ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 04-04-2020

ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 14/2020 ಕಲಂ ಕಲಂ 32 34 ಕೆ.ಇ. ಕಾಯ್ದೆ :-

ದಿನಾಂಕ 03/04/2020 ರಂದು 1200 ಗಂಟೆಗೆ ಶ್ರೀ ಕ್ರೃಷ್ಣಕುಮಾರ ಪಿ.ಎಸ್.ಐ ಠಾಣೆಯಲ್ಲಿದ್ದಾಗ ಸಿಂದೋಲ್ ಗ್ರಾಮದ ಬಸವರಾಜ ಮಾಳಗೆ ರವರ ಖುಲ್ಲಾ ಜಾಗೆಯಲ್ಲಿ ಆಕ್ರಮವಾಗಿ ಸಾರಾಯಿಯನ್ನು ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೊರಟು ಸಿಂದೋಲ್ ಗ್ರಾಮದ ಹಿಮಯತ್ಅಲಿ ತಂದೆ ಮಸ್ತಾನಸಾಬ ರವರ ಮನೆಯ ಹತ್ತಿರ ಜೀಪನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಿ ಬಸರಾಜ ಮಾಳಗೆ ರವರ ಖುಲ್ಲಾ ಜಾಗದ ಕಡೆ ನೋಡಲಾಗಿ ಅಲ್ಲಿ ಮೂರು ನಾಲ್ಕು ಜನ ಗುಂಪಾಗಿ ನಿಂತಿರುವುದನ್ನು ನೋಡಿ ಮಾಹಿತಿಯನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಸಾರಾಯಿ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದು ಅವನನ್ನು ವಿಚಾರಿಸಲಾಗಿ ತನ್ನ ಹೆಸರು ತುಕಾರಾಮ ತಂದೆ ಧೂಳಪ್ಪಾ ಚರಕಪಳ್ಳಿ ವಯಃ 30 ವರ್ಷ ಜಾತಿಃ ಎಸ್.ಟಿ ಗೊಂಡ ಉಃ ಕೂಲಿಕೆಲಸ ಸಾಃ ಸಿಂದೋಲ್ ಅಂತ ತಿಳಿಸಿದನು. ಅವನ ಹತ್ತಿರ ಇದ್ದ ಕಾಟನ್ ಬಾಕ್ಸ್ನ್ನು ನೋಡಲಾಗಿ ಸದರಿ ಕಾಟನ್ ಪರಿಶೀಲಿಸಿ ನೋಡಲಾಗಿ ಯು.ಎಸ್. ವಿಸ್ಕಿ 90 ಒಐ ವುಳ್ಳ 87 ಪ್ಲಾಸ್ಟಿಕ್ ಬಾಟಲ್ಗಳು ಇದ್ದು ಪ್ರತಿ ಬಾಟಲ್ ಮೇಲೆ 30:32 ಪೈಸೆ ಅಂತ ಬೆಲೆ ಬರೆದಿದ್ದು ಒಟ್ಟು ಅಂದಾಜು ಕಿಮ್ಮತ್ತು 2638 ರೂ. ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.