೆಲೆ ದಾಳಿ ಮಾಡಿ   3 ಜನರಿಗೆ ಹಿಡಿದುಕೊಂಡಾಗ ಇನ್ನೊಬ್ಬ ವ್ಯಕ್ತಿ ತನ್ನ ಮುಂದೆ ಇರುವ ಹಣ ಸ್ಥಳದಲ್ಲಿ ಬಿಟ್ಟು ಓಡಿ ಹೊಗಿರುತ್ತಾನೆ.  1] ಪ್ರಭು ತಂದೆ ವೀರಶೇಟ್ಟಿ ನವಣೆ ವಯ: 40 ವರ್ಷ ಜಾತಿ; ಲಿಂಗಾಯತ ಉ: ಒಕ್ಕಲುನತ ಸಾ: ತರನಳ್ಳಿ, ರವರ ಮುಂದೆ 400/- ರೂಪಾಯಿ, 2] ಅಮೃತ ತಂದೆ ಗುರಪ್ಪಾ ನವದಗಿ ವಯ: 45 ವರ್ಷ ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ತರನಳ್ಳಿ, ರವರ ಮುಂದೆ 350/-ರೂಪಾಯಿ, 3] ರಾಮಶೇಟ್ಟಿ ತಂದೆ ಶಂಕರೆಪ್ಪಾ ಕೊಸಮೆ ವಯ: 48 ವರ್ಷ ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ತರನಳ್ಳಿ, ರವರ ಮುಂದೆ 550/- ರೂಪಾಯಿ ಇರುತ್ತವೆ. ಮತ್ತು ಓಡಿ ಹೊದ ವ್ಯಕ್ತಿ ಹೆಸರು 4] ನೀಲಕಂಠರಾವ ತಂದೆ ಬಂಡೆಪ್ಪಾ ಬಿರಾದಾರ ವಯ: 58 ವರ್ಷ ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ತರನಳ್ಳಿ, ಅಂತ ತಿಳಿಸಿದ್ದು ಆತನ ಮುಂದೆ 250/- ರೂಪಾಯಿ ಇರುತ್ತದೆ.  ಹೀಗೆ ಅಪರಾಧ ಸ್ಥಳದಲ್ಲಿ ಒಟ್ಟು ನಗದು ಹಣ 1900/- ರೂಪಾಯಿ ಮತ್ತು 52 ಇಸ್ಪಟ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಖಟಕಚಿಂಚೊಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 24/2020 ಕಲಂ 87 ಕೆಪಿ ಕಾಯ್ದೆ:-

ದಿನಾಂಕ-04/05/2020 ರಂದು 15:00 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ಖಟಕ ಚಿಂಚೋಳಿ ಗ್ರಾಮದ ಶಿವಾರದಲ್ಲಿ ಭೀಮರಾವ ಡಾವರಗಾಂವೆ ರವರ ಹೊಲದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಕೇಲವು ಜನರು ಪರೇಲ್ ಎಂಬ ಮೂರು ಎಲೆಯ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ  ಬರದಾಪೂರ ಗ್ರಾಮಕ್ಕೆ ಹೊಗುವ ಕಚ್ಚಾ ರಸ್ತೆಯ ಮೇಲೆ ಕೆಲವು ಜನರು ದುಂಡಾಗಿ ಕುಳಿತು ಪರೇಲ ಎಂಬ ನಸೀಬಿನ ಜೂಜಾಟ ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು  ದಾಳಿ ಮಾಡಿ ಅವರಿಗೆ ಹಿಡಿದುಕೊಂಡು ಅವರ ಹೆಸರು ಮತ್ತು ವಿಳಾಸ ವಿಚಾರಿಸಲು 1) ಪ್ರಭು ತಂದೆ ಗುರುನಾಥ ಕಮಠಾಣೆ 2) ಶಾಂತಯ್ಯಾ ತಂದೆ ಗುಂಡಯ್ಯಾ ಸ್ವಾಮಿ 3) ಶಿವುಕುಮಾರ ತಂದೆ ಬಸವಣಪ್ಪಾ ಭದ್ರಪ್ಪಾ 4) ಭೀಮರಾವ ತಂದೆ ಗುರುಲಿಂಗಪ್ಪಾ ಡಾವರಗಾಂವೆ 5) ಬೋಮಗೊಂಡೇಶ್ವರ ತಂದೆ ವೈಜಿನಾಥ ಎಲ್ಲರೂ ಸಾ-ಖಟಕ ಚಿಂಚೋಳಿ ಅಂತಾ ತಿಳಿಸಿದ್ದು ನಂತರ ಸದರಿ ಪಂಚರ ಸಮಕ್ಷಮ ಆಟದಲ್ಲಿದ್ದ ಒಟ್ಟು ಹಣ 16420/- ರೂಪಾಯಿ ಮತ್ತು 52 ಇಸ್ಪೀಟ ಎಲೆಗಳು ಹಾಗೂ 4 ಮೋಬಾಯಿಲ್ ಫೋನಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 113/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ 04/05/2020 ರಂದು 14:00 ಗಂಟೆಗೆ ಆರೋಪಿತರಾದ 1] ಖಂಡು ತಂದೆ ಬಾಬುರಾವ ಏಕಲಾರೆ ಸಾ: ಜನತಾ ಕಾಲೋನಿ ಭಾಲ್ಕಿ 2] ಸಂಗಮೇಶ ತಂದೆ ಮಾಣಿಕರಾವ ಜಾಧವ ಸಾ: ಜನತಾ ಕಾಲೋನಿ ಭಾಲ್ಕಿ 3] ಅಮರ ತಂದೆ ಬಕ್ಕಪ್ಪಾ   ಸಾ: ವಿಜಯ ಮಹಾಂತೇಶ್ವರ ಗಲ್ಲಿ ಭಾಲ್ಕಿ 4] ಬಸವರಾಜ ತಂದೆ ಜಗನ್ನಾಥ ಮೂಲಗೆ ಸಾ: ದೇವಿನಗರ ಭಾಲ್ಕಿ ಅಂತಾ 5] ಶಿವಕುಮಾರ ತಂದೆ ಗುರಪ್ಪಾ ಶಿಂಧೆ ಸಾ: ಜನತಾ ಕಾಲೋನಿ ಭಾಲ್ಕಿ ರವರು ಭಾಲ್ಕಿಯ ಕಾರಂಜಾ ಕಛೇರಿಯ ಹಿಂಬದಿಯಲ್ಲಿ ಹಣವನ್ನು ಪಣಕ್ಕೆ ಇಟ್ಟು ಪರೆಲ ಎಂಬ ನಸೀಬಿನ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಂದ ಮಾಹಿತಿ ಮೇರೆಗೆ ಪಿ.ಎಸ್.ಐ (ಕಾ.ಸೂ-2) ರವರು  ದಾಳಿ ಮಾಡಿ ಇಸ್ಪೆಟ ಜೂಜಾಟದಲ್ಲಿ ತೋಡಗಿಸಿದ ಒಟ್ಟು ನಗದು ಹಣ 3300 ರೂ ಹಾಗು 52 ಇಸ್ಪೇಟ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.