ದಿನಂಪ್ರತಿ  ಅಪರಾಧಗಳ ಮಾಹಿತಿ ದಿನಾಂಕ: 04-10-2020

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 128/2020, ಕಲಂ. 279, 338, 304 () ಐಪಿಸಿ ಜೊತೆ 187 .ಎಮ್.ವಿ ಕಾಯ್ದೆ :-  

ದಿನಾಂಕ 03-10-2020 ರಂದು ಫಿರ್ಯಾದಿ ಮೋತಿಬಾತಿ ಗಂಡ ಬದ್ದು ಸಿ.ರಾಠೋಡ ಸಾ: ಫತ್ತುನಾಯಕ ತಾಂಡಾ ಭುಯ್ಯಾರ (ಕೆ), ತಾ: ಚಿಂಚೋಳಿ, ಜಿ: ಕಲಬುರ್ಗಿ ರವರ ಮಗನಾದ ಶಂಕರ ತಂದೆ ಬದ್ದು ಸಿ.ರಾಠೋಡ, ವಯ: 36 ವರ್ಷ ಇತನು ತನ್ನ ಮಗನಾದ ಸಚಿನ್ ವಯ 17 ವರ್ಷ ಇಬ್ಬರು ಮನೆಯಿಂದ ಚಿಟಗುಪ್ಪಾಕ್ಕೆ ಸೋಯಾಬೀನ ಮಾರಾಟ ಮಾಡಲು ರೇಟ ಕೇಳಲು ಸ್ಯಾಂಪಲ ತೆಗೆದುಕೊಂಡು ಟಿ.ವಿ.ಎಸ್ ಮೋಟರ್ ಸೈಕಲ್ ನಂ. ಕೆಎ-39/ಎಲ್-6634 ನೇದರ ಮೇಲೆ ಕೊಡಂಬಲ ಮಾರ್ಗವಾಗಿ ಚಿಟಗುಪ್ಪಾಕ್ಕೆ ಹೋಗುವಾಗ ಕೊಡಂಬಲ ಚಿಟಗುಪ್ಪಾ ರೋಡ ಚಿಟಗುಪ್ಪಾ ಶಿವಾರದ ಮನೋಜ ಶರ್ಮಾ ರವರ ಹೋಲದ ಹತ್ತಿರದಲ್ಲಿ ಮಣ್ಣಿನ ರಸ್ತೆಯಿಂದ ಡಾಂಬರ ರಸ್ತೆಗೆ ಕೂಡುವಾಗ ಎದುರಿನಿಂದ ಬಂದ ಬುಲೆರೋ ಜೀಪ ನಂ. ಕೆಎ-39/ಎಮ್-1827 ನೇದರ ಚಾಲಕನಾದ ಆರೋಪಿಯು ತನ್ನ ಜೀಪನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಶಂಕರನ ಮೋಟರ ಸೈಕಲಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿದ್ದು, ಸದರಿ ಅಪಘಾತದಿಂದ ಶಂಕರನಿಗೆ ತಲೆ ಬಲಗಡೆ ಭಾರಿ ರಕ್ತಗಾಯ, ಬಲ ಮೋಳಕಾಲ ಕೆಳಗೆ ಮೂಳೆ ಮುರಿದು ಭಾರಿ ಗುಪ್ತಗಾಯ, ಬಲಫಕಾಳಿಯಲ್ಲಿ ತರಚಿದ ಗಾಯ, ಎದೆಗೆ ಗುಪ್ತಗಾಯವಾಗಿ, ಮೂಗಿನಿಂದ ರಕ್ತಗಸ್ರಾವವಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಹಾಗೂ ಮೊಮ್ಮಗ ಸಚಿನ ಇತನಿಗೆ ಮೇಲ್ತುಟಿಗೆ ರಕ್ತಗಾಯ, ತಲೆಗೆ ಗುಪ್ತಗಾಯ, ಎಡಗಾಲ ಬೆರಳುಗಳಿಗೆ ತರಚಿದ ರಕ್ತಗಾಯ, ಎದೆಗೆ ಗುಪ್ತಗಾಯವಾಗಿ ಬೇಹೋಷಾಗಿರುತ್ತಾನೆ, ನಂತರ ದಾರಿ ಹೋಕರು ಇಬ್ಬರನ್ನು ಚಿಟಗುಪ್ಪಾ ಸರಕಾರಿ ಆಸ್ಪತ್ರಗೆ ಸಾಗಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮೇಹಕರ ಪೊಲೀಸ ಠಾಣೆ ಅಪರಾಧ ಸಂ. 69/2020, ಕಲಂ. 32, 34 ಕೆ.ಇ ಕಾಯ್ದೆ :-

ದಿನಾಂಕ 03-10-2020 ರಂದು ಗುಂಜರಗಾ ಗ್ರಾಮದ ರಾವಣ ಮಂದಿರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರಾಯಿ ಮಾರಾಟ ಮಾಡುತ್ತಿದ್ದಾನೆಂದು ನಂದಕುಮಾರ ಪಿ.ಎಸ್.ಐ ಮೇಹಕರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು್, ಠಾಣೆಯ ಸಿಬ್ಬಂದಿಯವರೊಡನೆ ಅಟ್ಟರಗಾ ರೋಡ ಮುಖಾಂತರ ಗುಂಜರಗಾ ಗ್ರಾಮದ ರಾವಣ ಮಂದಿರದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ರಾವಣ ಮಂದಿರದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಸುರೇಶ ತಂದೆ ಪ್ರತಾಪ ನಿಡವಂಚೆ ವಯ.25 ವರ್ಷ ಜಾತಿ.ಮರಾಠಾ ಸಾ: ಗುಂಜರಗಾ ಇತನು ಒಂದು ಪ್ಲಾಸ್ಟಿಕ ಚೀಲದಲ್ಲಿ ಸಾರಾಯಿ ಇಟ್ಟುಕೊಂಡು ಮಾರಾಟ ಮಾಡುತ್ತ ನಿಂತಿದ್ದು ಆತನು ಪೊಲೀಸ್ ಜೀಪ ನೋಡಿ ಪ್ಲಾಸ್ಟಿಕ ಚೀಲ ಅಲ್ಲಿ ಬಿಟ್ಟು ಓಡುತ್ತಿರುವಾಗ ಸಿಬ್ಬಂದಿಯವರ ಸಹಾಯದಿಂದ ಬೆನ್ನ ಹತ್ತಿ ಹಿಡಿದು ಪ್ಲಾಸ್ಟಿಕ ಚೀಲವನ್ನು ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು ಅದರಲ್ಲಿ 1) 90 ಎಮ್.ಎಲ್. ಸಾಮಥ್ರ್ಯವುಳ್ಳ ಒಟ್ಟ್ಟು 96 ಯು.ಎಸ. ವಿಸ್ಕಿ ಸರಾಯಿ ಪ್ಲಾಸ್ಟಿಕ ಬಾಟಲಗಳು ಅ.ಕಿ 3372/- ರೂ ನೇದು ಇದ್ದವು, ನಂತರ ಆತನಿಗೆ ಸರಾಯಿ ಮಾರಾಟ ಮಾಡಲು ಸರಕಾರದಿಂದ ಪರವಾನಗಿ ಇದೆಯೇ ಅಂತ ವಿಚಾರಿಸಲು ಅವನು ನನ್ನ ಹತ್ತಿರ ಯಾವುದೆ ಸರಾಯಿ ಮಾರಾಟ ಮಾಡುವ ಪರವಾನಗಿ ಇಲ್ಲ ಅಂತ ಹೇಳಿರುತ್ತಾನೆಂದು ನಂತರ ಸದರಿ ಸರಾಯಿಯನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಸಂತಪೂರ ಪೋಲಿಸ ಠಾಣೆ ಅಪರಾಧ ಸಂಖ್ಯೆ 71/2020 ಕಲಂ 78(3) ಕೆಪಿ ಕಾಯ್ದೆ :-

 

ದಿನಾಂಕ 03-10-2020 ರಂದು 1130 ಗಂಟೆಗೆ ಸಿಪಿಐ ಟಿ.ಆರ್. ರಾಘವೇಂದ್ರ ರವರು ಸಂತಪೂರ ಪೊಲೀಸ ಠಾಣೆಯಲ್ಲಿದ್ದಾಗ ಸಂತಪೂರ ಗ್ರಾಮದ ಕಟ್ಟಿಗೆ ಮಷೀನ್ ಹತ್ತಿರ ಒಬ್ಬ ವ್ಯಕ್ತಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿರುತ್ತಾನೆ ಅಂತಾ  ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ಕಟ್ಟಿಗೆ ಮಷೀನ ಅಡ್ಡಾದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಒಬ್ಬ ವ್ಯಕ್ತಿಯು ಕಟ್ಟಿಗೆಯ ಅಡ್ಡಾದ ಮುಂದೆ ಇರುವ ಪಾನ ಡಬ್ಬಾದಲ್ಲಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ ಕೂಗಿ ಕರೆದು ಅದೃಷ್ಟ ಸಂಖ್ಯೆಗೆ ಹಣ ಹಚ್ಚ್ಚಿದರೆ 1/-ರೂ ಗೆ 80/-ರೂ 10 ರೂ ಗೆ 800/-ರೂ ಕೊಡುತ್ತೇವೆ ಎಂದು ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅನ್ನುವ ಅಂಕಿ ಸಂಖ್ಯೆಯ ಚೀಟಿಗಳು ಬರೆದುಕೊಳ್ಳುತ್ತಿದ್ದನ್ನು ನೋಡಿ ಖಚಿತಪಡಿಸಿಕೊಂಡು ದಾಳಿ ಮಾಡಿದಾಗ  ಅದೃಷ್ಟ ಸಂಖ್ಯೆಗೆ ಹಣ ಕೊಡುತ್ತಿದ್ದ ಜನರು ಅಲ್ಲಿಂದ ಓಡಿ ಹೋಗಿರುತ್ತಾರೆ. ಸದರಿ ಹಣ ಪಡೆದುಕೊಳ್ಳುತ್ತಿದ್ದ ವ್ಯಕ್ತಿಗೆ ಹಿಡಿದುಕೊಂಡು ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಜಮೀಲ ಪಾಶಾ @ ಜಮ್ಮು ತಂದೆ ಸಮದಮಿಯ್ಯಾ ಖುರೇಶಿ ವಯ 20 ವರ್ಷ ಜಾತಿ ಮುಸ್ಲೀಂ ಉದ್ಯೋಗ ಪಾನ ಬೀಡ ವ್ಯಾಪಾರ ಸಾ: ಹನುಮಾನ ಮಂದಿರ ಹತ್ತಿರ ಸಂತಪೂರ ಅಂತ ತಿಳಿಸಿರುತ್ತಾನೆ. ಪಂಚರ ಸಮಕ್ಷಮ ಆತನ ಅಂಗ ಶೋಧನೆ ಮಾಡಿದಾಗ ಆತನ ಹತ್ತಿರ ನಗದು ಹಣ 1] 100/-ರೂ ಮುಖಬೆಲೆಯ ಮೂರು ನೊಟುಗಳು ಒಟ್ಟು 300/-ರೂ. 2] 50/-ರೂ ಮುಖಬೆಲೆಯ 6 ನೋಟು ಒಟ್ಟು 300/-ರೂ. 3] 20/-ರೂ ಮುಖಬೆಲಯ ಎರಡೂ ನೊಟು ಒಟ್ಟು 40/-ರೂ. 4] 10/-ರೂ. ಮುಖಬೆಲಯ 29 ನೋಟುಗಳು ಒಟ್ಟು 290/-ರೂ. ಹೀಗೆ ಒಟ್ಟು 930/-ರೂ. ಅಂಕಿ ಸಂಖ್ಯೆ ಬರೆದ 1 ಮಟಕಾ ಚೀಟಿ, ಒಂದು ಪೆನ್ನು ಇದ್ದವು ಸದರಿಯವನು ಅಕ್ರಮವಾಗಿ ಹಣ ಗಳಿಸುವ ಉದ್ದೇಶದಿಂದ ಸಾರ್ವಜನಿಕರಿಂದ ಅಂಕಿ ಸಂಖ್ಯೆ ಮೇಲೆ ಹಣ ಪಡೆದುಕೊಂಡು ಅದೃಷ್ಟದ ಆಟದ ಮಟಕಾ ಚೀಟಿಗಳು ಬರೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿರುತ್ತಾನೆ. ಸದರಿಯವನ ಬಳಿ ಇದ್ದ ನಗದು ಹಣ 930/-ರೂ. 1 ಮಟಕಾ ಚೀಟಿ 1 ಪೆನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.