ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 04-01-2021

 

ಖಟಕಚಿಂಚೋಳಿ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 01/2020, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 03-01-2021 ಫಿರ್ಯಾದಿ ವಿಜಯಕುಮಾರ ತಂದೆ ಬಾಬುರಾವ ವಯ: 40 ವರ್ಷ, ಜಾತಿ: ಲಿಂಗಾಯತ, ಸಾ: ಗೋರಚಿಂಚೊಳಿ ರವರ ತಮ್ಮನಾದ ದೀಲಿಪಕುಮಾರ ತಂದೆ ಬಾಬುರವ ವಯ 35 ವರ್ಷ, ಇತನು ಸುಮಾರು ಎರಡು ಮೂರು ದಿವಸಗಳ ಹಿಂದೆ ತನ್ನ ಹೊಲಕ್ಕೆ ನೀರು ಹಾಯಿಸಲು ನದಿಯ ಆಚೆಯ ಕಡೆ ಇರುವ ಶ್ರೀಮಂತ ಅಮದಾಬಾದ ಅವರ ಹೊಲದಿಂದ ಪೈಪು ತರುವಾಗ ಆಕಸ್ಮಿಕವಾಗಿ ನಾರಾಂಜಾ ನದಿಯಲ್ಲಿ ಬಿದ್ದು ಈಜು ಬಾರದ ಕಾರಣ ಮೃತಪಟಿದ್ದು ಇರುತ್ತದೆ, ದೀಲಿಪಕುಮಾರ ಇತನ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 01/2020, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಶಕುಂತಲಾ ಗಂಡ ಶ್ರೀಮಂತ ಪಾಟೀಲ್ ವಯ: 32 ವರ್ಷ, ಜಾತಿ: ಲಿಂಗಾಯತ, ಸಾ: ಸಸ್ತಾಪೂರ, ತಾ: ಬಸವಕಲ್ಯಾಣ ರವರ ಗಂಡನಾದ ಶ್ರೀಮಂತ  ತಂದೆ ಮಡಿವಾಳಪ್ಪಾ ಪಾಟೀಲ್  ಇವರಿಗೆ ಲಕ್ವಾ ಹೋಡೆದ ಪ್ರಯುಕ್ತ ಆನಾರೋಗ್ಯದಿಂದ  ಬಳಲುತ್ತಿದ್ದು ಹಾಗೂ ತನ್ನ ತಂದೆ ಬ್ಯಾಂಕಿನಲ್ಲಿ ಮಾಡಿದ ಸಾಲವನ್ನು ಹೇಗೆ ತಿರಿಸುತ್ತಾರೆ ನನ್ನ ಕೈಯಿಂದ ಕೆಲಸ ಮಾಡಲು ಅಗುತ್ತಿಲ್ಲವೆಂದು ದಿನಾಲು ಹೇಳಿ  ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 02-01-2021 ರಂದು 2330 ಗಂಟೆಯಿಂದ ದಿನಾಂಕ 03-01-2021 ರಂದು 0600 ಗಂಟೆಯ ಮದ್ಯದ ಅವಧಿಯಲ್ಲಿ ಮನೆಯಲ್ಲಿ ತಗಡದ ಕೆಳಗೆ ಇದ್ದ ಕಬ್ಬಿಣದ ಪೈಪಿಗೆ ನೇಣು ಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿರುತ್ತಾರೆ, ತನ್ನ ಗಂಡನ ಸಾವಿನ ಬಗ್ಗೆ ನನಗೆ ಮತ್ತು ನನ್ನ ಕುಟುಂಬದವರಿಗೆ ಯಾರ ಮೆಲೆ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 03-01-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 02/2021, ಕಲಂ. 279, 304(ಎ) ಐಪಿಸಿ :-

ದಿನಾಂಕ 02-01-2021 ರಂದು ಫಿರ್ಯಾದಿ ಮಹಾನಂದಾ ಗಂಡ ಕೃಷ್ಣಾ ಪಂಚಾಳ ವಯ: 30 ವರ್ಷ, ಜಾತಿ: ಪಂಚಾಳ, ಸಾ: ಕಾರಾಮುಂಗಿ, ತಾ: ನಾರಾಯಣಖೇಡ ರವರ ಗಂಡ ಕೃಷ್ಣಾ ತಂದೆ ಮಾಣಿಕಪ್ಪ ಪಂಚಾಳ ಇವರು ಹೈದ್ರಾಬಾದದಿಂದ ಹಳ್ಳಿಖೇಡ (ಬಿ) ಗ್ರಾಮಕ್ಕೆ ತನ್ನ ಹೊಂಡಾ ಎಕ್ಟೀವಾ ಮೋಟಾರ ಸೈಕಲ ನಂ. ಎಪಿ-09/ಬಿ.ವಾಯ್-2623 ನೇದರ ಮೇಲೆ ಬರುತ್ತಿರುವಾಗ ರೇಕುಳಗಿ ಬ್ರೀಡ್ಜ ಹತ್ತಿರ ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಮೋಟಾರ ಸೈಕಲ ಸ್ಕೀಡ ಆಗಿ ಮೋಟಾರ ಸೈಕಲ ಸಮೇತ ರೋಡಿನ ಪಕ್ಕದಲ್ಲಿರುವ ಹೊಲದಲ್ಲಿ ಬಿದ್ದು ಭಾರಿಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 03-01-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.