ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 03-06-2020

 

ಬೀದರ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 03/2020, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 02-06-2020 ರಂದು ಬೆನಕನಳ್ಳಿ ಭವಾನಿ ಮಂದಿರದಲ್ಲಿ ರಾಜು ಗಡಿಗೆ ರವರ ದೇವರ ಕಾರ್ಯಕ್ರಮ ಇದ್ದರಿಂದ ಸದರಿ ಕಾರ್ಯಕ್ರಮಕ್ಕೆ ಫಿರ್ಯಾದಿ ರವಿ ತಂದೆ ತಿಪ್ಪಣ್ಣಾ ಚಿಟ್ಟೆದೋರ ವಯ: 36 ವರ್ಷ, ಜಾತಿ: ಎಸ್.ಟಿ,  ಸಾ: ಸೊಲಪೂರ, ತಾ: ಜಿ: ಬೀದರ ಮತ್ತು ತಮ್ಮೂರ ಪೀರಪ್ಪಾ ತಂದೆ ಸಿದ್ರಾರಾಮಪ್ಪಾ ಮೇತ್ರೆ ವಯ: 50 ವರ್ಷ, ಜಾತಿ: ಎಸ್.ಟಿ ಮತ್ತು ಇತರರು ಬೆನಕನಳ್ಳಿ ಗ್ರಾಮಕ್ಕೆ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ಫಿರ್ಯಾದಿಯು ತನ್ನ ಮೋಟಾರ ಸೈಕಲ ಮೇಲೆ ಮತ್ತು ಪೀರಪ್ಪಾ ರವರು ಪಂಡಿತ ತಂದೆ ಮಲ್ಲಪ್ಪಾ ಮಲಕನೋರ ರವರ ಮೋಟಾರ ಸೈಕಲ ಮೇಲೆ ಬೆನಕನಳ್ಳಿಯಿಂದ ಸೋಲಪೂರಕ್ಕೆ ಬರುತ್ತಿರುವಾಗ ಬಾಪೂರ ಹನುಮಾನ ಮಂದಿರದ ಹತ್ತಿರ ಬಂದಾಗ ಗುಡುಗು ಗಾಳಿ ಮಳೆ ಬರುತ್ತಿರುವಾಗ ಎಲ್ಲರು ರೋಡಿನ ಮೇಲೆ ಮೋಟಾರ ಸೈಕಲ ನಿಲ್ಲಿಸಿ ಬಾಪೂರ ಶಿವಾರದಲ್ಲಿನ ಗುಂಬಜ ಹತ್ತಿರ ಹೋದಾಗ ಒಮ್ಮೇಲೆ ಮಳೆ ಪ್ರಾರಂಭವಾಗಿ ಗುಡುಗು ಮಿಂಚು ಉಂಟಾಗಿ ಸಿಡಿಲು ಪೀರಪ್ಪಾ ತಂದೆ ಸಿದ್ರಾಮಪ್ಪಾ ಮೇತ್ರೆ ರವರ ಮೇಲೆ ಬಿದ್ದಾಗ  ಪಿರಪ್ಪಾ ರವರು ಸ್ಥಳದಲ್ಲಿಯೇ ಮೃತ್ತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ಸಂ. 07/2020, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 02-06-2020 ರಂದು ಫಿರ್ಯಾದಿ ಸುಮಯ್ಯಾ ಪರವೀನ ಗಂಡ ಮಹ್ಮದ ನಿಜಾಮೋದ್ದಿನ ಇಮಾಮಿ ಸಾ: ಚೌತಾ ಮೋಹಲ್ಲಾ ಚಿಟಗುಪ್ಪಾ ರವರ ಗಂಡನಾದ ಮಹ್ಮದ ನಿಜಾಮೋದ್ದಿನ ರವರು ತನ್ನ ಗೆಳೆಯರಾದ ವಾಜೀದ ಮತ್ತು ಸಂಜುಕುಮಾರ ರವರೆಲ್ಲರು ಕಟ್ಟಿಗೆ ತರಲು ಹೊಲಕ್ಕೆ ಹೋದಾಗ ಮಳೆ ಬರುತ್ತಿರುವುದರಿಂದ ಚಿಟಗುಪ್ಪಾ ಶಿವಾರದ ಚರ್ಚ ಹತ್ತಿರ ಇರುವ ಶಿವಕುಮಾರ ಪಾಟೀಲ ರವರ ಹೊಲದಲ್ಲಿನ ಮರದ ಕೆಳಗೆ ನಿಂತಾಗ ಮಳೆ ಬರುವ ಕಾಲಕ್ಕೆ ಆಕಸ್ಮಿಕವಾಗಿ ಸಿಡಿಲು ಬಿದ್ದ ಪ್ರಯುಕ್ತ ಫಿರ್ಯಾದಿಯವರ ಗಂಡನಿಗೆ ಎಡಗಣ್ಣಿನ ಕೆಳಗೆ ಸಿಡಿಲು ಬಡಿದು ಕಪ್ಪು ಬಣ್ಣವಾಗಿ ಮುಖ ಕಂದುಗಟ್ಟಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ, ಅವರ ಜೊತೆ ಇದ್ದ ವಾಜೀದ ಈತನಿಗೆ ನೋಡಲು ಬಲಗಾಲಿನ ಮೊಳಕಾಲ ಕೆಳಗೆ ಸಿಡಿಲು ಬಡಿದು ಗಾಯವಾಗಿರುತ್ತದೆ, ಸಂಜುಕುಮಾರ ಈತನಿಗೆ ನೋಡಲು ಎಡಗೈ ಹತ್ತಿರ, ಎಡಗಡೆ ಎದೆಯ ಹತ್ತಿರ, ಎಡಗಡೆ ತಿಕದಿಂದ ಮೊಳಕಾಲದವರೆಗೆ ಮತ್ತು ಬಲಗಡೆ ತಿಕದಿಂದ ಮೊಳಕಾಲದವರೆಗೆ ಚರ್ಮ ಸುಲಿದು ಗಾಯಗಳಾಗಿರುತ್ತವೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 44/2020, ಕಲಂ. 279, 338, 304() ಐಪಿಸಿ :-

ದಿನಾಂಕ 01-06-2020 ರಂದು ಫಿರ್ಯಾದಿ ರಮೇಶ ತಂದೆ ಬಸವರಾಜ ಮಡಿವಾಳ, ವಯ 32 ವರ್ಷ, ಜ್ಯಾತಿ ಮಡಿವಾಳ, ಸಾ: ಇಸ್ಲಾಂಪೂರ ತಾ: ಬೀದರ ರವರು ಬುತ್ತಿ ಬಸವಣ್ಣ ಮಂದಿರ ಹತ್ತಿರ ಹೋಗಿ ಅಲ್ಲಿಂದ ನಡೆದುಕೊಂಡು ಚಿದ್ರಿ ರಿಂಗ್ ರೋಡ ಕಡೆಗೆ ಬರುತ್ತಿದ್ದಾಗ ಬೀದರ ಎರಪೊರ್ಟ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಬೆಳ್ಳೂರ ಕ್ರಾಸ ಕಡೆಯಿಂದ ಮೊಟಾರ ಸೈಕಲ ನಂ. ಕೆಎ-39/ಆರ್-8622 ನೇದ್ದರ ಸವಾರ ತನ್ನ ವಾಹನವನ್ನು ಅತೀವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿ ತಾನು ಮೊಟಾರ ಸೈಕಲ ಸಮೇತ ಬಿದ್ದಿರುತ್ತಾನೆ, ಪರಿಣಾಮ ಫಿರ್ಯಾದಿಯ ತಲೆಯ ಹಿಂದೆ ಭಾರಿ ರಕ್ತಗಾಯವಾಗಿರುತ್ತದೆ, ಡಿಕ್ಕಿ ಮಾಡಿದ ಮೊಟಾರ ಸೈಕಲ ಸವಾರನಿಗೆ ನೋಡಲು ಅವನಿಗೆ ತಲೆಯ ಹಿಂದೆ ಭಾರಿ ಗುಪ್ತಗಾಯವಾಗಿ ಬಲ ಕಿವಿಯಿಂದ, ಮೂಗಿನಿಂದ ರಕ್ತ ಬಂದಿರುತ್ತದೆ, ಬಲಗಣ್ಣಿನ ಹತ್ತಿರ, ಬಲ ಹಣೆಯ ಮೇಲೆ, ಬಲ ಭುಜದ ಹತ್ತಿರ, ಎರಡು ಮೊಳಕಾಲ ಮೇಲೆ ತರಚಿದ ರಕ್ತಗಾಯವಾಗಿ, ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ಆಗ ಅಲ್ಲಿಗೆ ಬಂದ ಹಣಮಂತ ತಂದೆ ವಿಶ್ವನಾಥ ಈತನು ಮೊಟಾರ ಸೈಕಲ ಸವಾರನಿಗೆ ಗುರುತ್ತಿಸಿ ಅವನ ಹೆಸರು ಗಿರಿಧರ ರೆಡ್ಡಿ ತಂದೆ ಗೋಪಾಲರೆಡ್ಡಿ, ವಯ: 30 ವರ್ಷ, ಜಾತಿ: ರೆಡ್ಡಿ, ಸಾ: ವಿಠಲಪೂರ, ತಾ: ಹುಮನಾಬಾದ ಇರುತ್ತದೆ ಅಂತ ತಿಳಿಸಿದನು, ನಂತರ ಹಣಮಂತ ಈತನು 108 ಅಂಬುಲೆನ್ಸ ಕರೆಯಿಸಿ ಇಬ್ಬರಿಗೂ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿರುತ್ತಾನೆ, ಗಿರಿಧರ ರೆಡ್ಡಿ ಈತನು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 20/2020, ಕಲಂ. 498(), 324, 323, 504, 506 ಜೊತೆ 149 ಐಪಿಸಿ :-

ದಿನಾಂಕ 02-06-2020 ರಂದು ಫಿರ್ಯಾದಿ ಕವೀತಾ ಗಂಡ ಕಾಶೀನಾಥ ಭಾವಿಕಟ್ಟೆ ವಯ: 40 ವರ್ಷ. ಜಾತಿ: ಎಸ್.ಸಿ, ಸಾತಿ: ವಾಲದೊಡ್ಡಿ ರವರ ಮದುವೆಯು 20 ವರ್ಷಗಳ ಹಿಂದೆ ತಮ್ಮೂರಿನ ಶಿವರಾಜ ಭಾವಿಕಟ್ಟೆ ರವರ ಮಗನಾದ ಕಾಶಿನಾಥನ ಜೊತೆಯಲ್ಲಿ ತಮ್ಮ ಧರ್ಮದ ಪ್ರಕಾರ ಆಗಿರುತ್ತದೆ, ಗಂಡ ಮದುವೆಯಾದ ದಿನದಿಂದಲು ಹೊಡೆ ಬಡೆ ಮಾಡುತ್ತಾ ಬಂದು ಮಾನಸಿಕ ಹಾಗು ದೈಹಿಕ ಕಿರುಕುಳ ಕೊಡುತ್ತಾ ಬಂದಿರುತ್ತಾನೆ, ಅತ್ತೆ ರುಕ್ಮಿಣಿ, ಮೈದುನ ವಿಠ್ಠಲ್, ನಾದಣಿಯರಾದ ಕಾಶಿಬಾಯಿ ಗಂಡ ಬಸವರಾಜ, ಕವೀತಾ ಗಂಡ ಸುಭಾಷ, ಕಾಂಚನಾ ಗಂಡ ವಿಷ್ಣುಕಾಂತ ರವರೆಲ್ಲರೂ ಕೂಡಿಕೊಂಡು ಫಿರ್ಯಾದಿಗೆ ಅವಾಚ್ಯವಾಗಿ ಬೈದು ಕೂದಲು ಹಿಡಿದು ಹೊಡೆದು ನಿನಗೆ ಬರಿ ಎರಡು ಹಣ್ಣು ಮಕ್ಕಳು ಇದ್ದಾರೆ, ನೀನು ಮನೆಯಿಂದ ಹೋಗು ಕಾಶಿನಾಥನಿಗೆ ಇನ್ನೊಂದು ಮದುವೆ ಮಾಡುತ್ತೇವೆ ಅಂತ ಅಂದು ಜಗಳ ಮಾಡುತ್ತಾ ಮಾನಸಿಕ ಹಾಗೂ ದೈಹೀಕವಾಗಿ ಕಿರಕುಳ ಕೊಡುತ್ತಾ ಬಂದಿರುತ್ತಾರೆ, ಗಂಡ ತಲೆಯ ಕೂದಲು ಹಿಡಿದು ಹೊಡೆಯುವದು, ಕಾಲಿನಿಂದ ಒದೆಯುವದು, ಮನಸ್ಸಿಗೆ ಹತ್ತುವ ಹಾಗೆ ಮಾತನಾಡುತ್ತಾ ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾರೆ, ಈ ವಿಷಯವನ್ನು ಫಿರ್ಯಾದಿಯು ತನ್ನ ತಂದೆ-ತಾಯಿ, ಅಣ್ಣನಿಗೆ ತಿಳಿಸಿದಾಗ ಅವರೆಲ್ಲರು ಮನೆಗೆ ಬಂದು ಗಂಡ ಹಾಗು ಗಂಡನ ಮನೆಯವರೆಲ್ಲರಿಗೆ ಅನೇಕ ಸಲ ಬುದ್ದಿವಾದ ಹೇಳಿರುತ್ತಾರೆ, ಆದರೂ ಸಹ ಅವರು ಅವರ ಯಾರದೆ ಮಾತು ಕೇಳಿರುವದಿಲ್ಲ, ಹೀಗಿರುವಾಗ ದಿನಾಂಕ 26-05-2020 ರಂದು ಹೊರಗಿನಿಂದ ಗಂಡ ಹಾಗು ಆತನ ಸಂಬಂಧಿಯಾದ ಸತೀಷ ತಂದೆ ಸೂರ್ಯಕಾಂತ ಭಾಲ್ಕಿಕರ್ ಇವರು ಬಂದು ಫಿರ್ಯಾದಿಗೆ ಇನ್ನೂ ನೀನು ಮನೆಯಲ್ಲಿಯೇ ಉಳಿದಿದಿ, ನಿನ್ನ ಮಕ್ಕಳಿಗೆ ಕರೆದುಕೊಂಡು ನಿನ್ನ ತವರು ಮನೆ ಇಲ್ಲೆ ಇದೆ ಹೋಗು ಅಂತ ಜಗಳ ಮಾಡಿ ಗಂಡ ಮನೆಯಲ್ಲಿದ್ದ ಒಂದು ಕಾಮಾಕತ್ತಿಯ ಹಿಡಿಕೆಯಿಂದ ತಲೆಯ ಹಿಂಭಾಗದಲ್ಲಿ ಹೊಡೆದು ಗುಪ್ತಗಾಯ ಪಡಿಸಿ ಜೀವದ ಬೆದರಿಕೆ ಹಾಕಿರುತ್ತಾನೆ, ಸತೀಷ ಇತನು ಸಹ ತನ್ನ ಕೈ ಮುಷ್ಟಿ ಮಾಡಿ ಬೆನ್ನಲ್ಲಿ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ, ಈ ಜಗಳದ ಶಬ್ದವನ್ನು ಕೇಳಿ ಊರಿನ ರಾಜಕುಮಾರ ತಂದೆ ಶಂಬುಲಿಂಗ್ ಮತ್ತು ಶ್ರೀನಿವಾಸ ತಂದೆ ಅಜುರ್ನ್ ರವರು ಬಂದು ಕಣ್ಣಾರೆ ನೋಡಿ ಬಿಡಿಸಿಕೊಂಡಿರುತ್ತಾರೆ, ಆಗ ಫಿರ್ಯಾದಿಯ ತಾಯಿ, ತಂದೆ, ಅಣ್ಣ ರವರು ಸಹ ಬಂದಾಗ ಗಂಡ ಕಾಶಿನಾಥ ರವರು ಫಿರ್ಯಾದಿಯ ತಾಯಿಗೂ ಸಹ ಸೊಂಟದ ಮೇಲೆ, ಬೆನ್ನಿನ ಮೇಲೆ ಹೊಡೆದಿರುತ್ತಾನೆ, ತಂಗಿ ರೇಷ್ಮಾ ಇವಳಿಗೂ ಸಹ ಅತ್ತೆ, ನಾದಣಿಯರು ಹೊಡೆದಿರುತ್ತಾರೆ, ನಂತರ ಫಿರ್ಯಾದಿಗೆ ಅಣ್ಣ ಮತ್ತು ತಂದೆ ರವರು ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 70/2020, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 02-06-2020 ರಂದು ಬಸವಕಲ್ಯಾಣ ನಗರದ ನಾರಾಯಣಪೂರ ರಸ್ತೆಯ ಬದಿಯಲ್ಲಿರುವ ಹಾಲ ಬಸವಣ್ಣ ಮಂದಿರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಕೊಂಡು ಹಣ ಹಚ್ಚಿ ಪಣ ತೋಟ್ಟು ಇಸ್ಪಿಟ್ ಎಲೆಗಳ ಅಂದರ ಬಾಹರ್ ನಸಿಬಿನ ಜೂಜಾಟವನ್ನು ಆಡುತ್ತಿದ್ದಾರೆಂದು ಸುನೀಲಕುಮಾರ ಪಿಎಸ್‍ಐ (ಕಾ&ಸೂ) ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ತಿಳಿದು ಬಂದ ಮೇರೆಗೆ ಪಿಎಸ್ಐ ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ನಾರಾಯಣಪೂರ ರಸ್ತೆಯ ಬದಿಯಲ್ಲಿರುವ ಹಾಲ ಬಸವಣ್ಣ ಮಂದಿರದ ಹತ್ತಿರದಿಂದ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಬಸವಕಲ್ಯಾಣ ನಗರದ ನಾರಾಯಣಪೂರ ರಸ್ತೆಯ ಬದಿಯಲ್ಲಿರುವ ಹಾಲ ಬಸವಣ್ಣ ಮಂದಿರ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ರಾಜಶೇಖರ ತಂದೆ ಜಗನ್ನಾಥ ಕಲ್ಲೂರೆ ವಯ: 34 ವರ್ಷ, ಜಾತಿ: ಕಬ್ಬಲಿಗ, ಸಾ: ಸುಲ್ತಾನಬಾದವಾಡಿ, ತಾ: ಹುಮನಾಬಾದ, ಸದ್ಯ: ಬಂಜಾರ ಕಾಲೋನಿ ಬಸವಕಲ್ಯಾಣ, 2) ರೋಹಿತ್ ತಂದೆ ಕಾಶೇಪ್ಪಾ ಬೇಳಕೆರೆ ವಯ: 34 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಲಾಲತಲಾಬ ಬಸವಕಲ್ಯಾಣ, 3) ಪ್ರಭುರೆಡ್ಡಿ ತಂದೆ ವೀರಾರೆಡ್ಡಿ ಕೊಲಾಕೆ ವಯ: 32 ವರ್ಷ, ಜಾತಿ: ರೆಡ್ಡಿ, ಸಾ: ಖಡಿಝಂಡಾ ಬಸವಕಲ್ಯಾಣ, 4) ಗೌರಿ ಶಂಕರ ತಂದೆ ರೇವಣಸಿದ್ಧಪ್ಪಾ ರಾಸೂರಕರ ವಯ: 38 ವರ್ಷ, ಜಾತಿ: ಲಿಂಗಾಯತ, ಸಾ: ಸುಭಾಶ ಚೌಕ ಬಸವಕಲ್ಯಾಣ, 5) ಮುಸಾ ತಂದೆ ಖಾಜಾ ಮೈನೋದ್ದಿನ್ ಮುಲ್ತಾನಿ ವಯ: 30 ವರ್ಷ, ಜಾತಿ: ಮುಸ್ಲಿಂ, ಸಾ: ಧರ್ಮಪ್ರಕಾಶ ಗಲ್ಲಿ ಬಸವಕಲ್ಯಾಣ, 6) ಅನಿಲ್ ತಂದೆ ಸುಭಾಶ ಗಾಯಮುಖೆ ವಯ: 23 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಲಾಲತಲಾಬ ಬಸವಕಲ್ಯಾಣ ಇವರೆಲ್ಲರೂ ಕುಳಿತು ಇಸ್ಪಿಟ್ ಎಲೆಗಳ ಅಂದರ ಬಾಹರ ನಸೀಬಿನ ಜೂಜಾಟವನ್ನು ಹಣ ಹಚ್ಚಿ ಪಣ ತೊಟ್ಟು ಆಡುತ್ತಿರುವುದನ್ನು ನೋಡಿ ಎಲ್ಲರು ಒಮ್ಮೆಲೆ ದಾಳಿಮಾಡಿ ಅವರಿಂದ ಒಟ್ಟು ನಗದು ಹಣ 5800/- ರೂ. ಮತ್ತು 52 ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 43/2020, ಕಲಂ. 3, 7 ಇ.ಸಿ ಕಾಯ್ದೆ :-

ದಿನಾಂಕ 02-06-2020 ರಂದು ಲಾರಿ ನಂ. ಜಿಜೆ-36/ಟಿ-0111 ನೇದ್ದರಲ್ಲಿ ಅಕ್ರಮವಾಗಿ ಸರಕಾರದಿಂದ ವಿವಿಧ ಯೋಜನೆ ಅಡಿ ಸರಬರಾಜು ಆಗುವ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದಾರೆ ಅಂತಾ ಫಿರ್ಯಾದಿ ರಾಜೇಂದ್ರಕುಮಾರ ವಡ್ಡಿ  ಆಹಾರ ನಿರೀಕ್ಷಕರು ತಹಸೀಲ ಬಸವಕಲ್ಯಾಣ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಆಹಾರ ನಿರೀಕ್ಷಕರು ರವರು ಇಬ್ಬರು ಪಂಚರು, ರಾಮರತನ ದೇಗಲೆ ಅಹಾರ ನಿರೀಕ್ಷಕರು ತಹಸೀಲ ಕಛೇರಿ ಬಸವಕಲ್ಯಾಣ, ತಹಸೀಲ ಕಛೇರಿಯ ಕಂಪ್ಯೂಟರ ಆಪರೇಟರಾದ ಚನ್ನಪ್ಪಾ ತಂದೆ ದುಶಾಂತ ಚಿಟಂಪಲ್ಲೆ ಹಾಗೂ ಹಮಾಲರಾದ ನಾಗರಾಜ, ಕಾಶಿನಾಥ ತಂದೆ ಮಹಾದೇವ ದಾಸರೆ, ಸಂತೋಷ ತಂದೆ ವಿಠಲ ತಿಪೂರಾಂತೆ ಬಸವಕಲ್ಯಾಣ ತಹಸೀಲದಾರರ ಜೀಪ ನಂ. ಕೆಎ-56/ಜಿ-0009 ನೇದ್ದರ ಚಾಲಕ ಗಣೇಶ ಇವರೊಂದಿಗೆ ಬಾತ್ಮಿಯಂತೆ ಚಂಡಕಾಪೂರ ಶಿವಾರದ ಎನ್.ಎಚ್ 65 ರಸ್ತೆ ಹತ್ತಿರ ಹೋಗಿ ಬಾತ್ಮಿಯಂತೆ ಚಂಡಕಾಪೂರ ಶಿವಾರದ ಎಚ್.ಎಚ್ ರಸ್ತೆ ಪಕ್ಕದಲ್ಲಿರುವ ಸತೀಷ ದಾಬಾದ ಹತ್ತಿರ ಹೋಗಿ ಎನ್.ಎಚ್-65 ರಸ್ತೆಯ ಬದಿಯಲ್ಲಿ ಹೋಗಿ ಹೈದ್ರಾಬಾದ ಕಡೆಯಿಂದ ಬರುತ್ತಿರುವ ಲಾರಿ ನಂ. ಜಿಜೆ-36/ಟಿ-0111 ನೇದ್ದು ಬಂದಾಗ ಫಿರ್ಯಾದಿಯವರು ಲಾರಿ ಚಾಲಕನಿಗೆ ಕೈ ಸನ್ನೆ ಮಾಡಿ ನಿಲ್ಲಿಸಲು ಸೂಚಿಸಿದಾಗ ಲಾರಿ ಚಾಲಕನು ತನ್ನ ಲಾರಿಯನ್ನು ಅಲ್ಲೆ ರೋಡಿನ ಪಕ್ಕದಲ್ಲಿ ನಿಲ್ಲಿಸಿದನು, ಲಾರಿ ಚಾಲಕನಿಗೆ ಹೆಸರು ಮಾರು ನಜಾಭಾಯಿ ತಂದೆ ಗಾಲಾಭಾಯಿ ವಯ: 19 ವರ್ಷ, ಜಾತಿ: ರಬಾರಿ, ಸಾ: ಕೊಳಿಖಡ್ಡಾ ಗ್ರಾಮ, ತಾ: ಜಿ: ಪೊರಬಂದರ, ರಾಜ್ಯ: ಗುಜರಾತ ಅಂತ ತಿಳಿಸಿದನು ಹಾಗೂ ಲಾರಿ ಕ್ಲೀನರನ ಹೆಸರು ವಿಚಾರಿಸಲು ತನ್ನ ಹೆಸರು ಮಾರು ಕನಾಭಾಯಿ ತಂದೆ ಮಾರು ಬಧಾಭಾಯಿ ವಯ: 20 ವರ್ಷ, ಜಾತಿ: ರಬಾರಿ, ಸಾ: ಕೊಳಿಖಡ್ಡಾ ಗ್ರಾಮ, ತಾ: ಜಿ: ಪೊರಬಂದರ,  ಅಂತಾ ತಿಳಿಸಿದನು. ಸದರಿ ಲಾರಿ ಚಾಲಕ ನಜಾಭಾಯಿ ಇತ0ನಿಗೆ ಲಾರಿಯಲ್ಲಿ ಲೋಡ ಏನಿದೆ? ಎಲ್ಲಿಂದ ತುಂಬಿಕೊಂಡು ಬಂದಿರುತ್ತಿ ಎಂದು ವಿಚಾರಿಸಿದಾಗ ನಾನು ನನ್ನ ಲಾರಿಯಲ್ಲಿ ಬೀದರ ಪಟ್ಟಣದ ಬೀದರ ಜಹಿರಾಬಾದ ರಸ್ತೆಯಿಂದ ಸ್ವಲ್ಪ ಒಳಗೆ ಇದ್ದ ಒಂದು ಶೇಡದಿಂದ ಅಕ್ಕಿ ಲೋಡನ್ನು ತುಂಬಿಕೊಂಡು ಬಂದಿರುತ್ತೇನೆ ಅಂತಾ ತಿಳಿಸಿದನು, ಲಾರಿಯಲ್ಲಿ ತುಂಬಿದ ಅಕ್ಕಿ ಮಾಲಿನ ಹೆಸರು ಎನು ಅಂತಾ ಚಾಲಕನಿಗೆ ವಿಚಾರಿಸಲು ಆತನು ಲಾರಿಯಲ್ಲಿ ಅಕ್ಕಿ ತುಂಬಿದ ಮಾಲಿಕನ ಹೆಸರು ಪರಮೇಶ್ವರ ಕೊಳಿ ಸಾ: ಖಾಷೆಂಪೂರ(ಸಿ), ತಾ: ಜಿ: ಬೀದರ ಅಂತಾ ತಿಳಿಸಿದನು, ಲಾರಿಯ್ಲಿ ಅಕ್ಕಿ ಲೋಡನ್ನು ತುಂಬಿಕೊಂಡು ಗುಜರಾತಕ್ಕೆ ತೆಗೆದುಕೊಂಡು ಹೋಗುತ್ತಿದ್ದೇನೆ ಅಂತಾ ತಿಳಿಸಿದನು, ಲಾರಿಯಲ್ಲಿ ಅಕ್ಕಿ ತುಂಬಿದ ಚೀಲಗಳ ಲೋಡ ಇದೆ ಅಂತಾ ತಿಳಿಸಿದನು, ಸದರಿ ಲೋಡಿಗೆ ಸಂಬಂಧಿಸಿದ ದಾಖಲಾತಿಗಳನ್ನು ಹಾಜರಪಡಿಸಲು ಸೂಚಿಸಿದಾಗ ಆತನು ಯಾವುದೇ ದಾಖಲಾತಿಗಳು ಹಾಜರ ಪಡಿಸಿರುವುದಿಲ್ಲಾ, ನಂತರ ಲಾರಿಯ ತಾಟಪತ್ರಿಯನ್ನು ತೆಗೆದು ನೋಡಲು ಲಾರಿಯಲ್ಲಿ ಒಟ್ಟು 50 ಕೆ.ಜಿ ತೂಕದ 400 ಪ್ಲಾಸ್ಟೀಕ ಚೀಲಗಳ ಅಕ್ಕಿ ಲೋಡ ಇರುತ್ತದೆ, ನಂತರ ಒಟ್ಟು 200 ಕ್ವೀಂಟಲ್ ಅಕ್ಕಿ ಅ.ಕಿ 6,00,000/- ರೂಪಾಯಿ ಹಾಗೂ ಲಾರಿ ಅ.ಕಿ 20 ಲಕ್ಷ ನೇದನ್ನು ತಾಬೆಗೆ ತೆಗೆದುಕೊಂಡಿದ್ದು ಇರುತ್ತದೆ, ಹೀಗೆ ಫಿರ್ಯಾದಿಯಯವರ ಜಪ್ತಿ ಪಂಚನಾಮೆಯ ಆಧಾರದ ಮೇರೆಗೆ ಆರೋಪಿತರಾದ ಲಾರಿ ಚಾಲಕ, ಕ್ಲಿನರ್ ಹಾಗೂ ಅಕ್ಕಿಯ ಮಾಲಿಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.