ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 02-06-2020

ಬಸವಕಲ್ಯಾಣ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 42/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ 01-06-2020 ರಂದು 1100 ಗಂಟೆಗೆ ಪಿಎಸ್ಐ ರವರು  ಠಾಣೆಯಲ್ಲಿ ಇದ್ದಾಗ ತಡೊಳಾ ಗ್ರಾಮದ ಜೈ ಭವಾನಿ ಮಂದಿರದ ಹತ್ತಿರ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೇಲವು ಜನರು ಗೋಲಾಕಾರವಾಗಿ ಕುಳಿತು ಹಣ ಕಟ್ಟಿ ಪಣ ತೊಟ್ಟಿ ಅಂದರ ಬಾಹೇರ ಎಂಬ ನಸೀಬಿನ ಜೂಜಾಟ ಆಡುತ್ತಿದ್ದಾರೆ ಅಂತಾ ಭಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಭಾತ್ಮಿಯಂತೆ ತಡೊಳಾ ಗ್ರಾಮಕ್ಕೆ ಹೋಗಿ ಮಂದಿರದ ಪಕ್ಕದಲ್ಲಿ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ 8 ಜನರು ಹಣ ಕಟ್ಟಿ ಪಣ ತೊಟ್ಟಿ ತಮ್ಮ ತಮ್ಮ ಕೈಯಲ್ಲಿ ಇಸ್ಪೀಟ ಎಲೆಗಳನ್ನು ಹಿಡಿದುಕೊಂಡು ಅಂದರ ಬಾಹೇರ ಎಂಬ ನಸೀಬಿನ ಜೂಜಾಟ ಆಡುವುದನ್ನು ನೋಡಿ ಖಚಿತ ಪಡಿಸಿಕೊಂಡು 1225  ಗಂಟೆಗೆ   ಪಂಚರ ಸಮಕ್ಷಮ ದಾಳಿ ಮಾಡಿ  1] ಚಂದ್ರಕಾಂತ ತಂದೆ ಬಂಡೇಪ್ಪಾ ಪಂಚಾಳ ವಯ 45 ವರ್ಷ ಜಾತಿ ಪಂಚಾಳ ಇತನ ವಶದಿಂದ  570 ರೂಪಾಯಿ   2] ಮಲ್ಲಪ್ಪಾ  ತಂದೆ ಕಾಶಪ್ಪಾ ಕೊಟ್ರಗೆ ವಯ 35 ವರ್ಷ ಇತನ ವಶದಿಂದ 610 ರೂಪಾಯಿ  3]  ಗುಂಡಪ್ಪಾ ತಂದೆ ಸುಭಾಷ ಮೇತ್ರೆ ವಯ 33 ವರ್ಷ ಇತನ ವಶದಿಂದ 310 ರೂಪಾಯಿ   4]  ಶಿವಕುಮಾರ ತಂದೆ ಧನ್ನಪ್ಪಾ ಹಂದ್ರಾಳ ಇತನ ವಶದಿಂದ 520 ರೂಪಾಯಿ   5]  ಪ್ರಕಾಶ ತಂದೆ ಮಾಣಿಕಪ್ಪಾ ಮೇತ್ರೆ ವಯ 40 ವರ್ಷ ಇತನ ವಶದಿಂದ 610 ರೂಪಾಯಿ   6]  ಶಿವರಾಜ ತಂದೆ ಶಿವಶರಣಪ್ಪಾ ನಂದಿ ಇತನ ವಶದಿಂದ 700 ರೂಪಾಯಿ  7]  ಅಮರನಾಥ ತಂದೆ ಸಿದ್ರಾಮಪ್ಪಾ ಬಿರಾದಾರ ವಯ 30 ಇತನ ವಶದಿಂದ 320 ರೂಪಾಯಿ ಇದ್ದವು. 8]  ಗೌಡಪ್ಪಾ ತಂದೆ ಈರಪ್ಪಾ ಬಿರಾದಾರ ವಯ 46 ಇತನ ವಶದಿಂದ 390 ರೂಪಾಯಿ     ಮತ್ತು ಎಲ್ಲರ ಮಧ್ಯದಲ್ಲಿರುವ 6170 ರೂಪಾಯಿ ಇದ್ದವು, ಹಾಗು 52 ಇಸ್ಟೀಟ ಎಲೆಗಳು ಮತ್ತು  10,200/- ರೂಪಾಯಿ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 78/2020 ಕಲಂ 420 ಐಪಿಸಿ :-

ದಿನಾಂಕ 01/06/2020 ರಂದು 1100 ಗಂಟೆಗೆ ಫಿರ್ಯಾದಿ ದೇವಾನಂದ ತಂದೆ ಖಂಡೇರಾವ ವಿಜಾಪೂರೆ, ವಯ 58 ವರ್ಷ, ಉ. ವ್ಯಾಪಾರ,  ಸಾ: ಮಾಣಿಕ ನಗರ ರವರು ಠಾಣೆಗೆ ಹಾಜರಾಗಿ ನೀಡಿರುವ ದೂರಿನ ಸಾರಾಂಶವೆನೆಂದರೆ  ಇವರುಗಳು ಒಟ್ಟು 3 ಜನ ಸಹೋದರರಿದ್ದು ವಿಜಯಾನಂದ ವಯ 55 ವರ್ಷ ಮತ್ತು &  ಚೇತನ 48 ವರ್ಷ ಅಂತಾ 3  ಸಹೋದರರಿದ್ದು ಇವರ ತಂದೆ ಮೃತಪಟ್ಟಿದ್ದು ಇವರ ತಾಯಿ ಸಾವಿತ್ರಾಬಾಯಿ ವಯ 75 ವರ್ಷ ಇವರೊಂದಿಗೆ ಒಟ್ಟಿಗೆ ಇರುತ್ತಾರೆ. ದಿನಾಂಕ 01/06/2020 ರಂದು ಮುಂಜಾನೆ 09.15 ಗಂಟೆಗೆ ಫಿರ್ಯಾದಿ ತಮ್ಮ  ಮನೆಯ ಮುಂದೆ ನಿಂತಾಗ ಒಂದು ನೀಲಿ ಬಣ್ಣ ನಂಬರ ಇಲ್ಲಾದೇ ಇರುವ ಸ್ಕೂಟಿ ಮೇಲೆ ಇಬ್ಬರು ವ್ಯಕ್ತಿಗಳು ಬಂದು ಒಬ್ಬ ವ್ಯಕ್ತಿ ಸ್ಕೂಟಿ ಮೇಲೆ ಸ್ವಲ್ಪ ದೂರು ನಿಂತಿದ್ದು ಇನ್ನೋಬ್ಬ ವ್ಯಕ್ತಿ ನೀಲಿ ಬಣ್ಣದ ಶರ್ಟ ಧರಿಸಿದ ವ್ಯಕ್ತಿ ಇವರ ಹತ್ತಿರ ಬಂದು ಕೋರೋನಾ ವೈರಸ ಹರಡದಂತೆ ನಾವು ಬಡವರಿಗೆ 400/- ರೂ ಮತ್ತು ಬಿಸ್ಕಟಗಳು ಇದ್ದು ಇವು ಬಡವರಿಗೆ ಹಂಚಿ ಮತ್ತು ಇದರಲ್ಲಿ ಇದ್ದ ನೋಟಗಳಿಗೆ ಬಂಗಾರದ ಸರ ಉಂಗುರು ಹಚ್ಚಿದರೆ ವಯಸ್ಸಾದವರಿಗೆ ಕೋರೋನಾ ವೈರಸ ಬರುವುದಿಲ್ಲ ಅಂತಾ ಹೇಳಿದಾಗ ಫಿರ್ಯಾದಿಯು ತನ್ನ ತಾಯಿಯ 3 ತೋಲಿ ಬಂಗಾರದ ಗಂಟನ ಮತ್ತು ಪಿರ್ಯಾದಿ ಕೈಯಲ್ಲಿದ್ದ 5 ಗ್ರಾಮ ಬಂಗಾರದ ಉಂಗುರು ತೆಗೆದು  ಆ ವ್ಯಕ್ತಿಯ ಕೈಯಲ್ಲಿ ಕೊಟ್ಟಿದ್ದು ಅವನು  ರೂ. 400/- ನೋಟುಗಳಿಗೆ ಗಂಟನ ಮತ್ತು ಉಂಗುರು ಸುತ್ತಿ ಕ್ಯಾರಿ ಬ್ಯಾಕದಲ್ಲಿ ಹಾಕಿ ಫಿರ್ಯಾದಿಗೆ ಕೊಟ್ಟು ನಾನು ಹೋದ ನಂತರ ಕ್ಯಾರಿ ಬ್ಯಾಗ್ ತೆಗೆದು ನೋಡಲು ತಿಳಿಸಿದ್ದು ಫಿರ್ಯಾದಿಯು ಅನುಮಾನ ಬಂದು ನೋಡಲು ಅಪರಿಚಿತರಿಬ್ಬರು  ಸ್ಕೂಟಿ ಮೇಲೆ ಕುಳಿತು ಓಡಿ ಹೋಗಿರುತ್ತಾರೆ. ಕಾರಣ ನನಗೆ ಬಂಗಾರದ ವಸ್ತುಗಳಿಗೆ ಆಯರ್ುವೇದ ಔಷಧಿ ಅಚ್ಚಿ ವಯ್ಸಾದವರಿಗೆ ಕೋರೋನಾ ವೈರಸ ಹರಡದಂತೆ ಮಾಡುತ್ತೇವೆ ಅಂತಾ ಹೇಳಿಕೆ ಮೋಸ ಮಾಡಿ 3 ತೋಲಿ ಬಂಗಾರದ ಗಂಟನ ಸರ ಅ.ಕಿ 1,20000/- ರೂಪಾಯಿ ಮತ್ತು 5 ಗ್ರಾಮ ಬಂಗಾರದ ಉಂಗುರು ಅ.ಕಿ 20000/- ನೇದ್ದು ಮೋಸ ಮಾಡಿತೆಗೆದುಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಬೀದರ ನೂತನ ನಗರ ಠಾಣೆ ಅಪರಾಧ ಸಂಖ್ಯೆ 62/2020 ಕಲಂ ಹುಡುಗ ಕಾಣೆ :-

ದಿನಾಂಕ 01/06/2020 ರಂದು 1330 ಗಂಟೆಗೆ ಫಿರ್ಯಾದಿ ಶ್ರೀ ಸುಮಂತ ತಂದೆ ಗೋಪಾಲಕೃಷ್ಣ ಸಾ/ ಆಣದೂರ ಗ್ರಾಮ ಸದ್ಯ ಮನೆ ಸಂ 8-11-42 ಕೆಇಬಿ ರೋಡ ಹೌಸಿಂಗ ಕಾಲೋನಿ ಬೀದರ ರವರು ಖುದ್ದಾಗಿ ಪೊಲೀಸ ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ, ಫಿಯರ್ಾದಿ ಸದ್ಯ ಮನೆ ಸಂ 8-11-42 ಕೆಇಬಿ ರೋಡ ಹೌಸಿಂಗ ಕಾಲೋನಿ ಬೀದರ ಗುದಗೆ ಆಸ್ಪತ್ರೆ ಹತ್ತಿರ ವಾಸವಾಗಿದ್ದು, ಇವರಿಗೆ 1] ಸಾರಂಗ ವಯ 24 ವರ್ಷ 2] ಸೌರಭ ವಯ 22 ವರ್ಷ   ಇಬ್ಬರು ಗಂಡು ಮಕ್ಕಳು ಇರುತ್ತಾರೆ. ದೊಡ್ಡ ಮಗನಾದ ಸಾರಂಗ ವಯ  ಈತನು ಈಗ ಸೂಮಾರು ಒಂದು ವರ್ಷದಿಂದ ಬೆಂಗಳೂರಿನ ಒಂದು ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಲೆಕ್ಚರನಾಗಿ ಕೆಲಸ ಮಾಡಿಕೊಂಡಿದ್ದು,  ಸಣ್ಣ ಮಗನಾದ ಸೌರಭ ಈತನು ಬೆಂಗಳೂರಿನಲ್ಲಿ ವಿದ್ಯಬ್ಯಾಸ ಮಾಡಿಕೊಂಡು ಇಬ್ಬರು ಮಕ್ಕಳು ಬೆಂಗಳೂರಿನಲ್ಲಿ ವಾಸವಾಗಿರುತ್ತಾರೆ. ಆದರೆ ಈಗ ಲಾಕಡೌನ ಇದ್ದರಿಂದ ಸೂಮಾರು ಒಂದು ತಿಂಗಳ ಹಿಂದೆ   ಇಬ್ಬರು ಮಕ್ಕಳು ಬೆಂಗಳೂರಿನಿಂದ ಮನೆಗೆ ಬಂದಿರುುತ್ತಾರೆ.  ಹೀಗಿರುವಾಗ   ದಿನಾಂಕ 31/05/2020 ರಂದು 2030 ಗಂಟೆಯ ಸೂಮಾರಿಗೆ ಸಾರಂಗ ಮನೆಯಿಂದ ಹೊರಗಡೆ ಹೋಗಿದ್ದು ರಾತ್ರಿ ಕತ್ತಲಾದರೂ ಮನೆಗೆ ಬರಲಾರದ ಕಾರಣ ಸದರಿಯವನಿಗೆ ಫೋನ ಮಾಡಿದಾಗ ಅದು ಮನೆಯಲ್ಲಿಯೇ ಇತ್ತು. ನಂತರ ದಿನಾಂಕ 01/06/2020 ರಂದು  ಎಲ್ಲಾ ಸಂಬಂಧಿಕರ ಹತ್ತಿರ ಮತ್ತು ಬೀದರ ನಗರದ ಎಲ್ಲಾ ಕಡೆ ಹುಡಕಾಡಿದರೂ  ಯಾವುದೇ ಸುಳಿವು ಸಿಕ್ಕಿರುವುದಿಲ್ಲಾ.   ಮಗನಾದ ಸಾರಂಗ ವಯ 24 ವರ್ಷ ಈತನು ದಿನಾಂಕ 31/05/2020 ರಂದು ಬೀದರ ನಗರದ ಗುದಗೆ ಆಸ್ಪತ್ರೆಯ ಹತ್ತಿರ ಇರುವ ನಮ್ಮ ಮನೆಯಿಂದ ಕಾಣೆಯಾಗಿದ್ದು ಇರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.