ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 01-11-2020

 

ಮನ್ನಳ್ಳಿ ಪೊಲಿಸ್ ಠಾಣೆ ಅಪರಾಧ ಸಂಖ್ಯೆ 41/2020 ಕಲಂ 498(ಎ), 504 ಐಪಿಸಿ ಜೊತೆ 34 ಐಪಿಸಿ :-

 

ದಿನಾಂಕ:31/10/2020 ರಂದು 15:30 ಗಂಟೆಗೆ ಫಿರ್ಯಾದಿ ಲಕ್ಷ್ಮೀ ಗಂಡ ತುಕಾರಾಮ ವಯ||20 ವರ್ಷ ಸಾ||ಕೊಳಾರ (ಕೆ) ಗ್ರಾಮದ  ನಿವಾಸಿ ಇದ್ದು, ಸದರಿಯವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ  ಫಿರ್ಯಾದಿಯ ತವರು ಮನೆ ಕೋಳಾರ್ (ಕೆ) ಇದ್ದು, ಗಂಡನ ಮನೆ ಮನ್ನಳ್ಳಿ ಗ್ರಾಮ ಇರುತ್ತದೆ. ಇವರ ಮದುವೆ ಈ ವರ್ಷ 06 ನೇ ತಿಂಗಳ 29 ನೇ ದಿನಾಂಕರಂದು ಮನ್ನಳ್ಳಿ ಗ್ರಾಮದ ತುಕಾರಾಮ ತಂದೆ ಮಾಣಿಕ ಇವರ ಜೊತೆಗೆ ಸಂಪ್ರದಾಯ ಪ್ರಕಾರ ಕೋಳಾರ (ಕೆ) ಗ್ರಾಮದಲ್ಲಿ  ಮನೆಯ ಮುಂದೆ ನಡೆದಿರುತ್ತದೆ. ಮದುವೆ ಆದ ನಂತರ ಫಿರ್ಯಾದಿ ಗಂಡ ಮತ್ತು ಗಂಡನ ಮನೆಯವರಾದ ಗೋಪಾಲ, ಮಹೇಶ, ವೆಂಕಮ್ಮಾ, ಅತ್ತೆಯಾದ ನಾಗಮ್ಮಾ , ನವೀನ್ ಇವರೆಲ್ಲರೂ ಕೂಡಿ   ಮದುವೆ ಆದ ಕೆಲವು ದಿವಸ ಸರಿಯಾಗಿ ಇಟ್ಟುಕೊಂಡು ನಂತರ ಅವರೆಲ್ಲರು ಕೂಡಿ ಫಿರ್ಯಾದಿಗೆ ಅವಾಚ್ಯವಾಗಿ ಬೈಯುವುದು ಮತ್ತು  ನೀನು ನೊಡಲು ಸರಿಯಾಗಿಲ್ಲಾ ನಿನಗೆ ಮನೆಯ ಕೆಲಸ ಮಾಡಲು ಬರುವುದಿಲ್ಲಾ ಮತ್ತು ನಾವು ಹೇಳಿದ ಮಾತು ಕೇಳುವುದಿಲ್ಲಾ ಅಂತಾ ಮಾನಸಿಕ ಕಿರುಕುಳ ಕೊಡಲು ಪ್ರಾರಂಭಿಸಿರುತ್ತಾರೆ. ಇದರ ಬಗ್ಗೆ ಫಿರ್ಯಾದಿಯು ತನ್ನ ತಾಯಿ ತಂದೆಯವರಿಗೆ ತಿಳಿಸಿದಾಗ ಅವರು ಗ್ರಾಮದ ನಾಲ್ಕೈದು ಜನರಿಗೆ ತನ್ನ ಗಂಡನ  ಮನೆಗೆ ಕರೆದುಕೊಂಡು ಬಂದು ನನ್ನ ಗಂಡ ಹಾಗೂ ನನ್ನ ಗಂಡನ ಮನೆಯವರಿಗೆ ಇವರೆಲ್ಲರಿಗೆ ತಿಳುವಳಿಕೆ ಹೇಳಿ ನನ್ನ ಮಗಳಿಗೆ ಕಿರುಕುಳ ಕೊಡಬೇಡಿರಿ ಸರಿಯಾಗಿ ಇಟ್ಟುಕೊಳ್ಳಿರಿ ಅಂತಾ ತಿಳುವಳಿಕೆ  ಹೇಳಿ ಹೋಗಿರುತ್ತಾರೆ. ಆದರೂ ಸಹ ಅವರು ಕೇಳದೆ ವಿನಾಃ ಕಾರಣ ದಿನಾಲು ನನಗೆ ಕಿರುಕುಳ ಕೊಡುವುದು ಬಿಡಲಿಲ್ಲಾ.  ದಿನಾಂಕ:27/10/2020 ರಂದು ಫಿರ್ಯಾದಿಯು ಮನೆಯಲ್ಲಿದ್ದಾಗ ಮುಂಜಾನೆ 0800 ಗಂಟೆಯ ಸುಮಾರಿಗೆ ಫೀರ್ಯಾದಿಗೆ ಗಂಡ ತುಕಾರಾಮ, ಮೈದುನನಾದ ಗೋಪಾಲ, ಮಹೇಶ , ವೆಂಕಮ್ಮಾ, ಅತ್ತೆ ನಾಗಮ್ಮಾ, ನವೀನ್ ಎಲ್ಲರೂ ಕೂಡಿ    ಅವಾಚ್ಯ ಶಬ್ದಗಳಿಂದ ಬೈಯ್ದು, ಮನೆಯಿಂದ ಹೊರಗೆ ಹಾಕಿರುತ್ತಾರೆ.  ಈ ಮೇಲೆ ನಮೂದು ಮಾಡಿದ ಜನರು ವಿನಾಃ ಕಾರಣ ಅವಾಚ್ಯ ಶಬ್ದಗಳಿಂದ ಬೈಯ್ದು ಮಾನಸಿಕ ಕಿರುಕುಳ ಕೊಟ್ಟವರ ವಿರುದ್ದ ಕಾನೂನು ಕ್ರಮ ಕೈಕೊಂಡು ನನಗೆ ನ್ಯಾಯ ಒದಗಿಸಿ ಕೊಡಬೇಕಾಗಿ ವಿನಂತಿ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.