ಹುಮನಾಬಾದ ಪೊಲೀಸ ಠಾಣೆ ಅಪರಾಧ ಸಂಖ್ಯೆ 99/2020 ಕಲಂ 32(3) ಕೆ.ಇ. ಕಾಯ್ದೆ :-

ದಿನಾಂಕ 01/07/2020 ರಂದು ಸಾಯಂಕಾಲ 1700 ಗಂಟೆಗೆ ಪಿಎಸ್ಐ ರವರು ಪೊಲೀಸ್ ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೇನೆಂದರೆ, ಧಮ್ಮನಸೂರ ಗ್ರಾಮದ ಬಸ ನಿಲ್ದಾಣದ ಹತ್ತಿರ ಇರುವ ಕೇದಾರ ಎಂಬುವವನು ತನ್ನ ಹೊಟೇಲ್ನಲ್ಲಿ ತನ್ನ ಹತ್ತಿರ ಸರಕಾರದಿಂದ ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅನವು ಮಾಡಿಕೊಟ್ಟಿರುತ್ತಾನೆ ಅಂತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಕೇದಾರ ತಂದೆ ರಾಜಪ್ಪಾ ಜೂತೆನೋರ, ವಯ 20 ವರ್ಷ, ಜಾ. ಕಬ್ಬಲಿಗೆ, ಉ. ಹೋಟೆಲ, ಸಾ.ಧೂಮ್ಮನಸೂರ ಇವನನ್ನು ಹಿಡಿದು ಸರಾಯಿ ಬಾಟಲಿ ಬಗ್ಗೆ ವಿಚಾರಿಸಿದಾಗ ಅವನು ತಿಳಿಸಿದ್ದೇನೆಂದರೆ, ತನ್ನ ಹೊಟೇನಲ್ಲಿ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅನುವು ಮಾಡಿ ಕೊಟ್ಟಿರುವುದು ಒಪ್ಪಿಕೊಂಡನು. ಅವನಿಗೆ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅನುವು ಕುರಿತು ಸರಕಾರದಿಂದ ಪರವಾನಿಗೆ ತೋರಿಸಲು ಹೇಳಿದಾಗ ಅವನು ತನ್ನ ಹತ್ತಿರ ಯಾವುದೇ ಪರವಾನಿಗೆ ಇರುವುದಿಲ್ಲಾ ಅಂತ ತಿಳಿಸಿದನು. ಮತ್ತು ಓಡಿ ಹೋದವರ ವಿಳಾಸ ವಿಚಾರಿಸಿದಾಗ ಅವರ ಹೆಸರು ಮತ್ತು ವಿಳಾಸ ಗೊತ್ತಿರುವುದಿಲ್ಲಾ ಅಂತ ತಿಳಿಸಿದನು. ನಂತರ ಟೇಬಲ್ ಮೇಲಿನ 1]  180 ಎಮ್ಎಲ್ನ ಒಂದು ಓರಿಜೀನಲ್ ತವೇರನ್ ಸರಾಯಿ ಟೇಟ್ರಾ ಪ್ಯಾಕೇಟ ಕಿಮ್ಮತ 87/- ರೂಪಾಯಿ 2]  180 ಎಮ್ಎಲ್ನ ಒಂದು ಓರಿಜೀನಲ್ ತವೇರನ್ ಸರಾಯಿ ಟೇಟ್ರಾ ಪ್ಯಾಕೇಟ ಒಡೆದ ಟೇಟ್ರಾ ಪ್ಯಾಕೇಟದಲ್ಲಿ ಸ್ವಲ್ಪ ಸರಾಯಿ ಇರುವದು ಹೀಗೆ ಒಟ್ಟು 87/- ರೂಪಾಯಿ ಬೆಲೆ ಬಾಳುವ ಸರಾಯಿ ಬಾಟಲಿಗಳು ಮತ್ತು ಸರಾಯಿ ಕುಡಿಯಲು ಉಪಯೋಗಿಸಿದ 3] 2 ಪ್ಲಾಸ್ಟಿಕ್ ಗ್ಲಾಸ್ಗಳು ಮತ್ತು 4] ಒಂದು ನೀರಿನ ಪ್ಲಾಸ್ಟಿಕ ಬಾಟಲ ನೇದವುಗಳನ್ನು ಜಪ್ತಿ ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಸಂತಪೂರ ಠಾಣೆ ಅಪರಾಧ ಸಂಖ್ಯೆ 51/2020 ಕಲಂ 279.304(ಎ) ಐ,ಪಿ,ಸಿ  :-

ದಿನಾಂಕ 01/07/2020 ರಂದು 0100 ಗಂಟೆಗೆ ಪಿಯರ್ಾದಿ ಶ್ರೀ ದೇವೆಂದ್ರ ತಂದೆ ರಘುನಾಥ ಕೊಳಿ ಸಾ/ ಸಂತಪೂರ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೆನಂದರೆ ದಿನಾಂಕ 30/06/2020 ರಂದು ಸಾಯಂಕಾಲ 1830 ಗಂಟೆಯ ಸುಮಾರಿಗೆ ಫೀರ್ಯಾದಿ ತಮ್ಮ ರಾಘವೆಂದ್ರ ಇತನು ಮೊಟಾರ ಸೈಕಲ ನಂ  ಕೆಎ39 ಕ್ಯೂ 8017 ನೇದರ ಮೇಲೆ ಖಾಸಗಿ ಕೇಲಸದ ನಿಮ್ಮಿತ್ಯ ಮೋಟಾರ ಸೈಕಲ ತೆಗದುಕೊಂಡು ಹೋಗಿದ್ದು ರಾತ್ರಿ 8 ಗಂಟೆಯ ಸುಮಾರಿಗೆ   ಗೆಳೆಯನಾದ ಸಂದೀಪ ತಂದೆ ವೈಜಿನಾಥ ಟೀಳೆಕರ , ರಾಜಕುಮಾರ ತಂದೆ ಲಕ್ಷ್ಮಿಣ ಬಿರಾದಾರ ಇವರು ನನಗೆ ಫೋನ ಮಾಡಿ ತಿಳಿಸಿದ್ದು ನಿಮ್ಮ ತಮ್ಮ ರಾಘವೇಂದ್ರ ಕುಶನೂರ- ಸಂತಪೂರ ರೋಡ ಪೋಲಿಸ ಠಾಣೆಯ ಮುಂದೆ ಮೋಟಾರ ಸೈಕಲ ಮೇಲೆ  ತಾನು ಅಜಾಗರೂಕತೆ ನಿಷ್ಕಾಳಜಿಯಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬರುವಾಗ  ಒಮ್ಮಲೆ ರೋಡಿನ ಮೇಲೆ ಆಕಳು ಬಂದಿದರಿಂದ ಹಿಡಿತ ತಪ್ಪಿ ರೋಡಿನ ಮೇಲೆ ಬಿದ್ದಿರುತ್ತಾನೆ ಇದರಿಂದ ನಿಮ್ಮ ತಮ್ಮನ ತಲೆಯ ಹಿಂದೂಗಡೆ  ಭಾರಿ ಪೆಟ್ಟಾಗಿ ರಕ್ತಗಾಯವಾಗಿರುತ್ತದೆ, ಮತ್ತು ಗುಪ್ತಾಂಗಕ್ಕ ಭಾರಿ ಗುಪ್ತಗಾಯವಾಗಿರುತ್ತದೆ  ಅಂತಾ ತಿಳಿಸಿದ ತಕ್ಷಣೆ ಫಿರ್ಯಾದಿ ಮತ್ತು ಇವರ ಅಣ್ಣ ಮಚಿಂದ್ರ ಇಬ್ಬರು ಸ್ಥಳಕ್ಕೆ ಬಂದು ಖಾಸಗಿ ಜೀಪಿನಲ್ಲಿ   ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಗೆದುಕೊಂಡು ಹೋಗುವಾಗ ಜನವಾಡಾ ದಾಟಿ ಸ್ವಲ್ಪ ಮುಂದೆ ಹೋದಾಗ ರಾತ್ರಿ ಅಂದಾಜ 2130    ಗಂಟೆ ಸೂಮಾರಿಗೆ ಮೃತಪಟ್ಟಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಸಂತಪೂರ ಠಾಣೆ ಅಪರಾಧ ಸಂಖ್ಯೆ 52/2020 ಕಲಂ 20(ಬಿ)(2) ಎನ್ ಡಿ ಪಿ ಎಸ್ ಎಕ್ಟ :-

ದಿನಾಂಕ 01/07/2020 ರಂದು 1330 ಗಂಟೆಗೆ ವಡಗಾಂವ-ಚಿಂತಾಕಿ ರೋಡಿನ ಮೇಲೆ ವಡಗಾಂವ ಹತ್ತಿರ ಇರುವ ಕೆ,ಇ,ಬಿ ಕಛೇರಿಯ ಸ್ವಲ್ಪ ದೂರದಲ್ಲಿ ಒಬ್ಬ ಮನುಷ್ಯ ಹಾಗು ಒಬ್ಬ ಹೆಣ್ಣು ಮಗಳು ಇಬ್ಬರು ಒಂದು ಬಿಳಿ ಬಣ್ಣದ ಪ್ಲಾಸ್ಟಿಕ ಚಿಲದಲ್ಲಿ ಗಾಂಜಾವನ್ನು ಇಟ್ಟುಕೊಂಡು ಮಾರಾಟ ಮಾಡಲು ತೆಗದುಕೊಂಡು ಹೋಗಲು ಬಸ್ಸಿನ ದಾರಿ ಕಾಯುತ್ತಾ ನಿಂತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ವಡಗಾಂವ  ಚಿಂತಾಕಿ ರೋಡಿನ ಮೇಲೆ ವಡಗಾಂವ ಕೆ.ಇ.ಬಿ ಪಾವರ ಹೌಸ ಹತ್ತಿರ 1745 ಗಂಟೆಗೆ ಹೋಗಿ ನೋಡಿದಾಗ ವಡಗಾಂವ ಚಿಂತಾಕಿ ರೋಡಿನ ಬದಿಯಲ್ಲಿ ಒಬ್ಬ ಮನುಷ್ಯ ಹಾಗು ಒಬ್ಬ ಹೆಣ್ಣು ಮಗಳು ಇಬ್ಬರು ಒಂದು ಬಿಳಿ ಬಣ್ಣದ ಪ್ಲಾಸ್ಟಿಕ ಚೀಲವನ್ನು ಇಟ್ಟುಕೊಂಡು ಬಸ್ಸಿನ ದಾರಿ ಕಾಯುತ್ತಾ ನಿಂತಿರುವ ಬಗ್ಗೆ  ಖಚಿತ ಪಡಿಸಿಕೊಂಡು 1800 ಗಂಟೆಗೆ ದಾಳಿ  ಮಾಡುವಾಗ ಹೆಣ್ಣುಮಗಳು ಸಿಕ್ಕಿದ್ದು ಒಬ್ಬ ಮನುಷ್ಯ ಹೋಲದಲ್ಲಿ ಓಡಿಹೋಗಿರುತ್ತಾನೆ  ಅವಳನ್ನು ವಿಚಾರಿಸಿದಾಗ  ತನ್ನ ಹೆಸರು ಲಕ್ಷ್ಮಿಬಾಯಿ ಗಂಡ ಲಕ್ಷ್ಮಣ ರಾಠೋಡ ವಯ 45 ವರ್ಷ ಜಾತಿ, ಲಮಾಣಿ ಉದ್ಯೂಗ, ಕೂಲಿ ಕೆಲಸ ಸಾ, ಘಾಮಾ ತಾಂಡಾ ಜಂಬಗಿ ಅಂತಾ ತಿಳಿಸಿದ್ದು  ಈ ಚೀಲದಲ್ಲ್ಲಿ ಗಾಂಜಾದ ಪಾಕೇಟಗಳು ಇರುತ್ತೆವೆ ಅಂತಾ ತಿಳಿಸಿದ್ದು  ಪರಿಶಿಲಿಸಿ ನೋಡಿದ್ದು ಒಳಗೆ  ಖಾಕಿ ಬಣ್ಣದ ಬ್ಯಾಂಡೆಜ್ದಿಂದ ಪ್ಯಾಕ ಮಾಡಿ ಅದರ ಮೇಲೆ ಅಡ್ಡಲಾಗಿ ಮತ್ತು ಉದ್ದಲಾಗಿ ಬ್ಯಾಂಡೆಜದಿಂದ ಸುತ್ತಿ ಪ್ಯಾಕ ಮಾಡಿದ 13 ಗಾಂಜಾ ಪಾಕೇಟಗಳು ಇದ್ದು ವಿನೋದಕುಮಾರ ಇವರಿಂದ ತೂಕ ಮಾಡಿಸಿ ನೋಡಲಾಗಿ 1) 2.ಕಿಲೋ160 ಗ್ರಾಂ  ಗಾಂಜಾ 2) 2. ಕಿಲೋ120 ಗ್ರಾಂ  ಗಾಂಜಾ 3) 1. ಕಿಲೋ 930 ಗ್ರಾಂ  ಗಾಂಜಾ 4)1. ಕಿಲೋ 850 ಗ್ರಾಂ  ಗಾಂಜಾ 5)1. ಕಿಲೋ 750.ಗ್ರಾಂ  ಗಾಂಜಾ 6)990 ಗ್ರಾಂ  ಗಾಂಜಾ 7)1. ಕಿಲೋ 40ಗ್ರಾಂ  ಗಾಂಜಾ 8) 2 ಕಿಲೋ ಗಾಂಜಾ 9)2. ಕಿಲೋ 250 ಗ್ರಾಂ  ಗಾಂಜಾ 10)1. ಕಿಲೋ 60ಗ್ರಾಂ  ಗಾಂಜಾ 11) 1. ಕಿಲೋ 30ಗ್ರಾಂ  ಗಾಂಜಾ 12)1. ಕಿಲೋ 810 ಗ್ರಾಂ  ಗಾಂಜಾ 13)1. ಕಿಲೋ 40 ಗ್ರಾಂ ಗಾಂಜಾ ಇರುತ್ತದೆ. ಹೀಗೆ ಒಟ್ಟು ಎರಡು ಪಾಕೆಟಗಳಲ್ಲಿ ಒಟ್ಟು ತೂಕ ಮಾಡಿದ್ದಾಗ 22.ಕಿಲೋ 560 ಗ್ರಾಂ ಗಾಂಜಾ ಇರುತ್ತದೆ ಒಂದು ಕೆ.ಜಿ ಗಾಂಜಾದ ಕಿಮ್ಮತ್ತು 12.000-/ ಸಾವಿರ ರೂಪಾಯಿ ಒಟ್ಟು 22.560 ಗ್ರಾಂ ಅಂ.ಕಿಮ್ಮತ್ತು 2,70,720/- ರೂ ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂಖ್ಯೆ 55/2020 ಕಲಂ 379 ಐಪಿಸಿ :-

ದಿನಾಂಕ 01-07-2020 ರಂದು 1800 ಗಂಟೆಗೆ ಶ್ರೀ ಶಾಮಸುಂದರ ತಂದೆ ಮಾರುತಿ ಖಾನಾಪೂರಕರ ಸಾ: ಖಾನಾಪೂರ ಸದ್ಯ ಅಗ್ರಿಕಲ್ಚರ ಕಛೇರಿ ಹಿಂದಗಡೆ ಔರಾದ(ಬಿ)  ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೇನೆಂದರೆ  ಔರಾದ ಪಟ್ಟಣದಲ್ಲಿ ಅಗ್ರಿಕಲ್ಚರ ಕಛೇರಿ ಹಿಂದಗಡೆ ರಾಜಪ್ಪಾ ಬಳತ ರವರ ಮನೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ವಾಸಾವಾಗಿದ್ದು ದಿನಾಂಕ 23-06-2020  ರಂದು ತನ್ನ ಕೆಲಸ ಕಾರ್ಯ ಮುಗಿದ ನಂತರ  ಮನಗೆ ಹೋಗಿ ತನ್ನ ಮೊಟಾರ ಸೈಕಲ್ ನಂ ಕೆಎ-38/ಕೆ-807 ನೇದು   ಬಾಡಿಗೆಯಿಂದ ಇದ್ದ ಮನೆಯ ಮುಂದೆ ನಿಲ್ಲಿಸಿದ್ದು  ಇರುತ್ತದೆ. ಆದರೆ  ದಿನಾಂಕ 24-06-2020 ರಂದು ಬೆಳಗ್ಗೆ 08:00 ಗಂಟೆಗೆ ಎದ್ದು ನಮ್ಮ ಮನೆಯ ಮುಂದೆ ನಿಲ್ಲಿಸಿದ ನನ್ನ  ಮೊಟಾರ ಸೈಕಲ್ ನಂ ಕೆಎ-38/ಕೆ-807 ನೇದು ನೋಡಲು ಇದ್ದಿರುವುದಿಲ್ಲಾ ಆಗ  ಮನೆಯ ಸುತ್ತಲು ಹುಡುಕಾಡಿ ಔರಾದ ಪಟ್ಟಣದಲ್ಲಿಯು ಹುಡುಕಾಡಿದ್ದು ಎಲ್ಲಿಯು ಸಿಕ್ಕಿರುವುದಿಲ್ಲ ನಂತರ ನಮ್ಮ ಮನೆಯ ಎದರುಗಡೆ ಇರುವ ಮನೆಯವರಿಗೆ ವಿಚಾರಿಸಿದ್ದು ಎಲ್ಲಿಯು ಕಂಡು ಬಂದಿರುವುದಿಲ್ಲಾ ಆ ದಿನದಿಂದ ಇಲ್ಲಿಯ ವರೆಗೆ  ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಡುಕಾಡಿದ್ದು ಎಲ್ಲಿಯು ಪತ್ತೆಯಾಗಿಲ್ಲ ಆದ್ದರಿಂದ ನಾನು ಬಾಡಿಗೆಯಿಂದ ಇದ್ದ ಮನೆಯ ಮುಂದೆ ನಿಲ್ಲಿಸಿದ ನನ್ನ ಮೊಟಾರ ಸೈಕಲ್ ನಂ ಕೆಎ-38/ ಕೆ-807 ಅಕಿ 12,000/-ರೂ ನೇದು ಯಾರೋ ಅಪರಿಚಿತ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ.  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 87/2020 ಕಲಂ 32, 34 ಕೆ.ಇ. ಕಾಯ್ದೆ ಜೊತೆ 273, 284 ಐಪಿಸಿ :-

ದಿನಾಂಕ: 01/07/2020 ನಾನು 1600 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ನನಗೆ  ಖಚೀತ ಬಾತ್ಮಿದಿದ್ದೆನೆಂದರೆ, ವಳಸಂಗ ಗ್ರಾಮದ ಸತೀಷ ಬಿರಾದಾರ ರವರ ಕೀರಾಣಿ ಅಂಗಡಿಯ ಹತ್ತಿರ  ಒಬ್ಬ ವ್ಯಕ್ತಿ   ಒಂದು  ಪ್ಲಾಸ್ಟೀಕ ಕ್ಯಾನದಲ್ಲಿ ಕಳ್ಳಭಟ್ಟಿ ಸರಾಯಿ (ಕಲಬರಕೆ ಸರಾಯಿ) ಮಾರಾಟ ಮಾಡಲು ನಿಂತಿದ್ದಾನೆ  ಅಂತ ಖಚಿತ ಮಾಹಿತಿ ಬಂದ ಮೇರೆಗೆ  ಕೂಡಲೇ ನಾನು ಇಬ್ಬರೂ ಪಂಚರಾದ: ರವರನ್ನು ಬರಮಾಡಿಕೊಂಡು ಸದರಿಯವರಿಗೆ ಸದರಿ ಅಬಕಾರಿ ದಾಳಿಯ ಬಗ್ಗೆ ವಿಷಯ ತಿಳಿಸಿದ ಮೇರೆಗೆ ಅವರು ನಮ್ಮ ಜೊತೆ ಬಂದು ಪಂಚರಾಗಲು ಕೇಳಿಕೊಂಡಾಗ ಅವರು ಒಪ್ಪಿಕೊಂಡ ಮೇರೆಗೆ  ಕೂಡಲೇ ನಾನು  ನಮ್ಮ ಪೊಲೀಸ್ ಸಿಬ್ಬಂದಿಯವರಾದ ವಿನೋದ ಸಿಪಿಸಿ-1378, ಜ್ಞಾನೇಶ್ವರ ಸಿಪಿಸಿ-1636, ರವರಿಗೆ ವಿಷಯ ತಿಳಿಸಿದೆನು  ನಂತರ ನಾನು ಪಂಚರು, ಹಾಗೂ  ಪೊಲೀಸ್ ಸಿಬ್ಬಂದಿಯವರೆಲ್ಲರು ಠಾಣಾ ಪೊಲೀಸ್ ಜೀಪ ನಂ. ಕೆಎ-38/ಜಿ-244 ನೇದ್ದರಲ್ಲಿ ನಾವು ಎಲ್ಲರು ಕುಳಿತುಕೊಂಡು ಜೀಪ ವಿನೋದ ಸಿಪಿಸಿ-1378 ರವರು ಚಲಾಯಿಸುತ್ತಾ 1615  ಗಂಟೆಗೆ ಠಾಣೆಯಿಂದ  ಹೊರಟು, 1645 ಗಂಟೆಗೆ ವಳಸಂಗ ಗ್ರಾಮದ ಸತೀಷ  ಬಿರಾದಾರ ರವರ ಕೀರಾಣಿ ಅಂಗಡಿಯ ಹತ್ತಿರ ಸ್ವಲ್ಪ ದೂರದಲ್ಲಿ ಹೊಗಿ ಜೀಪ ಮರೆಯಾಗಿ ನಿಲ್ಲಿಸಿ, ನಾವು ಎಲ್ಲರು ಜೀಪನಿಂದ ಕೆಳಗೆ ಇಳಿದು  ನಡೆದುಕೊಂಡು ಹೋಗಿ  ಒಂದು  ಬೇವಿನ ಮರದ ಬಾಜುದಲ್ಲಿ ಮರೆಯಾಗಿ ನಿಂತು ನೊಡಲು ಒಬ್ಬ ವ್ಯಕ್ತಿ   ತನ್ನ ಮುಂದೆ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ ಕ್ಯಾನನಲ್ಲಿ ಕಳ್ಳಭಟ್ಟಿ ಸರಾಯಿ  ಇಟ್ಟುಕೊಂಡು  ನಿಂತಿರುವದನ್ನು ನೋಡಿ ಖಚಿತಪಡಿಸಿಕೊಂಡು  ಅವರ ಮೇಲೆ 1700 ಗಂಟೆಗೆ ಮಾನ್ಯ ಡಿ.ಎಸ್.ಪಿ. ಭಾಲ್ಕಿ  ಮತ್ತು ಸಿ.ಪಿ.ಐ. ಭಾಲ್ಕಿ ಗ್ರಾಮೀಣ ವ್ರತ್ತ ರವರ ಮಾರ್ಗದರ್ಶನದಲ್ಲಿ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ನಾನು ಸದರಿಯವನ ಮೇಲೆ ದಾಳಿ ಮಾಡಿ ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು  ಅವರು ತನ್ನ ಹೆಸರು ಸತೀಷ ತಂದೆ ರಮೇಶ ಬಿರಾದಾರ ವಯ 19 ವರ್ಷ  ಜಾತಿ ಮರಾಠಾ ಉ, ಒಕ್ಕಲುತನ ಸಾ; ವಳಸಂಗ ಅಂತ ತಿಳಿಸಿರುತ್ತಾನೆ  ನಂತರ  ನಾನು ಆತನ  ಹತ್ತಿರ ಇದ್ದ  ಬಿಳಿ ಬಣ್ಣದ ಪ್ಲಾಸ್ಟಿಕ  ಕ್ಯಾನಿನ ಬಾಯಿ ತೆರೆದು  ನೋಡಲು  ಅದರಲ್ಲಿ ಸರಾಯಿ ವಾಸನೆ ಬರುತಿದನ್ನು ಕಂಡು ಪ್ಲಾಸ್ಟೀಕ ಕ್ಯಾನದಲ್ಲಿ ಎನು ಇದೆ ಅಂತ ವಿಚಾರಿಸಿದಾಗ ಇದರಲ್ಲಿ ಕಲಬರಕೆ ಸರಾಯಿ (ಕಳ್ಳಭಟ್ಟಿ ಸರಾಯಿ ) ಇರುತ್ತದೆ ಅಂತ ತಿಳಿಸಿದರು . ಈ ಸರಾಯಿ ಎಲ್ಲಿಂದ ತಂದ ಬಗ್ಗೆ  ವಿಚಾರಿಸಿದಾಗ ಕಾಳ ಸಂತೆಯಲ್ಲಿ ಖರೀದಿಸಿ ವಳಸಂಗ ಗ್ರಾಮದಲ್ಲಿ  ಸಾರ್ವಜನಿಕರಿಗೆ ಮಾರಾಟ ಮಾಡಲು ತೆಗೆದುಕೊಂಡು ಬಂದಿರುತ್ತೇನೆ ಅಂತ ತಿಳಿಸಿದರು .  ಈ ಸರಾಯಿ ಸೇವನೆ ಮಾಡಿದರೆ ಮಾನವ ಜಿವಕ್ಕೆ ಹಾನಿಯಾಗುವ ಸಂಬಂವ ಇರುತ್ತದೆ. ಈ ಸರಾಯಿ ವಿಷ ಪುರಿತವಾದದ್ದು ಈ ಸರಾಯಿ ಮಾರಾಟ ಮತ್ತು ಸಾಗಾಣಿಕೆ ಮಾಡಲು ಸರಕಾರದಿಂದ ಯಾವುದಾದರು ಕಾಗಪತ್ರಗಳು , ಪರವಾನಿಗೆ ಪತ್ರ ತಮ್ಮ ಹತ್ತಿರ ಇದೆಯೇ ಅಂತ ವಿಚಾರಿಸಿದಾಗ  ಅವರು  ತನ್ನ ಹತ್ತಿರ ಯಾವುದೆ ಪರವಾನಿಗೆ ಕಾಗದ ಪತ್ರಗಳು ಇರುವುದಿಲ್ಲಾ ಅಂತ ತಿಳಿಸಿರುತ್ತಾರೆ. ಸದರಿ ಪ್ಲಾಸ್ಟೀಕ ಕ್ಯಾನದಲಿದ್ದ ಕಳ್ಳಭಟ್ಟಿ ಸರಾಯಿ ಪರಿಶೀಲಿಸಿ ನೋಡಲು ಒಂದು ಬಿಳಿ ಬಣ್ಣದ ಪ್ಲಾಸ್ಟಿಕ ಕ್ಯಾನ ಇದ್ದು  ಅದರಲ್ಲಿ 10  ಲೀಟರದಷ್ಟು  ಕಳ್ಳಭಟ್ಟಿ ಸರಾಯಿ ಇದ್ದು ಪ್ರತಿಯೊಂದು ಲೀಟರನ ಸರಾಯಿ ಅ;ಕಿ; 100/- ರೂ ಹೀಗೆ ಒಟ್ಟು 10 ಲೀಟರ ಸರಾಯಿ ಅ;ಕಿ, 1000/- ರೂ ಬೇಲೆ ಬಾಳುವದು ಇರುತ್ತದೆ. ನಂತರ  ಸತೀಷ ತಂದೆ ರಮೇಶ  ಇತನ ಅಂಗಜಡತಿ ಮಾಡಿ ನೋಡಲಾಗಿ ಆತನ ಶೇರ್ಟಿನ ಜೇಬಿನಲ್ಲಿ 200/- ರೂ ನಗದು ಹಣ, ಇರುತ್ತವೆ  ಹೀಗೆ  ಎಲ್ಲಾ  ಒಟ್ಟು 1,200/- ರೂ ಬೆಲೆ ಬಾಳುವ, ಕಳ್ಳಭಟ್ಟಿ,ಕಲಬರಕೆ, ವಿಷಪುರಿತ, ಸರಾಯಿ, ನಗದು ಹಣ ಆರೋಪಿತರ ವಶದಿಂದ ಜಪ್ತಿ ಮಾಡಿದ್ದು ಇರುತ್ತದೆ. ಸದರಿ ಜಪ್ತಿ ಮಾಢಿದ ಸರಾಯಿಯಲ್ಲಿನ ಓಂದು ಲೀಟರ ಸರಾಯಿ ಪ್ರತ್ಯಕವಾಗಿ ಒಂದು ಲೀಟರಿನ ಪ್ಲಾಸ್ಟೀಕ ಬಾಟಲನಲ್ಲಿ ಹಾಕಿ ಬಿಳಿ ಬಟ್ಟೆಯಿಂದ ಬಾಯಿ ಹೊಲೆದು, ಅದರ ಮೇಲೆ  NDD ಎಂಬ ಇಂಗ್ಲೀಷ ಅರಗಿನ ಮುದ್ರೆಯಿಂದ ಸೀಲ ಮಾಡಿ ಅದರ ಮೇಲೆ ನನ್ನ ಹಾಗೂ ಪಂಚರ ಸಹಿ ಮಾಡಿದ ಚೀಟಿ ಅಂಟಿಸಿ ರಾಸಾಯನ ಪರೀಕ್ಷೆ ಕುರಿತು ಜಪ್ತಿ ಮಾಡಲಾಯಿತು. ಉಳಿದ ಸರಾಯಿ ಅದೇ ಬಿಳಿ ಬಣ್ಣದ ಅದೇ ಕ್ಯಾನಿನಲ್ಲಿ ಹಾಕಿ ಅದರ ಬಾಯಿ ಮುಚ್ಚಿ ಕೇಸಿನ ಮುಂದಿನ ಪೂರಾವೆ ಕುರಿತು ಪ್ರತ್ಯಕವಾಗಿ ಜಪ್ತಿ ಮಾಡಿಕೊಳ್ಳಲಾಯಿತು. ಮತ್ತು ನಗದು ಹಣ ಪ್ರತೇಕ ಕಾಗದದ ಕವರನಲ್ಲಿ ಹಾಕಿ ಜಪ್ತಿ ಮಾಡಿಕೊಳ್ಳಲಾಯಿತ್ತು    ಸದರಿ ಕಳ್ಳಭಟ್ಟಿ ಸರಾಯಿ ದಾಳಿ ಮಾಡುವ ಕಾಲಕ್ಕೆ ಅಲ್ಲೆ ಇದ್ದ ನವನಾಥ ಮೇತ್ರೆ  ರವರು ನೋಡಿರುತ್ತಾರೆ  ಸದರಿ ಜಪ್ತಿ ಪಂಚನಾಮೆ ಇಂದು ದಿನಾಂಕ 01/07/2020 ರಂದು 1700 ಗಂಟೆಯಿಂದ  1800 ಗಂಟೆಯ ವರೆಗೆ ಸ್ಥಳದಲ್ಲಿ ಕುಳಿತು ಬರೆದು ಮುಕ್ತಾಯಗೊಳಿಸಲಾಯಿತ್ತು  ಆರೋಪಿ ಮತ್ತು ಮುದ್ದೇಮಾಲಿನೊಂದಿಗೆ ಮರಳಿ ಠಾಣೆಗೆ ಬಂದು  ಈ ಮೇಲಿನ ಆರೋಪಿತನ ವಿರುದ್ಧ  ಪ್ರಕರಣ ದಾಖಲಿಸುವಂತೆ ಠಾಣಾಧಿಕಾರಿಗಳಿಗೆ ಸೂಚಿಸಿದ್ದರಿಂದ ಸದರಿ ವರದಿ ಹಾಗು ಜಪ್ತಿ ಪಂಚನಾಮೆಯ ಸಾರಾಂಶದ ಆಧಾರದ ಮೇರೆಗೆ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 87/2020 ಕಲಂ, 273, 284 ಐಪಿಸಿ, ಜೊತೆ 32, 34, ಕೆ. ಇ. ಎಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿರುತ್ತೇನೆ.