ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 01-09-2020

 

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 55/2020, ಕಲಂ. 279, 338 ಐಪಿಸಿ :-

ದಿನಾಂಕ 31-08-2020 ರಂದು ಫಿರ್ಯಾದಿ ಶಿವಕುಮಾರ ತಂದೆ ವೈಜಿನಾಥ ಸ್ವಾಮಿ ವಯ: 26 ವರ್ಷ, ಜಾತಿ: ಸ್ವಾಮಿ, ಸಾ: ಕುತ್ತಾಬಾದ, ತಾ: ಬೀದರ ರವರು ತನ್ನ ಖಾಸಗಿ ಕೆಲಸ ಕುರಿತು ಕಾರ್ ನಂ. ಕೆಎ-32/ಪಿ-5574 ನೇದನ್ನು ಚಲಾಯಿಸಿಕೊಂಡು ಬೀದರದಿಂದ ಬಸವಕಲ್ಯಾಣಕ್ಕೆ ಹೋಗುವಾಗ ರಾ.ಹೆ ನಂ. 65 ರ ಮೇಲೆ ಹಣಮಂತವಾಡಿ ಗ್ರಾಮದ ಹತ್ತಿರ ಹೋದಾಗ ಎದುರುಗಡೆ ರೋಡಿನ ಮೇಲೆ ದನಗಳು ಹೋಗುತ್ತಿದ್ದರಿಂದ ಕಾರನ್ನು ಎಡಗಡೆ ಇಂಡಿಕೇಟರ್ ಹಾಕಿ ನಿಧಾನವಾಗಿ ಎಡಗಡೆ ತೆಗೆದುಕೊಳ್ಳುತ್ತಿರುವಾಗ ಹಿಂದೆ ಮೋಟರ ಸೈಕಲ್ ನಂ. ಕೆಎ-26-ಜೆ-2384 ನೇದರ ಚಾಲಕನಾದ ವಿಜಯಕುಮಾರ ತಂದೆ ರಾಮಶೆಟ್ಟಿ ಸೂರಳ್ಳೆ ವಯ: 45 ವರ್ಷ, ಸಾ: ಅಣದೂರ ಇತನು ಕೂಡ ಎಡಗಡೆ ಇಂಡಿಕೇಟರ ಹಾಕಿ ತನ್ನ ವಾಹನವನ್ನು ನಿಧಾನವಾಗಿ ಎಡಗಡೆ ತೆಗೆದುಕಳ್ಳುತ್ತಿರುವಾಗ ಹಿಂದಿನಿಂದ ಅಂದರೆ ಹುಮನಾಬಾದ ಕಡೆಯಿಂದ ಲಾರಿ ನಂ. ಟಿ.ಎಸ್-13/ಯು.ಸಿ-1430 ನೇದರ ಚಾಲಕನಾದ ಆರೋಪಿ ರಾಜಶೆಖರ ತಂದೆ ಅರ್ಜುನ ಉಡಬಾಳಕರ್ ವಯ: 36 ವರ್ಷ, ಸಾ: ಹಿಪ್ಪರ್ಗಾ ತಾ: ಚಿಟಗುಪ್ಪಾ ಇತನು ತನ್ನ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಕಾರ್ ಹಿಂದೆ ಬರುತ್ತಿದ್ದ ಮೋಟರ ಸೈಕಲಿಗೆ ಡಿಕ್ಕಿ ಮಾಡಿ ಫಿರ್ಯಾದಿಯವರ ಕಾರಿನ ಹಿಂದೆ ಡಿಕ್ಕಿ ಮಾಡಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯವರ ಕಾರಿನ ಹಿಂದಿನ ಭಾಗ ಜಖಂಗೊಂಡಿರುತ್ತದೆ, ನಂತರ ಮೋಟರ  ಸೈಕಲ್ ಚಾಲಕನಿಗೆ ನೋಡಲು ಮೋಟರ ಸೈಕಲ್ ಸಮೇತ ಲಾರಿ ಕೆಳಗೆ ಸಿಕ್ಕಿ ಬಿದ್ದಿದ್ದು ಆತನಿಗೆ ಜನರ ಸಹಾಯದಿಂದ ಹೊರಗಡೆ ತೆಗೆದು ನೋಡಲು ಆತನ ಬಲಗೈ ಪೂರ್ತಿ ಜಜ್ಜಿದಂತೆ ಭಾರಿ ರಕ್ತಗಾಯ, ಎಡಗಾಲಿಗೆ ಭಾರಿ ರಕ್ತಗಾಯ, ಬಲಗಾಲು ಪಾದದ ಹತ್ತಿರ ಭಾರಿ ರಕ್ತಗಾಯ, ಬಲಗಾಲು ತೊಡೆಗೆ, ಬಲಗಡೆ ಹೊಟ್ಟೆಗೆ, ಮುಖಕ್ಕೆ ತರಚಿದ ಗಾಯಗಳಾಗಿರುತ್ತದೆ, ನಂತರ ಗಾಯಾಳು ವಿಜಯಕುಮಾರ ಈತನಿಗೆ 108 ಅಂಬುಲೆನ್ಸದಲ್ಲಿ ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.