ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 02-03-2021

 

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 07/2021, ಕಲಂ. 302 ಐಪಿಸಿ :-

ದಿನಾಂಕ 28-02-2021 ರಂದು ರಾತ್ರಿ ಫಿರ್ಯಾದಿ ಅರ್ಚನಾ ಗಂಡ ದಿನೇಶ ವಾಲೇಕರ ವಯ: 22 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಔರಾದ(ಎಸ್), ತಾ: ಜಿ: ಬೀದರ ರವರ ಗಂಡ ದಿನೇಶ ತಂದೆ ಭೀಮಶಾ ವಾಲೆಕರ ವಯ: 25 ವರ್ಷ ರವರ ಕೊಲೆಯಾಗಿರುತ್ತದೆ, ಅವರ ಮೃತ ದೇಹವು ಮೊಹಿನ ಪಾಶಾ ಕಾಂಪ್ಲೆಕ್ಸ ಹತ್ತಿರ ಸಿಕ್ಕಿರುತ್ತದೆ, ಸದರಿ ಈ ಕೊಲೆಯು ಆರೋಪಿತರಾದ 1) ಮೊಹಿನಪಾಶಾ, 2) ಮಾಂಜ್ರಾ ಧಾಬಾದ ಮಾಲಿಕ ಸಾ: ಇಬ್ಬರು ಮೊಗದಾಳ ಇವರಿಬ್ಬರು ಸೇರಿ ಮಾಡಿರುತ್ತಾರೆಂದುಇ ಮಾಹಿತಿ ಸಿಕ್ಕಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 01-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 24/2021, ಕಲಂ. ಮನುಷ್ಯ ಕಾಣೆ :-

ದಿನಾಂಕ 28-02-2021 ರಂದು 0800 ಗಂಟೆಗೆ ಫಿರ್ಯಾದಿ ಮಚೆಂದರ ತಂದೆ ಭಾನುದಾಸ ಸಕಟ ವಯ: 34 ವರ್ಷ, ಜಾತಿ: ಮಾಂಗರವಾಡಿ, ಸಾ: ಈಶ್ವರ ನಗರ ಬಸವಕಲ್ಯಾಣ ರವರ ತಮ್ಮನಾದ ಗೋರಖ ತಂದೆ ಭಾನುದಾಸ ಸಕಟ ವಯ: 21 ವರ್ಷ, ಜಾತಿ: ಮಾಂಗರವಾಡಿ, ಸಾ: ಈಶ್ವರ ನಗರ ಬಸವಕಲ್ಯಾಣ ಇತನು ಬಸವಕಲ್ಯಾಣ ನಗರದ ನಾರಾಯಣಪೂರ ರಸ್ತೆಯ ಧೋಬಿ ಘಾಟ ಹತ್ತಿರ ಇರುವ ತಮ್ಮ ಓಣೆಯ ಅಜಯ ತಂದೆ ವಿಶ್ವನಾಥ ಸಕಟ ಇತನ ಹಳೆ ಸಾಮಾನು ಖರೀದಿ ಅಂಗಡಿಯಲ್ಲಿ ಕೂಲಿ ಕೆಲಸ ಮಾಡಲು ಹೋಗುತ್ತೆನೆಂದು ಹೇಳಿ ಮನೆಯಿಂದ ಹೋದವನು ಮರಳಿ ಮನೆಗೆ ಬಂದಿರುವುದಿಲ್ಲ, ಆತನು ಕಾಣೆಯಾಗಿರುತ್ತಾನೆ, ಗೋರಖ ಇತನ ಚಹರೆ ಪಟ್ಟಿ 1) ಉದ್ದ ಮುಖ, ನೇರ ಮೂಗು, ಗೋಧಿ ಮೈ ಬಣ್ಣ, ಸಾಧಾರಣ ಮೈಕಟ್ಟು, 2) 5.6 ಅಡಿ ಎತ್ತರ, 3) ಮೈ ಮೇಲೆ ಕೆಂಪು ಬಣ್ಣದ ಶರ್ಟ ಮತ್ತು ಕಪ್ಪು ಬಣ್ಣದ ಪ್ಯಾಂಟ ಇರುತ್ತದೆ, 3) ಮರಾಠಿ, ಹಿಂದಿ ಭಾಷೆ ಮಾತನಾಡುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 01-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 45/2021, ಕಲಂ. 279, 337, 338 ಐಪಿಸಿ :-

ದಿನಾಂಕ 01-03-2021 ರಂದು ಫಿರ್ಯಾದಿ ಮುಜಮ್ಮಿಲ ತಂದೆ ಖಾಜಾಮಿಯ್ಯಾ ಪಟೇಲ, ವಯ: 21 ವರ್ಷ, ಜಾತಿ: ಮುಸ್ಲಿಂ, ಸಾ: ಹಾಗರಗಾ ಕ್ರಾಸ್ ಕಲಬುರ್ಗಿ ರವರು ತನ್ನ ಗೆಳಯರಾದ ಅಬ್ಬಾಸ ಅಲಿ ತಂದೆ ಸಯ್ಯದ ಅಹೆಮದ ವಯ: 22 ವರ್ಷ ಹಾಗು ಯಾಸೀನ ಅಹೆಮದ ತಂದೆ ಅಬ್ದುಲ ರಹೀಮ ಶೇಕ ವಯ: 23 ವರ್ಷ ಮೂವರು ಕೂಡಿಕೊಂಡು ಕಲಬುರಗಿಯಿಂದ ಘೋಡವಾಡಿಗೆ ಯಾಸೀನ ಅಹೆಮದ ಈತನ ಮೋಟರ ಸೈಕಲ ನಂ. ಕೆಎ-32/ಇ.ಯು-2316 ನೇದರ ಮೇಲೆ ಹೋಗುವಾಗ ಮೋಟರ ಸೈಕಲ ಯಾಸೀನ ಅಹೆಮದ ಚಲಾಯಿಸುತ್ತಿದ್ದು ರಾ.ಹೆದ್ದಾರಿ ನಂ. ಕಲಬುರ್ಗಿ ಹುಮನಾಬಾದ ರೋಡ ಮೇಲೆ ಹಳ್ಳಿಖೇಡ (ಕೆ) ವಾಡಿ ಶಾಲೆ ಎದುರಿಗೆ ಇರುವ ಜಂಪಿನಲ್ಲಿ ಯಾಸೀನ ಅಹೆಮದ ಈತನು ಮೋಟರ ಸೈಕಲನ್ನು ಅತಿವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಜಂಪಿನಲ್ಲಿ ಹಾರಿಸಿ ರಸ್ತೆ ಪಕ್ಕದ ನಾಲಿಯಲ್ಲಿ ಹಾಕಿ ಅಪಘಾತ ಪಡಿಸಿರುತ್ತಾರೆ, ಸದರಿ ಅಪಘಾತದಿಂದ ಫಿರ್ಯಾದಿಯ ಗಟಾಯಿಗೆ ರಕ್ತಗಾಯ, ಬಲಮುಂಗೈಗೆ ಬಲಗಾಲಿಗೆ ಗುಪ್ತಗಾಯವಾಗಿದ್ದು, ಅಬ್ಬಾಸ ಅಲಿ ಇತನ ತಲೆಗೆ ಭಾರಿ ರಕ್ತಗಾಯ, ಬಲಮುಂಬೈಗೆ ಭಾರಿ ಗುಪ್ತಗಾಯ ಹಾಗು ಮೋಟರ ಸೈಕಲ ಚಲಾಯಿಸುತ್ತಿದ್ದ ಆರೋಪಿ ಯಾಸೀನ ಅಹೆಮದನಿಗೆ ತಲೆಗೆ ರಕ್ತಗಾಯ, ಮುಖಕ್ಕೆ, ಎಡತೊಡೆಗೆ, ಎರಡೂ ಮುಂಗೈಗೆ ತರಚಿದ ಗಾಯ ಹಾಗೂ ಸೊಂಟಕ್ಕೆ ಗುಪ್ತಗಾಯಗಳಾಗಿರುತ್ತವೆ, ನಂತರ ಅದೇ ಮಾರ್ಗದಲ್ಲಿ ಬರುತ್ತಿದ್ದ ಚಿಟಗುಪ್ಪಾ ಪೊಲೀಸರು ಅವರ ಜೀಪಿನಲ್ಲಿ ಚಿಕಿತ್ಸೆಗಾಗಿ ಹುಮನಾಬಾದ ಸರ್ಕಾರಿ ಆಸ್ಪತ್ರಗೆ ದಾಖಲಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 46/2021, ಕಲಂ. 379 ಐಪಿಸಿ :-

ದಿನಾಂಕ 01-03-2021 ರಂದು ಫಿರ್ಯಾದಿ ಶ್ರೀನಿವಾಸ ತಂದೆ ಮನೋಹರ ಕುಲಕರ್ಣಿ ವಯ: 47 ವರ್ಷ, ಜಾತಿ: ಬ್ರಾಹ್ಮಣ, ಸಾ: ಕುನಬಿ ವಾಡಾ ಚಿಟಗುಪ್ಪಾ ರವರು ತರಕಾರಿ ತರಲು ಚಿಟಗುಪ್ಪಾ ಪಟ್ಟಣದ ಸರಸ್ವತಿ ಎಲೆಕ್ಟ್ರೀಕಲ್ ಅಂಗಡಿಯ ಎದುರಗಡೆ ತರಕಾರಿ ಬಗ್ಗಿ ತರಕಾರಿ ಆಯ್ದುಕೊಳ್ಳುವಾಗ ಯಾರೋ ಅಪರಿಚಿತ ಕಳ್ಳರು  ಬಂದು ಫಿರ್ಯಾದಿಯವರ ಶರ್ಟಿನ ಜೇಬಿನಿಂದ ಲಿನೊವೋ ಕೆ5 ವೈಬ್ ಕಂಪನಿಯ ಮೋಬೈಲ್ 11,000/- ರೂಪಾಯಿ ಬೆಲೆವುಳ್ಳದ್ದನ್ನು ಕಳ್ಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹೊಕ್ರಣಾ ಪೊಲೀಸ ಠಾಣೆ ಅಪರಾಧ ಸಂ. 04/2021, ಕಲಂ. 32, 34 ಕೆ.ಇ ಕಾಯ್ದೆ :-

ದಿನಾಂಕ 01-03-2021 ರಂದು ಹೊಕ್ರಣಾ ಗ್ರಾಮದ ಅನೀಲ ತಂದೆ ಪಂಡರಿನಾಥ ಭಾನೊಬಾ ಇತನು ತನ್ನ ಕಿರಾಣಾ ಅಂಗಡಿಯಲ್ಲಿ ಅಕ್ರಮ ಸರಾಯಿ ಇಟ್ಟು ಮಾರಾಟ ಮಾಡುತ್ತಿದ್ದಾನೆ ಅಂತ ರವೀಂದ್ರನಾಥ ಸಿಪಿಐ ಔರಾದ (ಬಿ) ವೃತ್ತ ರವರಿಗೆ ಬಾತ್ಮಿ ಬಂದ ಮೇರೆಗೆ ಸಿಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಅನೀಲ ಭಾನೊಬಾ ಇತನ ಕಿರಾಣಾ ಅಂಗಡಿಯ ಸ್ವಲ್ಪ ಹಿಂದುಗಡೆ ಮರೆಯಾಗಿ ನೊಡಲು ಜನರು ಸರಾಯಿ ಕುಡಿದು ಬರುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಅನಿಲ ಭಾನೊಬಾ ಇತನ ಕಿರಾಣಾ ಅಂಗಡಿ ಮೇಲೆ ಸಿಪಿಐ ರವರು ಸಿಬ್ಬಂದಿಯಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಕಿರಾಣಾ ಅಂಗಡಿಯ ಕೌಂಟರದಲ್ಲಿ ಪರಿಶೀಲಿಸಿ ಅದರಲ್ಲಿ 1) 90 ಎಮ್.ಎಲ್ ವುಳ್ಳ 99 ಓರಿಜಿನಲ್ ಚಾಯಿಸ್ ಸರಾಯಿ ಟೇಟ್ರಾ (ಪೌಚ್) ಗಳಿದ್ದು ಅದರಲ್ಲಿ ಅ.ಕಿ 3,477/- ರೂಪಾಯಿ ಮತ್ತು 2) 180 ಎಮ್.ಎಲ್ ವುಳ್ಳ 38 ಓಲ್ಡ್ ಟಾವರ್ನ ಟೇಟ್ರಾ ಪಾಕೆಟಗಳು ಅ.ಕಿ 3,296/- ರೂಪಾಯಿ ದೊರೆತ್ತಿದ್ದು, ನಂತರ ಆರೋಪಿಗೆ ಹೆಸರು ವಿಚಾರಿಸಲು ಆತನು ಅನಿಲ ತಂದೆ ಪಂಡರಿನಾಥ ಭಾನೊಬಾ ವಯ: 38 ವರ್ಷ, ಜಾತಿ: ಮರಾಠಾ, ಸಾ: ಹೊಕ್ರಾಣಾ ಅಂತ ತಿಳಿಸಿದ್ದು, ನಂತರ ಆತನಿಗೆ ಸರಾಯಿ ಮಾರಾಟ ಮಾಡಲು ಸರಕಾರದಿಂದ ಅನುಮತಿ ಪಡೆಯಲಾಗಿದೆಯೇ ಅಂತ ವಿಚಾರಿಸಲು ಆತನು ಇಲ್ಲ ಅಂತ ತಿಳಿಸಿರುತ್ತಾನೆ, ನಂತರ ಸರಾಯಿ ಮಾರಾಟ ಮಾಡುವ ಬಗ್ಗೆ ಕಾಗದ ಪತ್ರಗಳು ಇವೆಯೇ ಅಂತ ವಿಚಾರಿಸಲು ಇಲ್ಲ ಅಂತ ತಿಳಿಸಿರುತ್ತಾನೆ, ನಂತರ ಪಂಚರ ಸಮಕ್ಷಮದಲ್ಲಿ ಸದರಿ ಆರೋಪಿ ಹಾಗೂ ಸರಾಯಿಯನ್ನು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಖಟಕಚಿಂಚೋಳಿ ಪೊಲೀಸ್ ಠಾಣೆ ಅಪರಾಧ ಸಂ. 22/2021, ಕಲಂ. 62 ಕರ್ನಾಟಕ ಅರಣ್ಯ ಕಾಯ್ದೆ ಮತ್ತು 379, 411 ಜೊತೆ 34 ಐಪಿಸಿ :-

ದಿನಾಂಕ 01-03-2021 ರಂದು ಹುಲೆಪ್ಪಾ ಪಿಎಸ್ಐ ಖಟಕಚಿಂಚೋಳಿ ಪೊಲೀಸ್ ಠಾಣೆ ರವರು ಪಟ್ರೋಲಿಂಗ್ ಕರ್ತವ್ಯದಲ್ಲಿರುವಾಗ ನಾವದಗಿ ತಾಂಡಾದ ಹತ್ತಿರ ಪ್ರಭು ಬಿರಾದಾರ ಸಾ: ನಾವದಗಿ ರವರ ಹೊಲದ ಹತ್ತಿರ ನಾವದಗಿ – ಕಪಲಾಪೂರ ರೋಡಿನ ಮೇಲೆ ಬರುತ್ತಿರುವಾಗ ಇದೆ ವೇಳೆಯಲ್ಲಿ ಮೋಟಾರ ಸೈಕಲ್ ನಂ. ಕೆಎ-39/ಎಲ್-5644 ನೇದರ ಚಾಲಕನಾದ ಆರೋಪಿ ಸಂಜು ತಂದೆ ರುಪಚಂದ ಜಾಧವ ವಯ: 32 ವರ್ಷ, ಜಾತಿ: ಲಂಬಾಣಿ, ಸಾ: ನಾವದಗಿ ತಾಂಡಾ ಇತನು ತನ್ನ ವಾಹನದ ಮೇಲೆ ಒಂದು ಪ್ಲಾಸ್ಟೀಕ್ ಚೀಲದಲ್ಲಿ ಯಾವುದೋ ವಸ್ತುಗಳನ್ನು ಸಂಶಯಾಸ್ಪದವಾಗಿ ತೆಗೆದುಕೊಂಡು ಹೊಗುತ್ತಿರುವಾಗ ಅನುಮಾನ ಬಂದು ಆರೋಪಿಗೆ ನಿಲ್ಲಿಸಿ ಆತನ ಹತ್ತಿರವಿದ್ದ ಪ್ಲಾಸ್ಟೀಕ್ ಚೀಲವನ್ನು ಬಿಚ್ಚಿ ಪರಿಶೀಲಿಸಿ ನೋಡಲು ಸದರಿ ಪ್ಲಾಸ್ಟೀಕ್ ಚೀಲದಲ್ಲಿ ತುಂಡು ಮಾಡಿದ ಅರೆ-ಬರೆ ಹಸಿಯಾದ ಮರದ ಕಟ್ಟಿಗೆಗಳಿದ್ದು ಮತ್ತು ವಾಸನೆ ಬಂದಾಗ ಆರೋಪಿಗೆ ಇವು ಯಾವ ಮರದ ಕಟ್ಟಿಗೆಗಳು ಇವೆ ಅಂತ ವಿಚಾರಿಸಲು ಆರೋಪಿಯು ಈ ತುಂಡುಗಳು ಶ್ರೀಗಂಧದ ಕಟ್ಟಿಗೆಗಳಿರುತ್ತವೆ ಅಂತ ತಿಳಿಸಿರುತ್ತಾನೆ, ನಂತರ ಆರೋಪಿಗೆ ಈ ಶ್ರಿಗಂಧದ ತುಂಡುಗಳನ್ನು ಎಲ್ಲಿಂದ ತೆಗೆದುಕೊಂಡು ಬರುತ್ತಿದ್ದಿಯಾ ಅಂತ ವಿಚಾರಿಸಲು ಸದರಿಯವನು ಈ ಶ್ರಿಗಂಧದ ತುಂಡುಗಳನ್ನು ನಾನು ಮತ್ತು ನಮ್ಮ ನಾವದಗಿ ತಾಂಡಾದ ಅವಿನಾಶ ತಂದೆ ಗಣಪತಿ ರಾಠೋಡ ಹಾಗೂ ಚಿಕ್ಕನಾಗಾಂವ ಗ್ರಾಮದ ಅನೀಲ ತಂದೆ ವಾಲೂ ರಾಠೋಡ ರವರುಗಳು ಕೂಡಿ ಬಸವಕಲ್ಯಾಣ ತಾಲೂಕಿನ ಚಿಕ್ಕನಾಗಾಂವ ಗ್ರಾಮದ ಶಿವಾರದಲ್ಲಿನ ಒಂದು ಬೆಟ್ಟದ ಅರಣ್ಯ ಪ್ರದೇಶದಿಂದ ಕಡಿದು ಕಳ್ಳತನ ಮಾಡಿಕೊಂಡು ನಮ್ಮ ನಾವದಗಿ ತಾಂಡಾದ ಮಾರ್ಗವಾಗಿ ಬರುತ್ತಿರುವಾಗ ನನ್ನ ಜೊತೆ ಇದ್ದ ಅವಿನಾಶ ರಾಠೊಡ ಹಾಗೂ ಅನೀಲ ರಾಠೊಡ ರವರುಗಳು ನಮ್ಮ ನಾವದಗಿ ತಾಂಡಾದಲ್ಲೆ ಇಳಿದುಕೊಂಡಿರುತ್ತಾರೆ ಮತ್ತು ನಾನು ಸದರಿ ಶ್ರಿಗಂಧ ಮರದ ತುಂಡುಗಳನ್ನು ಪ್ರತಿ ಬಾರಿ ಮಾರಾಟ ಮಾಡುತ್ತಿದ್ದ ಧನ್ನೂರ ತಾಂಡಾದ ಅನೀಲ ತಂದೆ ಸುಭಾಷ ರಾಠೋಡ ಇತನಿಗೆ ಮಾರಾಟ ಮಾಡಲು ತೆಗೆದುಕೊಂಡು ಹೊಗುತ್ತಿದ್ದೆನೆ ಅಂತ ತಿಳಿಸಿದ್ದು, ನಂತರ ಪಿಎಸ್ಐ ರವರು ಸದರಿ ಶ್ರಿಗಂಧದ ಮರದ ತುಂಡುಗಳ ಜಪ್ತಿ ಪಂಚನಾಮೆ ಕುರಿತು ಇಬ್ಬರು ಪಂಚರನ್ನು ಹಾಗೂ ತೂಕ ಮಾಡುವ ವ್ಯಕ್ತಿಯನ್ನು  ಬರಮಾಡಿಕೊಂಡು ಪಂಚರ ಸಮಕ್ಷಮ ಎಲೇಕ್ಟ್ರೀಕ್ ತೂಕದ ಯಂತ್ರದ ಸಹಾಯದಿಂದ ತೂಕ ಮಾಡಿ ನೊಡಲು ಶ್ರಿಗಂಧ ಮರದ ತುಂಡುಗಳು 4 ಕೆ.ಜಿ 940 ಗ್ರಾಂ ನಷ್ಟು ಇದ್ದು ಅ.ಕಿ 28,000/- ರೂ ಇರುತ್ತದೆ, ನಂತರ ಸದರಿ ಆರೋಪಿತನ ಅಂಗ ಝಡ್ತಿ ಮಾಡಿ ನೋಡಲು ಸದರಿಯವನ ಹತ್ತಿರ ಒಂದು ಬಿಳಿ ಬಣ್ಣದ ವಿವೊ ಆಂಡ್ರಾಯಿಡ್ ಮೋಬೈಲ್ ಅ.ಕಿ 4,000/- ರೂ. ನೇದ್ದು ಸಿಕ್ಕಿದ್ದು, ನಂತರ ಸದರಿ ಮೋಬೈಲ್ ಮತ್ತು ಕೃತ್ಯಕ್ಕೆ ಬಳಸಿದ ಮೋಟಾರ ಸೈಕಲ್ ಅ.ಕಿ 20,000/- ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.