ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 02-10-2019

 

ಕುಶನೂರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 09/2019, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ರಮ್ಯಾ ಗಂಡ ಕೃಷ್ಣಮೂರ್ತಿ ವಯ: 28 ವರ್ಷ ಸಾ: ನರಸಿಪೂರ, ತಾ: ಅರಸಿಕೇರೆ, ಜಿ: ಹಾಸನ, ಸದ್ಯ: ಠಾಣಾ ಕುಶನೂರ, ತಾ: ಔರಾದ ರವರ ಗಂಡನಾದ ಕೃಷ್ಣಮೂರ್ತಿ ತಂದೆ ಚಿಕ್ಕಣ್ಣ ವಯ: 30 ವರ್ಷ, ಜಾತಿ: ಬೆಸ್ತ, ಸಾ: ನರಸೀಪೂರ, ತಾ: ಅರಸಿಕೇರೆ, ಜಿ: ಹಾಸನ, ಸದ್ಯ: ಠಾಣಾ ಕುಶನೂರ ರವರು ಔರಾದ ತಾಲೂಕಿನ ಲಕ್ಷ್ಮಿನಗರ ಗ್ರಾಮದ ಕಿರಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕ ಅಂತ ಸುಮಾರು ಮೂರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಗಂಡ ಪ್ರತಿದಿನ ಠಾಣಾ ಕುಶನೂರದಿಂದ ಲಕ್ಷ್ಮಿನಗರ ಗ್ರಾಮಕ್ಕೆ ಕರ್ತವ್ಯಕ್ಕೆ ಹೋಗಿ ಬರುತ್ತಾರೆ, ಹೀಗಿರುವಾಗ ದಿನಾಂಕ 02-09-2019 ರಂದು ಗಂಡ ಆಕಸ್ಮಿಕವಾಗಿ ಠಾಣಾ ಕುಶನೂರ ಗ್ರಾಮದಲ್ಲಿ ತಲೆ ಸುತ್ತಿ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿದ್ದರಿಂದ ಸೋಲ್ಲಾಪೂರ ಆಸ್ಪತ್ರೆಗೆ ಚಿಕಿತ್ಸೆ ಕುರಿತು ದಾಖಲಿಸಿದ್ದು ಅಲ್ಲಿನ ವೈದ್ಯಾಧಿಕಾರಿಯಿಂದ ತಿಳಿದು ಬಂದಿದ್ದು ಏನೆಂದರೆ ಗಂಡನಿಗೆ ಸ್ಟ್ರೊಕ್ (ಪ್ಯಾರಲೀಸಿಸ್) ಆದ ಬಗ್ಗೆ ತಿಳಿದಿದ್ದು ಚಿಕಿತ್ಸೆಯಲ್ಲಿ ಡಾಕ್ಟರ್ ಒಳಸಂಗರ ಅವರ ಆಸ್ಪತ್ರೆಯಲ್ಲಿ ಗಂಡನ ತಲೆಯ ಶಸ್ತ್ರ ಚಿಕಿತ್ಸೆ ಮಾಡಿಸಿದ್ದು, ಗಂಡನ ಚಿಕಿತ್ಸೆ ಮಾಡಿಸಿದ ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗಿ ದಿನಾಂಕ 20-09-2019 ರಂದು ಮರಳಿ ಠಾಣಾ ಕುಶನೂರ ಗ್ರಾಮಕ್ಕೆ ಬಂದಿದ್ದು, ಹೀಗಿರುವಾಗ ದಿನಾಂಕ 30-09-2019 ರಂದು ರಾತ್ರಿ ಇಬ್ಬರು ಮನೆಯಲ್ಲಿ ಊಟ ಮಾಡಿ ಮಲಗಿಕೊಂಡಿದ್ದು, ರಾತ್ರಿ ಅಂದಾಜು 2300 ಗಂಟೆ ಸುಮಾರಿಗೆ ಗಂಡ ಆಕಸ್ಮಿಕವಾಗಿ ಒಮ್ಮಿಂದ ಒಮ್ಮೇಲೆ ಉಸಿರುಗಟ್ಟಿದಂತೆ ಒದ್ದಾಡುತ್ತಿದ್ದರಿಂದ ಫಿರ್ಯಾದಿಯು ಎದ್ದು ಗಾಬರಿಗೊಂಡು ಒಂದು ಖಾಸಗಿ ವಾಹನದಲ್ಲಿ ಸಂತಪೂರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಕುಶನೂರ ಗ್ರಾಮದ ಭವಾನಿ ಮಂದಿರ ಹತ್ತಿರ ಗಂಡನ ಜೀವ ಹೋಗಿರುತ್ತದೆ, ಗಂಡನು ಆಕಸ್ಮಿಕವಾಗಿ ಉಸಿರುಗಟ್ಟಿದಂತಾಗಿ ಒದ್ದಾಡಿದ್ದು ಹೃದಯಘಾತದಿಂದ ಮರಣ ಹೊಂದಿದ ಬಗ್ಗೆ ತಿಳಿದು ಬಂದಿರುತ್ತದೆ, ತನ್ನ ಗಂಡನ ಮರಣದಲ್ಲಿ ಯಾರ ಮೇಲೆ ಯಾವುದೇ ರೀತಿಯ ದೂರು ಅಥವಾ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 01-10-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹೊಕ್ರಾಣಾ ಪೊಲೀಸ್ ಠಾಣೆ ಅಪರಾಧ ಸಂ. 56/2019, ಕಲಂ. 279, 304() ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 01-10-2019 ರಂದು ಫಿರ್ಯಾದಿ ಕೌಸಬಾಯಿ ಗಂಡ ತೆಜೂರಾವ ದೇವಕತ್ತೆ ಸಾ: ಸಾವರಮಾಳ ಎಂಎಸ್ ರವರು ರವರ ಮೈದುನನಾದ ಮೃತ ಲಕ್ಷ್ಮಿಣ ಇವರ ಮಗಳಾದ ಸುವರ್ಣಾ ಇವಳಿಗೆ ಮಾನೂರ(ಬಿ) ಗ್ರಾಮದ ಧನರಾಜ ಪಾಂಡ್ರೆ ಎಂಬುವರಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ, ಧನರಾಜ ಇವರಿಗೆ ಕರೆಂಟ್ ಶಾಕ್ ಹತ್ತಿದರಿಂದ ಮಾತನಾಡಲು ಅಂತಾ ಫಿರ್ಯಾದಿಯು ತನ್ನ ಗಂಡ ತೆಜೂರಾವ, ನಾದಣಿ ಸುಶೀಲಾಬಾಯಿ ಎಲ್ಲರು ಬಸ್ಸಿಗೆ ತಮ್ಮೂರಿನಿಂದ ಹೋಗಿ ಮಾತನಾಡಿ ಮರಳಿ ತಮ್ಮೂರಿಗೆ ಬರಲು ಹಣೆಗಾಂವಕ್ಕೆ ಬಂದು ಹಣೆಗಾಂವದಿಂದ ಆಟೊ ನಂ. ಎಪಿ-23/ಡಬ್ಲೂ-4724 ನೇದರಲ್ಲಿ ಫಿರ್ಯಾದಿ, ಫಿರ್ಯಾದಿಯವರ ಗಂಡ, ನಾದಣಿ ಮತ್ತು ಹಂಗರಗಾ ಗ್ರಾಮದ ಇತರೆ ಪ್ರಯಾಣಿಕರು ಆಟೋದಲ್ಲಿ ಕುಳಿತು ಹಂಣೆಗಾಂವದಿಂದ ಹಂಗರಗಾ ಮಾರ್ಗದಿಂದ ಸಾವರಮಾಳ ಗ್ರಾಮಕ್ಕೆ ಬರುವಾಗ ಆಶ್ರಮ ಶಾಲೆಯ ಹತ್ತಿರ ಬಂದಾಗ ಎದುರಿನಿಂದ ಒಂದು ಟೆಂಪು ನಂ. ಕೆಎ38 -7902 ನೇದರ ಚಾಲಕನಾದ ಆರೋಪಿ ಬಾಲಾಜಿ ತಂದೆ ಮಾರುತಿ ಮೇತ್ರೆ ಸಾ: ಧುಡಕನಾಳ ಇತನು ತನ್ನ ಟೆಂಪುವನ್ನು ಅಜಾಗರೂಕತೆ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಸದರಿ ಆಟೋದಲ್ಲಿ ಫಿರ್ಯಾದಿಯವರ ಗಂಡನ ಬಲಗಾಲ ಮೊಳಕಾಲಿಗೆ ಡಿಕ್ಕಿ ಮಾಡಿದ್ದರಿಂದ ಅವರ ಮೊಳಕಾಲಿನಿಂದ ಹಿಂಬದಿಯವರೆಗೆ ಭಾರಿ ಪೆಟ್ಟಾಗಿ ಕಾಲು ಚಿದ್ರ ಚಿದ್ರವಾಗಿ ರಕ್ತಗಾಯವಾಗಿರುತ್ತದೆ, ಸದರಿ ಟೆಂಪು ಚಾಲಕನು ತನ್ನ ಟೆಂಪು ಸ್ಥಳದಲ್ಲಿ ನಿಲ್ಲಿಸಿ ಓಡಿ ಹೋಗಿರುತ್ತಾನೆ, ನಂತರ ಎಲ್ಲರು ಕೂಡಿ ಅದೇ ಆಟೋದಲ್ಲಿ ತನ್ನ ಗಂಡನಿಗೆ ಚಿಕಿತ್ಸೆ ಕುರಿತು ಹಣೆಗಾಂವ ಸರಕಾರಿ ಆಸ್ಪತ್ರೆಗೆ ತಗೆದುಕೊಂಡು ಹೋಗಿ ಅಲ್ಲಿಂದ 108 ಅಂಬುಲೇನ್ಸ್‌ದಲ್ಲಿ ಹೆಚ್ಚಿನ ಚಿಕಿತ್ಸೆ ಕುರಿತು ತಗೆದುಕೊಂಡು ಹೋಗುವಾಗ ಹಣೆಗಾಂವ ಗ್ರಾಮದ ಹತ್ತಿರ ಗಂಡ ಮೃತಪಟ್ಟಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 171/2019, ಕಲಂ. 304() ಐಪಿಸಿ :-

ದಿನಾಂಕ 30-09-2019 ರಂದು ಫಿರ್ಯಾದಿ ಸಿದ್ದಿಕ್ ತಂದೆ ಶೇಕ್ ಬಾಬು ವಯ: 40 ವರ್ಷ, ಜಾತಿ: ಮುಸ್ಲಿಂ, ಸಾ: ಚಿಟ್ಟಾವಾಡಿ ಗ್ರಾಮ ಬೀದರ ರವರ ಹೆಂಡತಿಯಾದ ರೇಹಾನಾ ಬೆಗಂ ವಯ: 30 ವರ್ಷ ತನ್ನ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಮನೆಯಲ್ಲಿ ಸಾಲನ್(ಪಲ್ಯಾ) ಇಲ್ಲದೆ ಇದ್ದ ಪ್ರಯುಕ್ತ ತಾನು ಕೆಲಸ ಮಾಡುತ್ತಿರುವ ಮನೆಯ ಮಾಲಿಕರ ಹತ್ತಿರ ಸಾಲನ್(ಪಲ್ಯಾ) ತರಲು ಹೊಗಿದ್ದು ಮರಳಿ ಬರದೆ ಇದ್ದಾಗ ಫಿರ್ಯಾದಿಯು ಮಾಲಿಕರ ಮನೆಗೆ ಹೊಗಿ ವಿಚಾರಿಸಲು ನಿನ್ನ ಹೆಂಡತಿ ಸಾಲನ್ ತೆಗೆದುಕೊಂಡು ಹೊಗಿರುತ್ತಾಳೆಂದು ತಿಳಿಸದರು, ನಂತರ ಫಿರ್ಯಾದಿಯು ಮನೆಗೆ ಹೊಗಲು ಮನೆಯಲ್ಲಿ ಹೆಂಡತಿ ಇರಲ್ಲಿಲ್ಲಾ, ಬೆಳಿಗ್ಗೆ 0600 ಗಂಟೆ ಸುಮಾರಿಗೆ ಚಿಟ್ಟಾವಾಡಿಯ ಜನರಿಂದ ಗೊತ್ತಾಗಿದ್ದೆನೆಂದರೆ ಹಾಸ್ಟಲ್ ಹಿಂದೆ ತೋಡಿದ ತಗ್ಗಿನಲ್ಲಿ ಮಳೆಯಿಂದ ನೀರು ತುಂಬಿಕೊಂಡಿದ್ದ ತಗ್ಗಿನಲ್ಲಿ ಬಿದ್ದು ಮೃತಪಟ್ಟಿರುತ್ತಾಳೆ ಅಂತಾ ಗೊತ್ತಾಗಿ ಫಿರ್ಯಾದಿಯು ಹೋಗಿ ನೋಡಲು ಹೆಂಡತಿ ನಡೆದುಕೊಂಡು ಬರುವಾಗ ನೀರು ತುಂಬಿದ ತಗ್ಗಿನಲ್ಲಿ ಬಿದ್ದು ಮೃತಪಟ್ಟಿದ್ದು ನಿಜವಿರುತ್ತದೆ, ಈ ಘಟನೆಯು ದಿನಾಂಕ 30-09-2019 ರಂದು 2000 ಗಂಟೆಯಿಂದ 2100 ಗಂಟೆಯ ಅವಧಿಯಲ್ಲಿ ಹೆಂಡತಿ ರೇಹಾನಾ ಬೆಗಂ ಇವಳು ನಡೆದುಕೊಂಡು ಮನೆಗೆ ಬರುವಾಗ ನಡೆದಿರಬಹುದು, ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ವತಿಯಿಂದ ಬೀದರ ನಗರದ ಕೊಳಚೆ ನೀರನ್ನು ಶೇಖರಿಸಿ ಶುದ್ದಿಕರಿಸಲು ಪೈಪಗಳನ್ನು ಹಾಕಲು ತೋಡಿದ ತಗ್ಗುಗಳಿಗೆ ಗುತ್ತೆದಾರನ ಕೆಲಸದ ಅಧೀಕೃತ ಮೇಲ್ವಿಚಾರಕನಾಗಲಿ ಅಥವಾ ಸೈಟ್ ಇಂಜಿನಿಯರ ಆಗಲಿ ಅಥವಾ ಸಂಬಂಧಪಟ್ಟ ಇಲಾಖೆಯ ಕನ್ಸ್‌ಲ್ಟೆಂಟ್ ಇಂಜಿನಿಯರ ಆಗಲಿ ತೋಡಿದ ತಗ್ಗಿಗೆ ಸುರಕ್ಷತಾ ಕ್ರಮವನ್ನು ಕೈಗೊಳ್ಳದೆ ತೋಡಿದ ತಗ್ಗಿನ ಸುತ್ತಲು ಗುತ್ತೆದಾರನ ಮೇಲ್ವಿಚಾರಕರಾಗಲಿ ಸುತ್ತಲು ಹಗ್ಗದ ಜ್ಯಾಲಿಯಾಗಲ್ಲಿ ಹಾಕದೆ ಸುರಕ್ಷತಾ ಕ್ರಮ ಜರುಗಿಸದೆ ನಿರ್ಲಕ್ಷತೆ ವಹಿಸಿದ್ದರಿಂದ ರೇಹಾನಾ ಬೆಗಂ ಇವಳು ನಡೆದುಕೊಂಡು ತಮ್ಮ ಮನೆಗೆ ಬರುತ್ತಿರುವಾಗ ತೋಡಿದ ತಗ್ಗಿನಲ್ಲಿ ನೀರು ತುಂಬಿದ್ದರಿಂದ ತಗ್ಗಿನಲ್ಲಿ ಬಿದ್ದು ಮೃತಪಟ್ಟಿದು ಇರುತ್ತದೆ, ಕಾಮಗಾರಿಯ ಸುರಕ್ಷತಾ ಕ್ರಮ ಕೈಗೊಳ್ಳಲು ನಿರ್ಲಕ್ಷನ ತೋರಿಸಿದವರ ಹೆಸರು ಚಿಟ್ಟಾವಾಡಿಯ ಜನರಿಂದ ತಿಳಿದು ಬಂದಿದ್ದೇನೆಂದರೆ ಕಾಮಗಾರಿಯ ಗುತ್ತೆದಾರನ ಮೇಲ್ವಿಚಾರಕನಾದ ವಿಪುಲ್ ಪಟೇಲ್ ಮತ್ತು ಗುತ್ತೆದಾರನ ಸೈಟ್ ಇಂಜಿನಿಯರಾದ ಸಾಗರ ಹಾಗೂ ಕನ್ಸ್‌ಲ್ಟೆಂಟ್ ಇಂಜಿನಿಯರ್ ರೇವಣಸಿದ್ದಪ್ಪಾ ಅಂತಾ ತಿಳಿದು ಬಂದಿರುತ್ತದೆ, ಕಾರಣ ಸದರಿ ಗುತ್ತೆದಾರನಾದ ವಿಪುಲ್ ಪಟೇಲ್, ಸಾಗರ ಸೈಟ್ ಇಂಜಿನಿಯರ್, ರೇವಣಸಿದ್ದಪ್ಪಾ ಕನ್ಸ್‌ಲ್ಟೆಂಟ್ ಇಂಜಿನಿಯರ್ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಸಾರಾಂಶದ ಮೇರೆಗೆ ದಿನಾಂಕ 01-10-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಸಿ..ಎನ್ ಕ್ರೈಂ ಪೊಲೀಸ ಠಾಣೆ ಬೀದರ ಅಪರಾಧ ಸಂ. 33/2019, ಕಲಂ. 420 ಐಪಿಸಿ ಮತ್ತು 66 (ಡಿ) .ಟಿ ಕಾಯ್ದೆ :-

ಫಿರ್ಯಾದಿ ಎಂ.ಡಿ. ಮಕ್ಸೂದ ಅಹ್ಮೇದ ತಂದೆ ಅಬ್ದುಲ ರಹೇಮಾನ ವಯ: 55 ವರ್ಷ, ಜಾತಿ: ಮುಸ್ಲಿಂ, ಸಾ: ಜಬ್ಬಾರ ಕಾಲೋನಿ ಅಬಕಾರಿ ಕಛೇರಿ ಹತ್ತಿರ ಬೀದರ ರವರು ದಿನಾಂಕ 04-10-2018 ರಿಂದ ಸರಕಾರಿ ಉರ್ದು ಪ್ರೌಢ ಶಾಲೆ ತಾಳಮಡಗಿಯಲ್ಲಿ ಮುಖ್ಯೋಪಾಧ್ಯಯರು ಅಂತ ಕೆಲಸ ನಿರ್ವಹಿಸಿಕೊಂಡಿದ್ದು, ಸದರಿ ಶಾಲೆಗೆ ಒಂದು ಮುಖ್ಯೋಪಾಧ್ಯಯರ ಹೆಸರಿನಲ್ಲಿ ಹುಮನಾಬಾದ ಎಸ್.ಬಿ.ಐ. ಬ್ಯಾಂಕಿನಲ್ಲಿ ಸೇವಿಂಗ ಬ್ಯಾಂಕ ಖಾತೆ ಸಂ. 62051224883 ಹೊಂದಿದ್ದು ಇರುತ್ತದೆ, ಹೀಗಿರುವಾಗ ದಿನಾಂಕ 25-04-2019 ರ ವರೆಗೆ ಸದರಿ ಬ್ಯಾಂಕ ಖಾತೆಯಲ್ಲಿ 40,035/- ರೂ. ಬ್ಯಾಲೇನ್ಸ ಹೊಂದಿದ್ದು ನಂತರ ಫಿರ್ಯಾದಿಯು ದಿನಾಂಕ 26-08-2019 ರಂದು ಬಿಸಿ ಊಟದ ಹಣ ತೆಗೆದುಕೊಂಡು ಬರಲು ಬ್ಯಾಂಕಗೆ ಹೋಗಿ ಪಾಸ್ ಬುಕ ಕೊಟ್ಟು ಬ್ಯಾಲೇನ್ಸ ಚೆಕ್ ಮಾಡಲು ಸದರಿ ಖಾತೆಯಲ್ಲಿ 59/- ರೂ. ಮಾತ್ರ ಬ್ಯಾಲೇನ್ಸ ತೊರಿಸಿದ್ದು ಇರುತ್ತದೆ, ನಂತರ ಫಿರ್ಯಾದಿಯು ಪಾಸ್ ಬುಕ ಪರಿಶೀಲಿಸಿ ನೋಡಲು ದಿನಾಂಕ 19-06-2019 ರಂದು 600/- ರೂ., ದಿನಾಂಕ 25-06-2019 ರಂದು 1000/- ರೂ., ದಿನಾಂಕ 09-07-2019 ರಂದು 5000/- ರೂ. & 5000/- ರೂ., ದಿನಾಂಕ 10-07-2019 ರಂದು 10,000/- ರೂ., ದಿನಾಂಕ 11-07-2019 ರಂದು 10,000/- ರೂ., ದಿನಾಂಕ 12-07-2019 ರಂದು 8200/- ರೂ. ಹಾಗೂ ದಿನಾಂಕ 31-07-2019 ರಂದು 520/- ರೂ. ಹೀಗೆ ಒಟ್ಟು 40,320/- ಕಡಿತವಾದ ಬಗ್ಗೆ ಎಂಟ್ರಿ ಇರುತ್ತದೆ, ಆದರೆ ಫಿರ್ಯಾದಿಯು ಸದರಿ ದಿನಾಂಕಗಳಂದು ಯಾವುದೆ ಹಣ ಡ್ರಾ ಮಾಡಿರುವುದಿಲ್ಲ, ಸದರಿ ಬ್ಯಾಂಕ ಖಾತೆಯು ಮುಖ್ಯೋಪಾಧ್ಯಯರ ಹೆಸರಿನಲ್ಲಿರುವುದರಿಂದ ಯಾವುದೆ ತರಹದ ಮೊಬೈಲ ಸಂ. ಆಧಾರ ಕಾರ್ಡ ಲಿಂಕ್, ಎ.ಟಿ.ಎಂ. ಕಾರ್ಡ, ಚೆಕ್ ಬುಕ್, ಸೌಲಭ್ಯ ಹೊಂದಿರುವುದಿಲ್ಲ, ಹಣ ಡ್ರಾ ಮಾಡಬೇಕಾದರೆ ವಿತ್ಡ್ರಾ ಸ್ಲೀಪ್ ಮತ್ತು ಅದರ ಮೇಲೆ ಮುಖ್ಯೋಪಾಧ್ಯಯರ ಸಹಿ ಇದ್ದಾಗ ಮಾತ್ರ ಹಣ ಡ್ರಾ ಮಾಡಬಹುದು, ಆದರೆ ಯಾರೋ ಅಪರಿಚಿತರು ಸರಕಾರಿ ಉರ್ದು ಪ್ರೌಢ ಶಾಲೆ ತಾಳಮಡಗಿ ಬ್ಯಾಂಕ ಖಾತೆಯಿಂದ ಫಿರ್ಯಾದಿಯವರ ಅನುಮತಿ ಮತ್ತು ಗಮನಕ್ಕೆ ತರದೆ ಸದರಿ ಖಾತೆಯಲ್ಲಿ 344/- ರೂ. ಜಮಾ ಆಗಿದ್ದ ಬಡ್ಡಿ ಸಹ ಸೇರಿ ದಿನಾಂಕ 19-06-2019 ರಿಂದ ದಿನಾಂಕ 31-07-2019 ರ ವರೆಗೆ ಒಟ್ಟು 40,320/- ರೂ. ಮೋಸದಿಂದ ವಿತ್ ಡ್ರಾ ಮಾಡಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 01-10-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ ಬೀದರ ಅಪರಾಧ ಸಂ. 170/2019, ಕಲಂ. 379 ಐಪಿಸಿ :-

ದಿನಾಂಕ 30-09-2019 ರಂದು 2330 ಗಂಟೆಗೆ ಫಿರ್ಯಾದಿ ಮಹ್ಮದ ಶಕೀಲ್ ತಂದೆ ಮಹ್ಮದ ವಾಜೀದ ಅಲಿ ವಯ: 32 ವರ್ಷ, ಜಾತಿ: ಮುಸ್ಲಿಂ, ಸಾ: ಗಾಂಧಿನಗರ ಮೈಲೂರ ಬೀಲಾಲ ಮಜ್ಜೀದ ಹತ್ತಿರ ಬೀದರ ರವರು ತನ್ನ ಮೋಟಾರ್ ಸೈಕಲ್ ನಂ. ಕೆಎ-38/ಡಬ್ಲು-1513 ನೇದನ್ನು ತಮ್ಮ ಮನೆಯ ಹೋರಗೆ ನಿಲ್ಲಿಸಿ ಮನೆಯಲ್ಲಿ ಊಟ ಮಾಡಿ ಮಲಗಿಕೊಂಡು ದಿನಾಂಕ 01-10-2019 ರಂದು ರಾತ್ರಿ ಅಂದಾಜು 0200 ಗಂಟೆಯ ಸುಮಾರಿಗೆ ಎಚ್ಚರಿಕೆಯಾದ ಸಪ್ಪಳವನ್ನು ಕೇಳಿ ಹೋರೆಗೆ ಬಂದಾಗ ಫಿರ್ಯಾದಿಯು ನಿಲ್ಲಿಸಿದ ಮೋಟಾರ ಸೈಕಲವನ್ನು ಯಾರೋ ಅಪರಿಚಿ ಕಳ್ಳರು ಮೋಟಾರ ಸೈಕಲ ತೆಗೆದುಕೊಂಡು ಹೋಗುತ್ತಿದ್ದಾಗ ಅವರಿಗೆ ಬೆನ್ನು ಹತ್ತಿದ್ದು ಅವರು ಅಲ್ಲಿಂದ ಸದರಿ ಮೋಟಾರ ಸೈಕಲ ಸಮೇತ ಕಳ್ಳತನ ಮಾಡಿಕೊಂಡು ಓಡಿ ಹೋಗಿರುತ್ತಾರೆ, ಕಳವು ಮಾಡಿಕೊಂಡು ಹೋದ ಮೋಟಾರ್ ಸೈಕಲ್ ವಿವರ 1) ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ. ಕೆಎ-38/ಡಬ್ಲು-1513, 2) ಚಾಸಿಸ್ ನಂ. ಎಮ್.ಡಿ.2.ಎ.11.ಸಿ.ವಾಯ್.8.ಕೆ.ಸಿ.ಎಲ್.54689, 3) ಇಂಜಿನ್ ನಂ. ಡಿ.ಹೆಚ್.ವಾಯ್.ಸಿ.ಕೆ.ಎಲ್.67152, 4) ಬಣ್ಣ: ಕಪ್ಪು ಬಣ್ಣ, 5) ಅ.ಕಿ 88,339/- ರೂ. ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 01-10-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.